ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಚುಕ್ಕಿ ಚಂದ್ರಮ : ಭಾನ ತಾರೆಗಳೊಂದಿಗೆ ಒಂದು ಸಂಜೆ

ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಚುಕ್ಕಿ ಚಂದ್ರಮ : ಭಾನ ತಾರೆಗಳೊಂದಿಗೆ ಒಂದು ಸಂಜೆ


ಕುಂದಾಪುರ, ಎ.10: ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸಮುದಾಯ ಕುಂದಾಪುರ ಇವರ ಆಯೋಜಕತ್ವದಲ್ಲಿ ಉಡುಪಿ ಪೂರ್ಣ ಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕ ತಂಡದಿಂದ ಚುಕ್ಕಿ ಚಂದ್ರಮ ಭಾನ ತಾರೆಗಳೊಂದಿಗೆ ಒಂದು ಸಂಜೆ ಎಂಬ ಕಾರ್ಯಕ್ರಮ ನೆಡೆಯಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅತಿ.ವಂ|ಸ್ಟ್ಯಾನಿ ತಾವ್ರೊ ಆಗಮಿಸಿ ‘ಚಂದ್ರ ಎಲ್ಲರಿಗೂ ಕೌತುಕಮಯ, ತಾಯಿ ಮಗುವನ್ನು ಉಣಿಸಲು ಚಂದ್ರನನ್ನು ತೋರಿಸುತ್ತಾಳೆ, ಅದರ ಆಕರ್ಷಣೆಗೆ ಮಗು ಊಟ ಮಾಡುತ್ತದೆ, ಈ ಕಾರ್ಯಕ್ರಮ ಜ್ಞಾನದ ಒಂದು ಉಡುಗೋರೆ, ಜ್ಞಾನದ ಬೆಳಕನ್ನು ನೀಡುವ ಕಾರ್ಯಕ್ರಮ’ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮುದಾಯ ತಂಡವು ಕಾರ್ಕಡ ರಾಮಚಂದ್ರ ಉಡುಪ ಇವರ ನೆನಪಿನಲ್ಲಿ ಮಾಡುವ ಈ ಕಾರ್ಯಕ್ರಮಕ್ಕೆ ಆಗಮಿಸಿದ ಅವರ ಪುತ್ರ ಪೆÇ್ರಫೆಸರ್ ರಾಜೇಂದ್ರ ಉಡುಪ ‘ಖಗೋ:ಳ ವಿಜ್ಞಾನ ಸರಿಯಾಗಿ ಅವಲೋಕಿಸಿದರೆ, ನಾವು ಇವತ್ತು ಮೂಢ ನಂಬಿಕೆಯಿಂದ ಮುಳುಗಿ ಹೋಗಿದ್ದೆವೆ, ಕೆಲವರು ಇದೇ ನಕ್ಷತ್ರಗಳ ಮೂಲಕ ಹೊಟ್ಟೆ ಪಾಡು ಮಾಡಿಕೊಂಡು ಶೋಷಣೆ ಮಾಡುತ್ತಾರೆ, ಖಗೋಳ ವಿಜ್ಞಾನ ಸಂಶೊಧನೆ ಆರಂಭವಾಗಿದ್ದೆ ಕ್ರೈಸ್ತರಿಂದ, ಪಾಶ್ಚ್ಯಾತ ದೇಶದಲ್ಲಿ ಇಗರ್ಜಿಯಲ್ಲೆ ಒಂದು ದೊಡ್ಡ ಖಗೋಳ ವಿಜ್ಞಾನಕ್ಕೆ ಸಂಬಂಧ ಪಟ್ಟ ಪ್ರಯೋಗಾಲಯ ಇದೆ, ನಮ್ಮಲ್ಲಿ ಅಂತಕ ಖಗೋಳ ಪ್ರಯೋಗಾಲಯ ಇಲ್ಲವೆಂಬುದು ಬೇಸರದ ಸಂಗತಿ’ ಎಂದು ಅವರು ಹೇಳಿದರು.
