ಸಂತ ಮೇರಿಸ್ ಪಿ.ಯು.ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ: ಪ್ರಮಾಣಿಕ,ಸರಳ ತ್ಯಾಗಮಯಿ ನಾಯಕರುಗಳಾಗಿ

JANANUDI NETWORK

 

ಸಂತ ಮೇರಿಸ್ ಪಿ.ಯು.ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ: ಪ್ರಮಾಣಿಕ,ಸರಳ ತ್ಯಾಗಮಯಿ ನಾಯಕರುಗಳಾಗಿ


ಕುಂದಾಪುರ,ಜು.6 : ‘ನೀಜವಾದ ನಾಯಕರೆಂದರೆ ಲಾಲ್ ಬಾಹೂದ್ದುರ್ ಶಾಸ್ತ್ರಿ, ಮಹಾತ್ಮ ಗಾಂಧಿಜಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಅವರುಗಳು ತನಗಾಗಿ ಎನೊಂದು ಗಳಿಸಿಕೊಳ್ಳದೆ, ದೇಶದ ಹಿತಕ್ಕಾಗಿ ಜೀವಿಸಿದವರು, ಸರಳವಾಗಿ, ಪ್ರಮಾಣಿಕವಾಗಿ, ತ್ಯಾಗಮಯ ಜೀವನವನ್ನು ನಡೆಸಿ ಕೀರ್ತಿಯ ಉತ್ತುಂಗಕ್ಕೆ ಎರಿದವರು ನೀವುಗಳು ಅವರಂತೆ ನಡೆದು ಉತ್ತಮ ನಾಯಕರಾಗಿರಿ’ ಎಂದು ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಹೇಳಿದರು. ಅವರು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಂಸತ್ತುನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ|ಸ್ಟ್ಯಾನಿ ತಾವ್ರೊ ಇವರು ಕಾಲೇಜು ವಿದ್ಯಾರ್ಥಿ ಮಂಡಳಿಯಲ್ಲಿ ಆರಿಸಿ ಬಂದವರಿಗೆ ಪ್ರಮಾಣ ವಚನ ಬೋಧಿಸಿ, ‘ವಿದ್ಯಾರ್ಥಿಗಳು ಉತ್ತಮ ನಾಯಕತ್ವನ್ನು ಬೆಳೆಸಿಕೊಂಡು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡು, ಕಾಲೇಜು ಆರಂಭದ ಮೊದಲ ದಿನದಿಂದಲೇ ಪಾಠಗಳಗನ್ನು ಒದಿ ಮನದಟ್ಟು ಮಾಡಿಕೊಳ್ಳಬೇಕು’ ಮಾಡಬೇಕೆಂದು ಹಿತವಚನ ನೀಡಿದರು. ಕಾಲೇಜು ಪ್ರಿನ್ಸಿಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಶುಭಾಷಯ ಕೋರಿದರು.
ಕಾಲೇಜು ನಾಯಕನಾಗಿ ಜೊಸ್ವಾ ರಾಯನ್ ಡಿಆಲ್ಮೇಡಾ, ಕಾರ್ಯದರ್ಶಿಯಾಗಿ ನೆಲ್ರಿಯಾ ಕ್ರಾಸ್ಟೊ ಮತ್ತು ಶಂಸತ್ತಿನಲ್ಲಿ ಆರಿಸಿ ಬಂದವರು ಪ್ರಮಾಣ ವಚನ ಸ್ವೀಕರಿಸಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಮಂಜುಳ ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಪ್ರಾಧ್ಯಪಕಿ ಉಷಾ ಕೋಟಿಯಾನ್ ಸಾಗತಿಸಿದರು. ಕಾಲೇಜು ವಿಧ್ಯಾರ್ಥಿ ಸುಪ್ರೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಪ್ರಾಧ್ಯಪಕಿ ನಿಶಾ ಸುವಾರಿಸ್ ಧನ್ಯವಾಗಳನ್ನು ಅರ್ಪಿಸಿದರು.