ವರದಿ:ಲೂವಿಸ್ ಡಿಸೋಜಾ
ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ವರದಿಕರ್ತರಿಗೆ, ಖಜಾಂಚಿಗಳಿಗೆ ಶಿಬಿರ ಕಾರ್ಯಕ್ರಮ -ಒಗ್ಗಟ್ಟಿನ ಕೆಲಸದಲ್ಲಿ ಯಶ್ಸಸು ದೊರಕುತ್ತದೆ -ಕಥೊಲಿಕ್ ಸಭಾ ಮಂಗಳೂರು ಅಧ್ಯಕ್ಷ ರೋಲ್ಪಿ ಡಿಕೋಸ್ತಾ
ಉಡುಪಿ, ಜೂ.23: ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಉಡುಪಿ ಕೇಂದ್ರದ ಎಲ್ಲಾ ಘಟಕಗಳ ಖಜಾಂಚಿಗಳ, ಕಥೊಲಿಕ್ ಸಭಾ ಪತ್ರ ಆಮ್ಚೊ ಸಂದೇಶ್ ವರದಿಗಾರರಿಗೆ ಮತ್ತು ಪ್ರಚಾರ ಸಮಿತಿಯ ಸದಸ್ಯರಿಗೆ ತರಬೇತಿ ಶಿಬಿರ ಕಾರ್ಯಾಗಾರ ನೆಡೆಯಿತು. ಹಾಗೂ ಆರೋಗ್ಯ ಕಾರ್ಡ್ ತರಬೇತಿಯನ್ನು ಉಡುಪಿ ಕಥೊಲಿಕ್ ಸಭಾ ಕಚೇರಿ ಸಭಾ ಭವನದಲ್ಲಿ ನೆಡೆಯಿತು.
ಕಾರ್ಯಕ್ರಮವನ್ನುಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ರೋಲ್ಪಿ ಡಿಕೋಸ್ತಾ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಒಗಟ್ಟಿನ ಕೆಅಸದಲ್ಲಿ ಯಶಸು ದೊರಕುತ್ತದೆ ಎಂದು ಶುಭ ಹಾರೈಸಿದರು. ಖಜಾಂಚಿಗಳಿಗೆ ಉಡುಪಿಯ ಲೆಕ್ಕ ಪರಿಶೋಧಕ ಪ್ರೀತೇಶ್ ಡೆಸಾ ತರಬೇತಿಯನ್ನು ನೀಡಿದರು. ಇವರ ಪರಿಚಯವನ್ನು ಮಾಜಿ ಕಥೊಲಿಕ್ ಸಭಾ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ನೀಡಿದರು. ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿಯನ್ನು ವಿವಿಯನ್ ಮತ್ತು ವೆರೋನಿಕಾ ಕರ್ನೆಲೀಯೊ ನೀಡಿದರು. ವರದಿಗಾರರಿಗೆ ವರದಿ ಬರೆಯುವ ಬಗ್ಗೆ ವರದಿ ಕಳುಹಿಸುವ ಬಗ್ಗೆ ಆಮ್ಚೊ ಸಂದೇಶ್ ಸಂಪಾದಕರಾದ ವಿಲ್ಫ್ರೆಡ್ ಲೋಬೊ ಮಾಹಿತಿ ನೀಡಿದರು, ವಾಲೇರಿಯನ್ ಫೆರ್ನಾಂಡಿಸ್ ಧನ್ವವಾದಗಳನ್ನು ಅರ್ಪಿಸಿದರು ಮತ್ತು ಡಿಜಿಟಲ್ ಮಾಧ್ಯಮದ ಬಗ್ಗೆ ತಿಳುವಳಿಕೆಯನ್ನು ಮ್ಯಾಂಗಲೊರ್ ಡಾಟ್ ಕಾಮ್ ವರದಿಗಾರ್ ಮೈಕಲ್ ರೊಡ್ರಿಗಸ್ ಮಾಹಿತಿ ನೀಡಿದರು. ಫ್ಲಾಯ್ವನ್ ಡಿ ಸೋಜಾ ಧನ್ಯವಾದಗಳನ್ನು ನೀಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಅಧ್ಯಕ್ಷ ಆಲ್ವಿನ್ ಕ್ವಾರ್ಡಸ್ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ ಧನ್ಯವಾದಗಳನ್ನು ನೀಡಿದರು. ಕಾರ್ಯಕ್ರಮವನ್ನು ಅನಿತಾ ಡಿಸೋಜಾ ನಿರೂಪಿಸಿದರು. ವೇದಿಕೆಯಲ್ಲಿ ಪ್ರಚಾರ ಸಮಿತಿಯ ಸಂಚಾಲಕರಾದ ಲೂವಿಸ್ ಡಿಸೋಜಾ, ನಿಯೋಜಿತ ಅಧ್ಯಕ್ಷ ರೊರ್ಬಟ್ ಮಿನೇಜೆಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಪ್ರಚಾರ ಸಮಿತಿಯ ಸಂಚಾಲಕರಾದ ಲೂವಿಸ್ ಡಿಸೋಜಾ ಉಪಸ್ಥಿತರಿದ್ದರು.