ಕೋಲಾರ :ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕು- ರೈತ ಸಂಘ

ವರದಿ: ಷಬ್ಬೀರ್ ಅಹ್ಮದ್

ಕೋಲಾರ :ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕು- ರೈತ ಸಂಘ

ಕೋಲಾರ,15, ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕು. ಮತ್ತು ಖಾಸಗಿ ಶಾಲೆಗಳ ಡೊಣೇಷನ್ ಹಾವಳಿಗೆ ಕಡಿವಾಣ ಹಾಕಿ ಬಟ್ಟೆ ಮತ್ತು ಪುಸ್ತಕದಿಂದ ಹಿಡಿದು ಶೂ ವರೆಗೂ ಪೋಷಕರ ಬಳಿ ಹಗಲು ದರೋಡೆ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರದ ಆರ್.ಟಿ.ಇ ಆದೇಶವನ್ನು ಎಲ್ಲಾ ಶಾಲೆಗಳಿಗೆ ಅನ್ವಯವಾಗುವ ರೀತಿ ಆದೇಶ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಉಪನಿರ್ದೇಶಕರ ಕಛೇರಿ ಮುಂದೆ ಕೋಳಿಗಳು ಮತ್ತು ಬಟ್ಟೆ ಶೂಗಳÀ ಸಮೇತ ಹೋರಾಟ ಮಾಡಿ ಮನವಿ ನೀಡಿ, ಆಗ್ರಹಿಸಲಾಯಿತು.
ಹೋರಾಟ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಕ್ಕೆ ಶಿಕ್ಷಣವನ್ನು ಉಳಿಸಬೇಕು. ಶಿಕ್ಷಣದಿಂದ ಯಾವುದೇ ಒಬ್ಬ ಪ್ರಜೆಯು ವಂಚಿತವಾಗಬಾರದೆಂಬ ಉದ್ದೇಶ ವಿದ್ದರೆ ಹೊಸ ಖಾಸಗಿ ಶಾಲೆಗಳ ಅನುಮತಿಯನ್ನು ತಡೆ ಹಿಡಿದು ಪ್ರತಿ ಪಂಚಾಯಿತಿಗೊಂದು ಖಾಸಗಿ ಶಾಲೆಯನ್ನು ಸರ್ಕಾರದ ಹಿಡಿತಕ್ಕೆ ಪಡೆದು ಅಭಿವೃದ್ಧಿ ಪಡಿಸಬಹುದು ಅದನ್ನು ಬಿಟ್ಟು ಶಿಕ್ಷಣ ಎಂಬುದು ಇಂದು ಬೀದಿಗಳಲ್ಲಿ ಮಾರಾಟವಾಗುವ ವಸ್ತುವಾಗಿ ಮಾರ್ಪಟ್ಟಿದೆ. ಇಂದು ಶಿಕ್ಷಣ ಕ್ಷೇತ್ರ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿ ಸಿಲುಕಿ ಜನ ಸಾಮಾನ್ಯರ ಬದುಕನ್ನು ಬೀದಿಗೆ ಸರ್ಕಾರಗಳೇ ನೇರವಾಗಿ ತಳ್ಳುತ್ತಿವೆ. ಒಂದು ಕಡೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆಂಗ್ಲಮಾದ್ಯಮವನ್ನು ಜಾರಿ ಮಾಡುತ್ತೇವೆಂದು ಪತ್ರಿಕೆ ಮತ್ತು ಮಾದ್ಯಮಗಳಲ್ಲಿ ಹೇಳಿಕೆ ನೀಡಿ, ಮತ್ತೊಂದು ಕಡೆ ಹಿಂಬಾಗಿಲಿನಿಂದ ಪ್ರತಿಷ್ಠಿತ ಪ್ರಬಲ ರಾಜಕಾರಣಿಗಳೇ ಖಾಸಗಿ ಶಾಲೆಗಳನ್ನು ತೆರೆದು ಸರ್ಕಾರಿ ಶಾಲೆಗಳ ಮರಣ ಶಾಸನ ಮಾಡುವ ಜೊತೆಗೆ ಮದ್ಯಮ ವರ್ಗದ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇತ್ತೀಚೆಗೆ ರೈತ ಸಂಘದ ಕಾರ್ಯಕರ್ತರು ಜನ ಸಾಮಾನ್ಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಲು ಪ್ರಮುಖ ಕಾರಣ ಹುಡಿಕಿಕೊಂಡು ಹೋದಾಗ ಅವರ ಕಣ್ಣಿಗೆ ಗೋಚರಿಸಿದ್ದು, ಇಂದಿನ ದಿನಗಳಲ್ಲಿ ಹದಗೆಟ್ಟಿರುವ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ಭ್ರಷ್ಟಾಚಾರತೆ ಪ್ರಮುಖ ಕಾರಣವಾಗಿ ಇಡೀ ಕುಟುಂಬಗಳೇ ಆತ್ಮ ಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ರವರ ಏಕ ರೂಪದ ಶಿಕ್ಷಣ ಕನಸು ಕನಸಾಗೆ ಉಳಿದಿದೆ. ಅದನ್ನು ಸಕಾರಾತ್ಮಕವಾಗಿ ಜಾರಿಗೊಳಿಸಲು ಸರ್ಕಾರಗಳು ವೈಫಲ್ಯ ಎದ್ದುಕಾಣುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ ಸಿಲುಕಿ ಶಿಕ್ಷಣ ವ್ಯಾಪಾರದ ವಸ್ತುವಾಗಿರುವುದಕ್ಕೆ ಪ್ರಮುಖ ಕಾರಣ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆಯ ನೆಪವೇ ಖಾಸಗಿ ಶಾಲೆಗಳ ದಂದೆಗೆ ಕಾರಣವಾಗಿದೆ. ಇಂದು ಅವನತಿ ಹೊಂದುತ್ತಿರುವ ಸರ್ಕಾರಿ ಶಾಲೆಗಳನ್ನು ಏಕೆ ಅಭಿವೃದ್ಧಿ ಹೊಂದುತ್ತಿಲ್ಲ. ಸರ್ಕಾರಿ ಶಾಲೆ ಹಿಂದುಳಿಯಲು ಕಾರಣವಾದರೂ ಏನು ಎಂಬುದು ಇದುವರೆವಿಗೂ ಸರ್ಕಾರಕ್ಕೆ ಸರ್ಕಾರದ ಸಂಬಳ ತಿನ್ನುತ್ತಿರುವ ಉಪನಿರ್ದೇಶಕರಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲೀ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಸಂಕ್ಷಿಪ್ತ ವರದಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಇಂದು ತಮ್ಮದೇ ಆದಂತಹ ಖಾಸಗಿ ಶಾಲೆಯ ಅನುಮತಿಯನ್ನು ಅವರ ಸಂಬಂಧಿಕರ ಹೆಸರಿನಲ್ಲಿ ನೀಡಿ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಮತ್ತೊಂದಡೆ ಖಾಸಗಿ ಶಾಲೆಗಳ ಡೊಣೇಷನ್ ಹಾವಳಿ ಜೊತೆಗೆ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಮಗುವಿನ ನರ್ಸರಿಗೆ ದಾಖಲು ಮಾಡಲು ಲಕ್ಷ ಲಕ್ಷ ಹಣ ಕೀಳುತ್ತಿದ್ದಾರೆ. ಅದರ ಜೊತೆಗೆ ಹಾಕುವ ಶೂ ಯಿಂದ ಹಿಡಿದು ಬಟ್ಟೆ, ಟೈ, ಪುಸ್ತಕ ವಾಹನ ಬಾಡಿಗೆ ಮತ್ತಿರ ಹಲವು ಸೌಲಭ್ಯಗಳ ಹೆಸರಿನಲ್ಲಿ ಪೋಷಕರನ್ನು ಹಗಲು ದರೋಡೆ ಮಾಡುತ್ತಿದ್ದರು ಯಾವುದೇ ಅಧಿಕಾರಿಯು ಇದುವರೆವಿಗೂ ಸರ್ಕಾರದ ಆದೇಶ ಪಾಲನೆ ಮಾಡಿ ಎಂದು ಆದೇಶ ನೀಡುತ್ತಿಲ್ಲ. ಏಕೆ ಎಂಬುದು ಪೋಷಕರ ಆಕ್ರೋಷದ ಮಾತಾಗಿದೆ. ಜೊತೆಗೆ ಒಂದು ಕಡೆ ಸರ್ಕಾರಿ ಶಾಲೆಗಳನ್ನು ಉಳಿಸುವ ಹೆಸರಿನಲ್ಲಿ ಶಿಕ್ಷಣ ಸಚಿವರು ಹಿಂಬಾಗಲಿನಿಂದ ಗಲ್ಲಿಗೊಂದಂತೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿ ಅವರೇ ಸರ್ಕಾರಿ ಶಾಲೆಗಳ ಮರಣ ಶಾಸನವನ್ನು ಬರೆಯುತ್ತಿದ್ದಾರೆ. ಮಾನ್ಯ ಉಪನಿರ್ದೇಶಕರು ಕೂಡಲೇ ಪೋಷಕರ ಬಳಿ ಹಗಲು ದರೋಡೆ ಮಾಡುತ್ತಿರುವ ಕೆಲವೇ ಕೆಲವು ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮದ ಪ್ರಕಾರ ಜನರಿಗೆ ಕಾಣಿಸುವ ಹಾಗೆ ಶಾಲೆಯ ಸೌಲಭ್ಯಗಳ ಬಗ್ಗೆ ನಾಮ ಫಲಕ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಬಟ್ಟೆ ಮತ್ತಿತರ ವಸ್ತುಗಳನ್ನು ಅವರಿಗೆ ಇಷ್ಟಾ ಬಂದ ಕಡೆ ತೆಗೆದುಕೊಡಲು ಆದೇಶವನ್ನು ನೀಡಬೇಕು ಹಾಗೂ ಗಲ್ಲಿಗೊಂದಂತೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ, ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡವರ ಮಕ್ಕಳನ್ನು ರಕ್ಷಣೆ ಮಾಡಿ, ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿ ನಲಗಿ ಹೋಗುತ್ತಿರುವ ಶಿಕ್ಷಣ ಕ್ಷೇತ್ರವನ್ನು ಉಳಿಸಬೇಕೆಂದು ಆಗ್ರಹ ಮಾಡಿದರು.

