ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ

ಕೋಲಾರ.ಜೂ.12: ದಲಿತ ಮಾನವ ಹಕ್ಕುಗಳ ವೇದಿಕೆ ಕರ್ನಾಟಕ ಇವರ ವತಿಯಿಂದ ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೋಲಾರ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸಂಚಾಲಕ ಮೇಡಿಹಾಳ ಎಂ.ಚಂದ್ರಶೇಖರ್ ಮಾತನಾಡಿ ದೇಶದಲ್ಲಿ ಶೇ. 70 ರಷ್ಟು ಮಹಿಳೆಯರು ಕೂಲಿಯಿಂದ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿಯೂ ಆರೋಗ್ಯ ವಿಷಯ ಬಂದಾಗ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಭಿತರಾಗಿದ್ದಾರೆ. ವಿಶೇಷವಾಗಿ ತಾಯಿ ಮಗು ಹಾರೈಕೆ ವಿಷಯ ಬಂದಾಗ ಸ್ಥಳೀಯವಾಗಿರುವ ಈ ಕೇಂದ್ರಗಳಲ್ಲಿ ಯಾವುದೇ ಪಿ.ಹೆಚ್.ಸಿ, ಸಿ.ಹೆಚ್.ಸಿಗಳ ಮೇಲೆ ಅವಲಂಭಿತರಾಗಿದ್ದಾರೆ. ಆದರೆ ದುರಾದೃಷ್ಟಕರ ಸಂಗತಿ ಎಂದರೆ ಈ ಕೇಂದ್ರಗಳಲ್ಲಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಮೇಲೆ ಅವಲಂಭಿತರಾಗಿದ್ದಾರೆ. ಇದರ ದೂರ 15 ರಿಂದ 20 ಕಿ.ಮೀ ಇರುತ್ತದೆ. ವಾಹನ ಸಂಪರ್ಕ ಕಡಿಮೆ ಇರುತ್ತದೆ. 108 ಅಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ಹಣದ ಆಮೀಷ ಒಡ್ಡುತ್ತಾರೆ. ಗರ್ಭೀಣಿಯರಿಗೆ ತಡವಾಗಿ ಚಿಕಿತ್ಸೆ ದೊರೆಯುತ್ತದೆ. ಸಾಮಾನ್ಯ ಹೆರಿಗೆ ಆಗುವಂತಿದ್ದರೂ ಸಹ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಿದ್ದು, ಖಾಸಗಿ ಆಸ್ಪತ್ರೆಗಳ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಯೋಗ ಮಾಡುತ್ತಿರುವುದರಿಂದ ತಾಯಿ ಮಗುವಿನ ಸಾವು ನೋವುಗಳು ಹೆಚ್ಚಾಗಿ ಸಂಭವಿಸುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣದ ಖರ್ಚು ಮಾಡಬೇಕಾಗುತ್ತದೆ. ಇದನ್ನು ಆರೋಗ್ಯ ಇಲಾಖೆ ಗಮನ ಹರಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ನಾಗನಾಳ ಶಂಕರ್, ಅಬ್ಬಣಿ ವೆಂಕಟರಾಜಮ್ಮ, ಮೂರಾಂಡಹಳ್ಳಿ ಚಿಕ್ಕರೆಡ್ಡಪ್ಪ, ನೆರ್ನಹಳ್ಳಿ ನಾಗರಾಜ್, ಉರಿಗಿಲಿ ಆನಂದ್, ಕಲ್ಲೂರು ಮುನಿಆಂಜಿನಪ್ಪ, ರಾಂಪುರ ವೆಂಕಟೇಶ್, ಶಾಂತಕುಮಾರ್, ಜನ್ನಘಟ್ಟ ನಾರಾಯಣಪ್ಪ, ಕೆ.ಜಿ.ಎಫ್ ಕಣ್ಣಪ್ಪ, ವಕ್ಕಲೇರಿ ಅವಿನಾಶ್ ರವರು ಬೀದಿ ನಾಟಕ ಮತ್ತು ಗೀತೆಗಳ ಮೂಲಕ ಜಾಗೃತಿಯನ್ನು ಮೂಡಿಸಿದರು.