ಸಂತ ಜೋಸೆಫ್ sಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವಾಯ್ಲೆಟ್ ತಾವ್ರೊ ‘ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ತುಂಬ ಉಪಯೋಗವಾಗುತ್ತೆ, ಈ ಪ್ರಾತ್ಯಕ್ಷಿಕೆಯನ್ನು ನೋಡಿ ಮಕ್ಕಳಲ್ಲಿ ತಿರುವು ಪಡೆದು ಕೆಲವರು ವಿಜ್ಞಾನಿ ಕೂಡ ಆಗುವುದಕ್ಕೆ ಸಾಧ್ಯವಿದೆ’ ಎಂದರು. ಪುರ್ಣ ಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕ ಪೆÇ್ರ. ಎ.ಪಿ ಭಟ್ ‘ಪ್ರಾತ್ಯಾಕ್ಷಿಕೆ ಮೂಲಕ ಆಕಶದಲ್ಲಿನ ಎಲ್ಲಾ ಗ್ರಹಗಳನ್ನು, ಕೋಟಿಕಟ್ಟಲೆ ಥರಹ ಥರಹ ಬಣ್ಣಗಳ ವಿವಿಧ ಗಾತ್ರಗಳ ನಕ್ಷತ್ರಗಳನ್ನು ಚಂದ್ರನ ಕುಳಿಗಳು, ತಾರೆಗಳ ಹುಟ್ಟು-ಸಾವು, ಗ್ರಹಣ, ತಾರಾಪುಂಜ ಮತ್ತಿತರ ಸಂಗತಿಗಳನ್ನು ತಮ್ಮ ಅನನ್ಯ ದೇಹಭಾಷೆಯ ಮೂಲಕ ವಿವರಿಸಿದರು. ಈ ಗ್ರಹಗಳಲ್ಲಿ  ಶ್ರೇಷ್ಟವಾದುದು  ನಮ್ಮ ಭೂಮಿ, ಇಲ್ಲಿ ನೀರು ಆಮ್ಲಜನಕವಿದ್ದು, ಸಕಲ ಜೀವ ಸಂಕಲನಕ್ಕೆ ಜೀವಿಸಲು ಯೋಗ್ಯವಾಗಿದೆ, ಆದರೆ ಮಾನವ ಈ ಭೂಮಿಗೆ ಅನ್ಯಾಯ ಮಾಡಿದ್ದಾನೆ, ಕಾಡು ಮರಗಳನ್ನು ಕಡಿದು ಆಮ್ಲಜನಕದ ಕೊರತೆಯುಂಟಾಗಿದೆ, ಅದಕ್ಕೆ ಭೂಮಿಯನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ, ಅದಕ್ಕಾಗಿ ನಾವು ಗೀಡ ಮರಗಳನ್ನು ನೆಟ್ಟು ಭೂಮಿಯ ರಕ್ಷಣೆಯ ಕಾರ್ಯಕ್ಕೆ ತೊಡಗ ಬೇಕೆಂದು’ ನಕ್ಶತ್ರ ಲೋಕವನ್ನು ಮಕ್ಕಳ ಮುಂದಿಟ್ಟರು. ಅವರ ಜೊತೆಗೆ ಪೂ.ಪ್ರ., ಹ. ಖ. ವೀಕ್ಷಕ ತಂಡ ಬಂದಿದ್ದು ಆಸಕ್ತರಿಗೆ ಸೂರ್ಯ ಮತ್ತು ಚಂದ್ರನ ವೀಕ್ಷಣೆಯನ್ನು ಮಾಡಿಸಿದರು ಡಿಸೆಂಬರ್ ನಲ್ಲಿ ಸಂಭವಿಸಲಿರುವ ಖಗ್ರಾಸ ಸೂರ್ಯಗ್ರಹಣವನ್ನು ಜಿಲ್ಲೆಯ ಎಲ್ಲ ಶಾಲಾ ಮಕ್ಕಳು ನೋಡುವಲ್ಲಿ ಸಹಾಯಕವಾಗಲಿರುವ ಉಪಕರಣವನ್ನು ಡಾ.ಎ.ಪಿ ಭಟ್ ರವರು ಸಮುದಾಯದ ಜಿ.ವಿ.ಕಾರಂತರಿಗೆ ಹಸ್ತಾಂತರಿಸಿದರು. ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ.ಎಂ ಎಲ್ಲರಿಗೂ ಪುಸ್ತಕ ಸ್ಮರಣಿಕೆ ನೀಡಿದರು. ಸಮುದಾಯ. ಸಮುದಾಯದ ವಾಸುದೇವ್ ಗಂಗೇರಾ ಇವರ ನಿರ್ದೇಶನದಲ್ಲಿ ಹಾಡುಗಳನ್ನು ಹಾಡಲಾಯಿತು, ಸಮುದಾಯದ ಅಧ್ಯಕ್ಷ ಉದಯ್ ಗಾಂವ್ಕರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಅಶೋಕ ತೆಕ್ಕಟ್ಟೆ ವಂದಿಸಿದರು.