ಕೋಲಾರ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕಾರ

ವರದಿ:ಶಬ್ಬೀರ್ ಅಹ್ಮದ್

ಕೋಲಾರ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕಾರ


ಕೋಲಾರ, ಏ.28 ವರ್ಷಗಳ ಕಾಲ ಸಂಸದರಾದ ಕೆ.ಹೆಚ್.ಮುನಿಯಪ್ಪ ನವರು ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕರಿಸಿ ಬಿ.ಜೆ.ಪಿ ಅಭ್ಯರ್ಥಿ ಮಿನಿಶ್ಯಾಮಿಗೆ ಬೆಂಬಲ ನೀಡಲು ಜಿಲ್ಲಾ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಆದರೆ ಇಡೀ ದೇಶಕ್ಕೆ ಅನ್ನಾ ಹಾಕುವ ಅನ್ನದಾತನು ಬೆಳೆದ ಬೆಳೆಗೆ ಬೆಲೆ ನಿಗಧಿ ಮಾಡುವ ಸ್ವಾತಂತ್ರ್ಯ ಬಂದಿಲ್ಲ. ಜೊತೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಸಂಸದರು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸುವ ಜೊತೆಗೆ ರೈತರ ಕಷ್ಟಾ ಸುಖಗಳಲ್ಲಿ ಭಾಗಿಯಾಗಬೇಕಾದ ಸಂಸದರು ಇಂದು ಸಂಪೂರ್ಣವಾಗಿ ಬರಪೀಡಿತ ಕೋಲಾರ ಜಿಲ್ಲೆಯನ್ನು ಮರೆತಿದ್ದಾರೆ. ಯಾವುದೇ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ 15 ವರ್ಷಗಳಿಂದ ಬರಗಾಲ ಆವರಿಸುವ ಜೊತೆಗೆ ರೇಷ್ಮೆ, ಹಾಲು, ಟೆಮೋಟೋ ಬೆಲೆ ಕುಸಿತದಿಂದ ಕಂಗಾಲಾಗಿ ರೈತ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದರು. ರೈತರ ಸಮಸ್ಯೆಗಳಿಗೆ ಸ್ಪಂಧಿಸದ ಜೊತೆಗೆ ಶಾಶ್ವತ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಉದ್ಯೋಗ ಸೃಷ್ಟಿಯೆಂದು ಹೇಳುವ ಸಂಸದರೇ ಪಕ್ಕದ ಆಂಧ್ರ ಪ್ರದೇಶಕ್ಕೆ ಕೃಷ್ಣಾ ಮೇಲ್ದಂಡೆ ನೀರು 850 ಕಿ.ಮೀ. ಕಾಲುವೆ ಮುಖಾಂತರ ಹರಿದರೆ 60 ಕಿ.ಮೀ. ಅಂತರದ ಬೆಂಗಳೂರಿನಿಂದ ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರು ಯಾಕೆ ತಾರತಮ್ಯ ಮಾಡುತ್ತಿದ್ದಾರೆ. ಜೊತೆಗೆ 11 ವರ್ಷವಾದರೂ ಯರಗೋಳ್ ನೀರವಾರಿ ಯೋಜನೆ ಬಗ್ಗೆ ದ್ವನಿ ಎತ್ತಿಲ್ಲ. ಜೊತೆಗೆ ಏಷ್ಯಾದಲ್ಲೇ ಮೊದಲನೇ ಸ್ಥಾನದಲ್ಲಿರುವ ಟೆಮೋಟೋ ಮಾರುಕಟ್ಟೆಯ ವಿಸ್ತೀರ್ಣಕ್ಕೆ ಸತತವಾಗಿ 4 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಜಮೀನು ಮಂಜೂರು ಮಾಡಲು ಆಗುತ್ತಿಲ್ಲವೆ. ಇನ್ನು ನೂರಾರು ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸದ ಕೆ.