ಜನನುಡಿ ಸುದ್ದಿ ಜಾಲ ಎರ್ಪಡಿಸಿದ ಸ್ಪರ್ಧೆಯಲ್ಲಿ – ತ್ರಾಸಿ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ- ತ್ರಾಸಿಯಲ್ಲಿ ಬಹುಮಾನ ವಿತರಣೆ

JANANUDI NETWORK

ಜನನುಡಿ ಸುದ್ದಿ ಜಾಲ ಎರ್ಪಡಿಸಿದ ಸ್ಪರ್ಧೆಯಲ್ಲಿ – ತ್ರಾಸಿ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ- ತ್ರಾಸಿಯಲ್ಲಿ ಬಹುಮಾನ ವಿತರಣೆ


ಕುಂದಾಪುರ, ಜೂ.9: ಜನನುಡಿ ಅಂತರ ಜಾಲಾ ಸುದ್ದಿ ಸಂಸ್ಥೆ ಇವರು ಆಯೋಜಿಸಿದ ಗೋದಲಿ 18-19 ರ ಸ್ಪರ್ಧೆಯಲ್ಲಿ ತ್ರಾಸಿ ಭಾರತೀಯ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ ಪಡೆದಿತ್ತು, ಅದರ ವಿತರಣೆಯನ್ನು ತ್ರಾಸಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ಲುವಿಸ್ ಮತ್ತು ಸ್ಪರ್ಧೆಯ ಮುಖ್ಯ ಪ್ರಾಯೋಜಕರಾದ ವಸಂತ ಬೇಕರಿಯ ಮ್ಹಾಲಕರಾದ ಶ್ರೀಷನ್ ಕೆ.ಪಿ. ಇವರು ತ್ರಾಸಿ ಚರ್ಚ್ ವಠಾರದಲ್ಲಿ ಜೂನ್ 9 ರಂದು ನೆಡೆದ ಸಭೆಯಲ್ಲಿ ಟ್ರೋಪಿ, ಅಹರ್ತಾ ಪತ್ರ ಮತ್ತು ನಗದನ್ನು ನೀಡಿ ಐ.ಸಿ.ವೈ.ಎಮ್ ಅಧ್ಯಕ್ಷ ಲೊಯ್‍ಸ್ಟನ್ ಕ್ರಾಸ್ತಾ  ಮತ್ತು ಸದಸ್ಯರಿಗೆ ಪುರ್ಸಕರಿಸಿದರು.
ಸ್ಪರ್ಧೆಯಲ್ಲಿ ಬೈಂದೂರು ಐ.ಸಿ. ವೈ.ಎಮ್ ದ್ವೀತಿಯ ಸ್ಥಾನ, ಕೋಟಾ ಚರ್ಚ್ ಫ್ರೆಂಡ್ಸ್ ತ್ರತೀಯ ಸ್ಥಾನ ಮತ್ತು ಕುಂದಾಪುರ ಐ.ಸಿ.ವೈ.ಎಮ್ ಪ್ರಥಮ ಸಮಾದಾನಕರ, ಪಿಯುಸ್ ನಗರ್ ಐ.ಸಿ. ವೈ.ಎಮ್ ದ್ವೀತಿಯ ಸಮಾದಾನಕರ ಬಹುಮಾನಗಳನ್ನು ಪಡೆದವು.
ತ್ರಾಸಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ಲುವಿಸ್ ‘ಇಂತಹ ಸ್ಪರ್ಧೆಗಳಿಂದ ಯುವ ಸಂಚಾಲನಕ್ಕೆ ಪ್ರೇರಣೆ ದೊರಕುತ್ತದೆ, ಸ್ವಂತ ಪ್ರೇರಣೆಯಿಂದ ಜನನುಡಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಇವರಿಂದ ಅರಂಭಿಸಲ್ಪಟ್ಟ ಇಂತಹ ಸೇವೆ ಮುಂದೆಯು ಮುಂದುವರಿಸಿಕೊಂಡು ಹೋಗಲಿಕ್ಕೆ ಅವರಿಗೆ ಪ್ರಾಯೋಜಕರ ಸಹಾಯ ಹಸ್ತ ದೊರಕಲಿ, ಹಾಗೇ ದೇವರು ಇಂತಹ ಸೇವೆಯ ಮೇಲೆ ಆಶಿರ್ವದಿಸಲಿ’ ಎಂದು ಹಾರೈಸಿ ಮುಖ್ಯ ಪ್ರಾಯೋಜಕರಾದ ಶ್ರಿಷನ್ ಇವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ರೋಜರಿ ಚರ್ಚಿನ ಅ|ವಂ|ಸ್ಟ್ಯಾನಿ ತಾವ್ರೊ ಈ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದರು. ಮಾಜಿ ಐ.ಸಿ.ವೈ.ಎಮ್. ಅಧ್ಯಕ್ಷ ಎಲ್ಡ್ರಿನ್ ಡಿಸೋಜಾ ಉಪಸ್ಥಿತರಿದ್ದರು.
ಜನನುಡಿ ಸಂಸ್ಥೆಯ ನಿರ್ದೇಶಕ ಸಂಪಾದಕರಾದ ಬರ್ನಾಡ್ ಡಿಕೋಸ್ತಾ, ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧೆಯ ಸಂಘಟಕಿ ವಿನಯಾ ಡಿಕೋಸ್ತಾ ಇತರ ಪ್ರಾಯೋಜಕರಾದ, ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ.ಲಿ., ಸಪ್ತಗಿರಿ ಸೂಪರ್ ಮಾರ್ಕೆಟ್, ವಿನೋದ್ ಕ್ರಾಸ್ಟೊ (ಕ್ರಾಸ್ಟೊ ಇಜಿನಿಯರಿಂಗ್), ಎಸ್.ಕೆ. ಟ್ಯಾಟು. ಸುಧೀರ್, ದಿ.ಪೀಟರ್ ಆಲ್ಮೇಡಾ ಇವರ ಮಕ್ಕಳ ಸಹಕಾರ ಸ್ಮರಿಸಿ ವಂದಿಸಿದರು.