ಕುಂದಾಪುರ: ದೇವ ಸ್ತುತಿಯಲ್ಲಿ ಭಾಗವಹಿಸುವುರಿಗೆ ತರಬೇತಿ ಕಾರ್ಯಗಾರ

ಕುಂದಾಪುರ: ದೇವ ಸ್ತುತಿಯಲ್ಲಿ ಭಾಗವಹಿಸುವುರಿಗೆ ತರಬೇತಿ ಕಾರ್ಯಗಾರ


ಕುಂದಾಪುರ, ಮೆ. 20: ‘ದೇವ ಸ್ತುತಿ ಅಂದರೆ ವಿಶ್ವಾಸಿಗಳು ಒಂದು ಕುಟುಂಬದಂತೆ ಒಂದುಗೂಡಿ ದೇವರನ್ನು ಆರಾಧನೆ ಮಾಡುವುದು. ಪವಿತ್ರ ಬಲಿದಾನವನ್ನು ಅರ್ಪಿಸುವುದು, ಕೇವಲ ಯಾಜಕರಲ್ಲಾ, ಭಕ್ತಾಧಿಗಳೆಲ್ಲ ಸೇರಿ ದೇವರಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿಸುವುದು’ ಎಂದು ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾದ್ಯಾಪಕ ವಂ|ಬೊನಿಫಾಸ್ ಪಿಂಟೊ ಅವರು ಕುಂದಾಪುರ ಚರ್ಚ್ ವ್ಯಾಪ್ತಿಯಲ್ಲಿ ಪವಿತ್ರ ಬಲಿದಾನ ಅರ್ಪಿಸುವಾಗ ದೇವಸ್ತುತಿಯಲ್ಲಿ ಭಾಗವಹಿಸುವರಿಗಾಗಿ ಚರ್ಚ್ ಸಭಾ ಭವನದಲ್ಲಿ ಏರ್ಪಡಿಸಿದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ತಿಳಿಸಿದರು.
‘ದೇವಸ್ತುತಿಯಲ್ಲಿ ಭಾಗವಹಿಸುವರು, ದೇವರ ವಾಕ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಕೇಳುವರಿಗೆ ಮನದಟ್ಟು ಆಗುವಂತೆ ಪ್ರಸ್ತೂತ ಪಡಿಸಬೇಕು, ಕೀರ್ತನೆಗಳನ್ನು ಲಯ ಬದ್ದವಾಗಿ ಹಾಡ ಬೇಕು, ದೇವ ಸ್ತುತಿಯಲ್ಲಿ ಭಾಗವಹಿಸುವರು ಕ್ರಮ ವಿಧಾನಗಳನ್ನು ಪಾಲಿಸ ಬೇಕು, ಅಶ್ಲೀಲವದ ವಸ್ತ್ರದಾರಣೆ ಮಾಡದೆ, ಗೌರವಯುಕ್ತ ಶುದ್ದ ಬಟ್ಟೆಗಳನ್ನು ತೊಡಗ ಬೇಕು’ ಎಂದು ಅವರು ಹಲವಾರು ಕ್ರಮ ವಿಧಾನಗಳನ್ನು ಅವರು ಪ್ರಾತ್ಯಕ್ಷಿಕೆ ಮೂಲಕ ತಿಳಿಯ ಪಡಿಸಿದರು. ತರಬೇತಿಗೂ ಮುನ್ನಾ ಅವರು, ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ| ರೋಯ್ ಲೋಬೊ ಇವರ ಜೊತೆ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಸ್ತಾವಿಕ ಮತುಗಳನ್ನಾಡಿ ಸ್ವಾಗತಿಸಿದರು, ಈ ಕಾರ್ಯಗಾರವನ್ನು ಎರ್ಪಡಿಸಿದ ದೇವಸ್ತುತಿ ಆಯೋಗದ ಸಂಚಾಲಕಿ ಸಿಸ್ಟರ್ ವೈಲೆಟ್ ತಾವ್ರೊ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್ ಉಪಸ್ಥಿರಿದ್ದರು, ಫಾ|ರೋಯ್ ಲೋಬೊ ಧನ್ಯವಾದಗಳನ್ನು ಅರ್ಪಿಸಿದರು.