ಹೆಚ್.ಮುನಿಯಪ್ಪನವರ ಬಯಲು ಸೀಮೆ ರೈತ ವಿರೋಧಿ ದೋರಣೆಯನ್ನು ಸಭೆಯಲ್ಲಿ ಖಂಡಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ 28 ವರ್ಷ ಸಂಸದರಾಗಿ ಯಾವ ಅಭಿವೃದ್ಧಿಕಾರ್ಯ ಮಾಡಿದ್ದಾರೆ. ಉದ್ಯೋಗ ಸೃಷ್ಟಿ ಎಂದು ಹೇಳಿ ರೈಲ್ವೆ ಕೋಚ್ ಪ್ಯಾಕ್ಟರಿ ನಿರ್ಮಾಣ ಮಾಡಲು ಗುದ್ದಲಿ ಪೂಜೆ ಮಾಡಿ 5 ವರ್ಷ ಕಳೆದರೂ ಇದುವರೆವಿಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಜೊತೆಗೆ ನರಸಾಪುರ, ವೇಮಗಲ್, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಹಾಗೂ ರಾಷ್ಟ್ರೀಯಹೆದ್ದಾರಿ ಅಭಿವೃದ್ಧಿ ಮಾಡಿದ್ದೇನೆಂದು, ಸಾರ್ವಜನಿಕವಾಗಿ ಹೇಳುವ ಸಂಸದರೇ ಹೆದ್ದಾರಿ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತರ ಜಮೀನಿಗೆ ಪರಿಹಾರ ಇದುವರೆವಿಗೂ ನೀಡಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ. ಚುನಾವಣೆ ಬಂದಾಗ ಮಾತ್ರ ಈ ಬರ ಪೀಡಿತ ಜಿಲ್ಲೆ ಜ್ಞಾಪಕಕ್ಕೆ ಬರುತ್ತದೆ. ಆದರೆ ತಮ್ಮ 28 ವರ್ಷದ ಸಂಸದರ ಅಧಿಕಾರದಲ್ಲಿದ್ದ ಮಾನ್ಯ ಸಚಿವರಿಗೆ ಜಿಲ್ಲೆಯ ಜ್ವಲಂತ ಹಾಗೂ ರೈತರ ಸಮಸ್ಯೆಗಳನ್ನು ಸ್ಪಂಧಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸಂಸದರಾದ ಕೆ.ಹೆಚ್.ಮುನಿಯಪ್ಪನವರಿಗೆ ಬೆಂಬಲ ನೀಡದೆ ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಬಾರಿ ಬಿ.ಜೆ.ಪಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಳಬಾಗಿಲು ತಾ.ಅಧ್ಯಕ್ಷ ಪಾರುಕ್‍ಪಾಷ, ಮಾ.ತಾ.ಅಧ್ಯಕ್ಷರು ಹೊಸಹಳ್ಳಿ ವೆಂಕಟೇಶ್, ಕೆ.ಜಿ.ಎಫ್ ತಾ.ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಬಂಗಾರಪೇಟ ತಾ.ಅ ಇಲಿಯಾಜ್‍ಖಾನ್, ಐತಂಡಹಳ್ಳಿ ಅಂಬರೀಶ್, ಕೆಂಬೋಡಿ ಕಷ್ಣೇಗೌಡ, ಪುರುಶೋತ್ತಮ್, ಪುತ್ತೇರಿ ರಾಜು, ವೇಮಗಲ್ ನಟರಾಜ್, ಗೋವಿಂದಪ್ಪ, ಅಮರನಾರಾಯಣಸ್ವಾಮಿ, ಗಣೇಶ್, ಮೀಸೆ ವೆಂಕಟೇಶಪ್ಪ, ಮುನಿಶಾಮಣ್ಣ, ರಂಜಿತ್, ಸಾಗರ್, ಸುಪ್ರಿಂ ಚಲ, ಮುದುವಾಡಿ ಚಂದ್ರಪ್ಪ