ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ

ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ


ಕುಂದಾಪುರ, ಮಾ.18: ‘ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿದೆ, ಮಕ್ಕಳನ್ನು ತಾಯಿ ಮೌಲ್ಯಧಾರಿತ ಗುಣಗಳನ್ನು ತಮ್ಮ ಮಕ್ಕಳಲ್ಲಿ ತುಂಬ ಬೇಕಾಗುತ್ತದೆ, ಮಕ್ಕಳನ್ನು ಪಾಲನೆ ಪೋಷಣೆ  ಮಾಡುವ ಗುಣ ತಾಯಿಯಲ್ಲಿ ಇರುತ್ತೆ, ದೇವರು ಮಹಿಳೆಯನ್ನು ತುಂಬ ಕಾಳಜಿಯಿಂದ ಸ್ರಷ್ಠಿಸಿದ್ದಾನೆ, ಮಹಿಳೆ ದೇವರ ವಿಶೇಷ ಶ್ರಷ್ಠಿಯಾಗಿದೆ, ಉಪ್ಪಿಕಿಂತ ರುಚಿ ಬೇರೆಯಿಲ್ಲಾ, ತಾಯಿಕಿಂತ ಆಪ್ತ ಬಂಧು ಬೇರೆಯಿಲ್ಲಾ’ ಎಂದು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ಸಚೇತಕಿ ವಂ|ಭಗಿನಿ ಪ್ರೇಮ್‍ಲತಾ ಮುಖ್ಯ ಅತಿಥಿಯಾಗಿ ಸಂದೇಶ ನೀಡಿದರು. ಅವರು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಕುಂದಾಪುರ ಘಟಕದ ನೇತ್ರದ್ವದಲ್ಲಿನ ಚರ್ಚಿನ ಸ್ವಸಹಾಯ ಗುಂಪುಗಳ ಜೊತೆ ಹೋಲಿ ರೊಜರಿ ಚರ್ಚಿನ ಸಭಾಭವನದಲ್ಲಿ ನೆಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಅವರು ¸ಮಾತನಾಡಿದರು.
ಮೊದಲು ಚರ್ಚಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನಮ್ಮ ಸಮಾಜದಲ್ಲಿ ಮಹಿಳೆಯರೇ ಮುಂದು, ಅವರಲ್ಲಿ ಸಬಲೀಕರಣ ಇದೆ, ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು, ಅಲ್ಲದೆ ಇತರ ಮನೆಕೆಲಸ, ಭಾಹ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಾಳೆ’ ಎಂದು ದಿನಾಚರಣೆಗೆ ಶುಭ ಕೋರಿದರು. ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್ ‘ಸ್ತ್ರೀಯರು ಅಬಲೆಯಲ್ಲ, ಸಬಲೆಯರು, ಇವತ್ತು ಮಹಿಳೆ ಆಡು ಮುಟ್ಟದ ಸೊಪ್ಪಿಲ್ಲವೆಂಬತ್ತೆ, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದು ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ’ ಎಂದು ಹೇಳಿದರು. ಪಾಲನ ಮಂಡಳಿ ಅಧ್ಯಕ್ಷ ಜೇಕಬ್ ಡಿಸೋಜಾ ಮಹಿಳೆಯರಿಗೆ ಶುಭ ಕೋರಿದರು. ಸ್ತ್ರೀ ಸಂಘಟನೇಯ ಸದಸ್ಯರಿಂದ ಪ್ರಾರ್ಥನ ಗೀತೆ, ಬೈಬಲ್ ವಾಚನದ ಮೂಲಕ ಆರಂಭಗೊಂಡ ಕಾರ್ಯಕ್ರಮಕ್ಕೆ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಆಶಿರ್ವಚನ ಮಾಡಿದರು. ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸ್ವಸಹಾಯ ಗುಂಪುಗಳಿಗೆ, ಮತ್ತು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಂಚಲಾಯಿತು. ಮಹಿಳೆಯರು ಕಿರುನಾಟಕ, ನ್ರತ್ಯ, ಗಾಯಾನ, ಫ್ಯಾಷನ್ ಷೊ ಮುಂದಾದ ಪ್ರದರ್ಶನವನ್ನು ನೀಡಿದರು. ಕುಂದಾಪುರ ಚರ್ಚ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜ ವಂದಿಸಿದರು. ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರ್ವಹಿದರು.