ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ: ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ

ವರದಿ: ಚಂದ್ರಶೇಖರ ಬೀಜಾಡಿ

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ: ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ


ಕುಂದಾಪುರ: ಸಮಾಜದ ಅಭಿವೃದ್ಥಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಆಗ ಸಮಾಜ ಬೇಗನೆ ಅಭಿವೃದ್ಥಿ ಹೊಂದಲು ಸಾಧ್ಯ.ಗಾಣಿಗ ಸಮಾಜ ಸಣ್ಣ ಸಮಾಜ ಆದರೂ ಕಡಿಮೆ ಅವಧಿಯಲ್ಲಿ ಸುಮಾರು 1.35ಕೋಟಿ ಅಧಿಕ ವೆಚ್ಚದಲ್ಲಿ ಹವಾನಿಯಂತ್ರಿತ ಸಭಾಂಗಣ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ ಕೀರ್ತಿ ಗಾಣಿಗ ಸಮಾಜಕ್ಕೆ ಸಲ್ಲುತ್ತದೆ ಎಂದು ಉದ್ಯಮಿ, ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಲಕ್ಷ್ಮಣ ಹೇಳಿದರು.
ಅವರು ಭಾನುವಾರ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ವ್ಯಾಸರಾಜ ಕಲಾ ಮಂದಿರದಲ್ಲಿ ಸುಮಾರು 1.35 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೋಜನ ಶಾಲೆಯನ್ನು ಉದ್ಯಮಿ ಕೆ.ಎಂ.ರಾಮ, ಪಾಕ ಶಾಲೆಯನ್ನು ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ, ಸೀತಾರತ್ನ ಯು.ಪಿ ಪರಮೇಶ್ವರ ವಧು-ವರರ ಕೊಠಡಿ ಉದ್ಘಾಟಿಸಿದರು. ಉದ್ಯಮಿಗಳಾದ ನಾಗೇಶ ಮಾರಾಳಿ ಲಿಪ್ಟ್,ಬಿ.ಎಸ್.ಸುಬ್ಬಣ್ಣ ಜನರೇಟರ್ ವ್ಯವಸ್ಥೆ, ಉಮೇಶ ಹವಾನಿಯಂತ್ರಿತ ವ್ಯವಸ್ಥೆಗೆ ಚಾಲನೆ ನೀಡುವರು. ಬೆಂಗಳೂರು ಕೈಗಾರಿಕೋದ್ಯಮಿ ದಿನಕರ ಸಂಘದ ನವೀಕೃತ ಕಛೇರಿ ಉದ್ಘಾಟಿಸಿದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಜೆ.ಪಿ “ಪ್ರೇರಣೆ” ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ,ಭಟ್ಕಳ ಗಾಣಿಗ ಸೇವಾ ಸಂಘದ ನಾರಾಯಣ ಮಂಜುನಾಥ ಶೆಟ್ಟಿ,ಇಂಜನಿಯರ್ ಸುಕೇಶ್ ಕುಮಾರ್ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಕಲಾವತಿ ಅಚ್ಯುತ್, ಕೊಡಪಾಡಿ ಶ್ರೀ ಗುಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನರಸಿಂಹ ಗಾಣಿಗ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರವಿ ಗಾಣಿಗ ಆಜ್ರಿ, ಗುಜ್ಜಾಡಿ ಶ್ರೀ ಮಾರಿಕಾಂಬಾ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ವಿಜಯಭಾಸ್ಕರ ಗಾಣಿಗ, ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ಸಿದ್ಥಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಹೊಸಂಗಡಿ ಜಯರಾಮ ಗಾಣಿಗ, ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪವರ್ ಲಿಷ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಪವನ ಕುಮಾರ ಕೊಂಡಮ್ಮಾಡಿ, ರಾಷ್ಟ್ರಮಟ್ಟದ ಪವರ್ ಲಿಷ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಕುಮಾರಿ ರಶ್ಮಿತಾ ಕುಂಭಾಶಿ,ಸಮಾಜ ಸೇವಕ ಆಟೋ ರಾಜ ಅವರನ್ನು ಸನ್ಮಾನಿಸಲಾಯಿತು.ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಗಾಣಿಗ,ಬೈಂದೂರು ಘಟಕದ ಅಧ್ಯಕ್ಷ ಗೋಪಾಲ ಗಾಣಿಗ,ಉಪ್ಪುಂದ ಘಟಕದ ಅಧ್ಯಕ್ಷ ರಮೇಶ ಗಾಣಿಗ ಮೊಗೇರಿ,ನಾವುಂದ ಘಟಕದ ಅಧ್ಯಕ್ಷ ಎನ್.ರತ್ನಾಕರ ಗಾಣಿಗ,ಹೆಮ್ಮಾಡಿ ಘಟಕದ ಅಧ್ಯಕ್ಷ ರವಿ ಗಾಣಿಗ ಮಲ್ಲಾರಿ,ನಾಡ ಪಡುಕೋಣೆ ಘಟಕದ ಅಧ್ಯಕ್ಷ ವೆಂಕಟರಮಣ ಗಾಣಿಗ,ನೇರಳಕಟ್ಟೆ-ಆಜ್ರಿ ಘಟಕದ ಅಧ್ಯಕ್ಷ ರಾಘವೇಂದ್ರ ಗಾಣಿಗ,ಕುಂದಾಪುರ ಘಟಕದ ಅಧ್ಯಕ್ಷ ಸಚ್ಚಿದಾನಂದ ಎಮ್.ಎಲ್.,ಬಸ್ರೂರು ಘಟಕದ ಅಧ್ಯಕ್ಷ ಪ್ರಶಾಂತ,ಕೋಟೇಶ್ವರ ಘಟಕದ ಅಧ್ಯಕ್ಷ ಸುಧಾಕರ ಗಾಣಿಗ,ತೆಕ್ಕಟ್ಟೆ ಘಟಕದ ಅಧ್ಯಕ್ಷ ಗುರುರಾಜ ಗಾಣಿಗ,ಕುಂದಾಪುರ ತಾಲೂಕು ಗಾಣಿಗ ಮಹಿಳಾ ಸಂಘಟನೆಯ ಅಧ್ಯಕ್ಷ ಶಶಿಕಲಾ ನಾರಾಯಣ ಗಾಣಿಗ,ಕೋಟೇಶ್ವರ ಗಾಣಿಗ ಮಹಿಳಾ ಸಂಘಟನೆಯ ಅಧ್ಯಕ್ಷ ಸವಿತಾ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಸ್ವಾಗತಿಸಿದರು.ಇಂಜಿನಿಯರ್ ರಮಾನಂದ ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ಪರಮೇಶ್ವರ ಜಿ.ಪಿ ವಂದಿಸಿದರು.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಆಸಮ್ ಬಾಯ್ಸ್ ಕೋಟೇಶ್ವರ ಇವರಿಂದ ನೃತ್ಯ ವೈವಿಧ್ಯ ಜರುಗಿತು.
ಬಾಕ್ಸ್ ಮಾಡಿ ಹಾಕಿ
ಸಭಾಂಗಣದ ವಿಶೇಷತೆಗಳು
ಸಂಪೂರ್ಣ ಹವಾನಿಯಂತ್ರಿತ 7 ಸಾವಿರ ಚದರ ಅಡಿಯ ವಿಸ್ತೀರ್ಣದ ಹಾಲ್ ಇದಾಗಿದ್ದು, 700 ಮಂದಿ ಕುಳಿತುಕೊಳ್ಳ ಬಹುದಾದಷ್ಟು ಸ್ಥಳಾವಕಾಶ ಹೊಂದಿದೆ. 6 ಸಾವಿರ ಚದರ ಅಡಿಯ 400 ಮಂದಿ ಕುಳಿತು ಊಟ ಮಾಡಬಹುದಾದ ನಾನ್ ಎ.ಸಿ ಬೋಜನ ಶಾಲೆಯ ಜತೆಗೆ, 1.5ಸಾವಿರ ಅಡಿ ವಿಸ್ತೀರ್ಣದ ವಿಶಾಲವಾದ ಶುದ್ಧ ಸಸ್ಯಾಹಾರಿ ಪಾಕ ಶಾಲೆಯನ್ನು ಹೊಂದಿದ್ದು,8 ಮಂದಿ ಸಾಮಥ್ರ್ಯದ ಲಿಷ್ಟ್ ಸೌಲಭ್ಯ,150ಕೆವಿ ಜನರೇಟರ್ ಸೌಲಭ್ಯದ ಜತೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.