ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ವಿಧಿ ವಶ: ಊಟ ಮಾದುತ್ತಿರುವಾಗ ಹ್ರದಯಘಾತ

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ವಿಧಿ ವಶ: ಊಟ ಮಾಡುತ್ತಿರುವಾಗ ಹ್ರದಯಘಾತ


ಸಮ್ಮಿಶ್ರ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಕಾಂಗ್ರೆಸನ ಸಿ.ಎಸ್. ಶಿವಳ್ಳಿ ಹ್ರದಯಘಾತದಿಂದ ವಿಧಿ ವಶವಾಗಿದ್ದಾರೆ. ಅವರು ಮಧ್ಯಾನ್ಞ ಊಟ ಮಾಡುತ್ತಿರುವಾಗ ಹ್ರದಯಾಘಾತವಾಗಿದ್ದು, ತಕ್ಷಣ ಹುಬ್ಬಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶವಾಗಿದ್ದಾರೆ. ಅವರಿಗೆ ಕೇವಲ 57 ವರ್ಷ ಪ್ರಾಯವಾಗಿತ್ತು.
ಅವರು ಕುಂದಕೋಳ ಕ್ಷೇತ್ರದಿಂದ 3 ಭಾರಿ ಆಯ್ಕೆಯಾಗಿದ್ದರು. 1999 ರಲ್ಲಿ ಸ್ವಂತತ್ರವಾಗಿ ಸ್ಪರ್ಧೆ ಮಾಡಿ ಜಯಿಸಿದ್ದರು, ನಂತರ ಅವರು 2 ಭಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ಈ ಸಲ ಸಮ್ಮಿಶ್ರ ಸರಕಾರದಲ್ಲಿ ಪೌರಡಾಳಿತ ಸಚಿವರಾಗಿದ್ದರು. ಅವರ ಪೂರ್ಣ ಹೆಸರು ಚೆನ್ನ ಬಸಪ್ಪ ಸತ್ಯಪ್ಪ ಶಿವಳ್ಳಿ. ಅವರು ಜನ ಪ್ರಿಯರಾಗಿದ್ದು ಅವರ ಕ್ಷೇತ್ರದಲ್ಲಿ ಜನ ಇವರ ಸಾವಿನಿಂದ ದುಖ ತ್ರಪ್ತರಾಗಿದ್ದಾರೆ.
ಇವರ ಸಾವಿಗೆ ಎಚ್.ಡಿ. ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತು ಕಾಂಗ್ರೆಸ್ ಪಕ್ಷದ ನೇತಾರರು ಕಂಬನಿ ಮಿಡಿದಿದ್ದಾರೆ