ನೋಲಾನ್ ಫೆರ್ನಾಂಡಿಸ್
ಡಿಪ್ಲೊಮಾ ಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ
ರಾಜ್ಯಕ್ಕೆ 3 ನೇ ರೇಂಕ್
ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳಿಬೆಂಗಳೂರು, ಇವರು ಡಿಸೆಂಬರ್ 2018 ರಲ್ಲಿ ನೆಡೆಸಿದ ಡಿಪ್ಲೊಮಾಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯ (ಸಹಕಾರಿ ಕ್ಷೇತ್ರ) ಅಂತಿಮ ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ನೋಲಾನ್ ಫೆರ್ನಾಂಡಿಸ್ ಇವರಿಗೆ ರಾಜ್ಯಕ್ಕೆ 3 ರೇಂಕ್ ದೊರಕಿದೆ. ನೋಲಾನ್ ಫೆರ್ನಾಂಡಿಸ್ ಕುಂದಾಪುರದ ದಿವಗಂತ ನೆಲ್ಸನ್ ಫೆರ್ನಾಂಡಿಸ್ ಮತ್ತು ಜೆಸಿಂತಾ ಫೆರ್ನಾಂಡಿಸ್ ಇವರ ಪುತ್ರರಾಗಿದ್ದಾರೆ. ಪ್ರಸ್ತೂತ ಇವರು ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನಲ್ಲಿ ಸೇವೆ ಸಲ್ಲಿಸುತಿದ್ದಾರೆ. ಜನನುಡಿ.ಕಾಮ್ ಇವರ ಸಾಧನೆಯನ್ನು ಮೆಚ್ಚಿ ಅಭಿನಂದಿಸುತ್ತದೆ – ಬರ್ನಾಡ್ ಡಿಕೋಸ್ತಾ, ಸಂಪಾದಕರು, jananudi.com