ಕುಂದಾಪುರ ಸಂಜೀವಿನಿ ಸ್ವಸಹಾಯ ಸಂಘದಿಂದ ಮಹಿಳಾ ದಿನಾಚರಣೆ

ಕುಂದಾಪುರ ಸಂಜೀವಿನಿ ಸ್ವಸಹಾಯ ಸಂಘದಿಂದ ಮಹಿಳಾ ದಿನಾಚರಣೆ

 

ಕುಂದಾಪುರ,ಮಾ.20 ಕುಂದಾಪುರ ರೋಜರಿ ಮಾತಾ ಇಗರ್ಜಿಯ ಸ್ವಸಹಾಯ ಸಂಘಗಳಲ್ಲಿ ಒಂದಾದ ಸಂಜೀವಿನಿ ಸ್ವಸಹಾಯ ಮಹಿಳಾ ಸಂಘವು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿತು.ಈ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಮನಿಷ್ ಆಸ್ಪತ್ರೆಯ ನಿರ್ದೇಶಕಿ ಪ್ರಸೂತಿ ತಜ್ನೆ ಡಾ|ಪ್ರಮೀಳಾ ನಾಯಕ್ ಮತ್ತು ಉಡುಪಿ ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಈ ಸಂದರ್ಭ ಕುಂದಾಪುರದಲ್ಲಿ ಸ್ವ ಉದ್ಯೋಗ ನೆಡೆಸಿ ಜನಸೇವೆ ಮಾಡುತ್ತಿರುವ ೩ ಮಂದಿ ಅಟೋ ಚಾಲಕಿಯರಾದ  ಶ್ರೀಮತಿ ದೀಪಾ, ಕಳೆದ 19 ವರ್ಷಗಳಿಂದ ಅಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವರು, ಶ್ರೀಮತಿ ರೂಪ, ಕಳೆದ 14 ವರ್ಷಗಳಿಂದ ಅಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವರು, ಹಾಗೂ ಕು|ಸುಲೋಚನ 6 ವರ್ಷದಿಂದ ಆಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರುಗಳನ್ನು ಡಾ|ಪ್ರಮೀಳಾ  ಸನ್ಮಾನಿಸಿ ’ಸಮಾಜದಲ್ಲಿ ಹೆಣ್ಣಿಗೆ ನೈತಿಕ ಬೆಂಬಲ ದೊರೆಯುವುದು ಬಹಳ ಕಡಿಮೆ, ಸಮಾಜ ಮಾಡುವ ನಿಂದನೆಯನ್ನು ಎದುರಿಸಿ ನಿಲ್ಲಾಬೇಕಾಗುತ್ತದೆ, ನಾವು ಛಲ ಹಿಡಿದು ನ್ಯಾಯಯುತವಾಗಿ ನಮ್ಮ ಉದ್ಯೋಗವನ್ನು ಮಾಡಿದಲ್ಲಿ ,ಯಶಸ್ವಿಯ ಹಾದಿ ನಿಶ್ಚಲವಾಗಿ ಸಿಗುತ್ತದೆ’ ಎಂದು ಹೇಳಿದರು. 

    ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್  ’ಸಂಜೀವಿನ್ ಸಂಘದವರು ಒಂದು ಉತ್ತಮ ಅರ್ಥಭರಿತ  ಕಾರ್ಯಕ್ರಮವನ್ನು ಆಚರಿಸಿದ್ದಾರೆ, ಸಂಘದ ಮೇಲೆ ಮತ್ತು ಇವತ್ತು ಸನ್ಮಾಮಾನಗೊಂಡ ಸಮಾಜ ಸೇವಕರಾದ  ಅಟೋ ಚಾಲಕರ ಮೇಲೆ ದೇವರ ಆಶಿರ್ವಾದವನ್ನು ಬೇಡಿದರು. ಸ್ವಂತ ಆಸ್ಪತ್ರೆಯನ್ನು ತೆರೆದು ಸಮಾಜಕ್ಕೆ ಸೇವೆ ನೀಡುತ್ತಾ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಪ್ರಸಿದ್ದರಾಗಿರುವ  ಡಾ|ಪ್ರಮೀಳಾರನ್ನು ಸಂಘದ ಪರವಾಗಿ ಧೈರ್ಯವಂತ ಮಹಿಳೆ ಎಂದು ಸನ್ಮಾಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷೆ ಡಾ|ಸೋನಿ ಡಿಕೋಸ್ಟಾ ಪ್ರಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರ ನಿರೂಪಿಸಿದರು. ಶಾಂತಿ ಡಿಸೋಜಾ ಸನ್ಮಾನಿತರ ಪರಿಚಯವನ್ನು ನೀಡಿದರು. ಸದಸ್ಯೆ ಜೂಡಿತ್ ಡಿಮೆಲ್ಲೊ ಧನ್ಯವಾದಗಳನ್ನು ಅರ್ಪಿಸಿದರು.