ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ

JANANUDI NETWORK

ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ

ಕುಂದಾಪುರ ಜು.3 : ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾ 2019-20 ನೇ ಸಾಲಿನ ಮಂತ್ರಿ ಮಂಡಲದ ಉದ್ಘಾಟನೆಯು ಶಾಲಾ ಭವನದಲ್ಲಿ ಜರುಗಿತು

            ಪ್ರಜಾಪ್ರಭುತ್ವ ಕಲ್ಪನೆಯನ್ನು ಮೂಡಿಸಲು ಚುನಾವಣೆ ನಡೆಸಿ ವಿದ್ಯಾರ್ಥಿಗಳಿಂದ ಆಯ್ಕೆಯಾದ ನಾಯಕಿ ರಿಯಾ ರೋಶನಿ ಉಪನಾಯಕ ಸುಹಾನ್ ಡೇಸಾ ಮತ್ತು  ಇತರ ಮಂತ್ರಿಗಳಿಗೆ ಪ್ರತಿಜ್ಞಾ ಹಾಗೂ ಅಧಿಕಾರ ಸ್ವೀಕರಿಸುವ ಪ್ರಕ್ರಿಯೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಅತೀ ವಂದನೀಯ ಫಾ. ಸ್ಟ್ಯಾನಿ ತಾವ್ರೊ ನಡೇಸಿಕೊಟ್ಟರು.

            ಮುಖೋಪಾಧ್ಯಾಯಿನಿಯವರಾದ ಸಿಸ್ಟರ್ ತೆರೆಜ್ ಶಾಂತಿ ಎ.ಸಿ ರವರು ಪ್ರತಿಜ್ಞಾವಿಧಿಯನ್ನು ಭೋಧಿಸಿದರು . ಮುಖ್ಯ ಅತಿಥಿಯಾಗಿ ಆಗಮಿಸಿದ ರಾಘವೆಂದ್ರ ಚರಣ್ ನಾವಡರವರು ಮಂತ್ರಿ ಮಂಡಲದ ಪ್ರಾಮುಖ್ಯತೆ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಹೇವಿನ್ ಕೋತಾ ಕಾರ್ಯಕ್ರಮವನ್ನು ನಿರೂಪಿಸಿದರು.