ಮನವಿ ಸ್ವೀಕರಿಸಿದ ಉಪನಿರ್ದೇಶಕರು ರತ್ನಯ್ಯ ಮಾತನಾಡಿ ಖಾಸಗಿ ಶಾಲೆಗಳು ಇಂದು ನಮ್ಮ ಹಿಡಿತದಲ್ಲಿ ಇಲ್ಲ. ಜೊತೆಗೆ ಪ್ರಬಲ ರಾಜಕಾರಣಿಗಳ ಒತ್ತಡ ಹಾಗೂ ಸರ್ಕಾರ ಮತ್ತು ಶಿಕ್ಷಣ ಸಚಿವರ ಶಿಕ್ಷಣ ನೀತಿಯು ಇಂದು ಸರ್ಕಾರಿ ಶಾಲೆಗಳ ಅವನಿತಿಗೆ ಕಾರಣವಾಗಿದೆ. ಒಂದು ಕಡೆ ಹೊಸ ಶಾಲೆಗಳಿಗೆ ಅನುಮತಿ ಬೇಡ ಎಂದು ಆದೇಶವನ್ನು ನೀಡುತ್ತಾರೆ. ಅದರ ಬೆನ್ನಲ್ಲೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ ಮಾಡುತ್ತಾರೆ. ಇವರ ಅಗ್ಗಾ ಜಗ್ಗಾಟಕ್ಕೆ ಅಧಿಕಾರಿಗಳು ದಿಕ್ಕುತೋಚದಂತಾಗಿದೆ. ಜೊತೆಗೆ ಖಾಸಗಿ ಶಾಲೆಗಳ ಡೊಣೇಷನ್ ಹಾವಳಿಗೆ ನಿಕರವಾದ ಲಿಖಿತ ರೂಪದ ಮುಖಾಂತರ ಯಾರೂ ದೂರು ನೀಡುತ್ತಿಲ್ಲ. ಆದರೂ ಸಹ ನಾವು ಶಿಕ್ಷಣ ನೀತಿಯ ಪ್ರಕಾರ ನಾಮ ಫಲಕ ಅಳವಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ಪೋಷಕರಿಗೆ ಬಟ್ಟೆ ಹಾಗೂ ಮತ್ತಿತರ ಮಕ್ಕಳ ವಿಚಾರದಲ್ಲಿ ಪೋಷಕರಿಗೆ ಒತ್ತಡ ಹಾಕಬಾರದೆಂದು ಆದೇಶವನ್ನು ನೀಡಿದ್ದೇವೆ. ಜೊತೆಗೆ ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸಲು ನಮ್ಮ ಕೈಲ್ಲಾದ ಮಟ್ಟಿಗೆ ಪ್ರಯತ್ನ ಮಾಡುವ ಬರವಸೆಯ ಜೊತೆಗೆ ಸರ್ಕಾರದ ನೀತಿಗಳಲ್ಲಿ ನಾವು ನಿಷ್ಕ್ರಿಯ ಎಂದು ಅಸಮದಾನ ವ್ಯಕ್ತಡಿಸಿದರು.

ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಳಬಾಗಿಲು ತಾ.ಅಧ್ಯಕ್ಷ ಪಾರುಕ್‍ಪಾಷ, ಮಾ.ತಾ.ಅಧ್ಯಕ್ಷರು ಹೊಸಹಳ್ಳಿ ವೆಂಕಟೇಶ್, ಹ.ಸೇ ಅದ್ಯಕ್ಷ ಬೇತಮಂಗಲ ಮಂಜುನಾಥ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮೀಸೆ ವೆಂಕಟೇಶಪ್ಪ, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಅಶ್ವತಪ್ಪ, ರಾಮಸ್ವಾಮಿ, ನಲ್ಲಾಂಡಹಳ್ಳಿ ಶಂಕರ್, ಬಾಲು, ಪುರುಶೋತ್ತಮ್, ಪುತ್ತೇರಿ ರಾಜು, ಗೋವಿಂದಪ್ಪ, ಸಾಗರ್, ಸುಪ್ರಿಂ ಚಲ, ಮುದುವಾಡಿ ಚಂದ್ರಪ್ಪ ರಾಜೇಶ್, ನವೀನ್, ಪವನ್, ಮನು, ಮುಂತಾದವರಿದ್ದರು.