ವರದಿ: ಸ್ಮಿತಾ ಡಿಸೋಜಾ
ನಾಡ ಪಡುಕೋಣೆಯಲ್ಲಿ ಅಹ್ವಾನಿತ ವಾಲಿಬಾಲ್ ಪಂದ್ಯಾಟ: ಮಂಗಳೂರು, ಪಡುಕೋಣೆ ತಂಡಕ್ಕೆ ಪ್ರಶಸ್ತಿ
ಕುಂದಾಪುರ, ಮಾ.13: ‘ಪಡುಕೋಣೆಯವರಾದ ದಿವಂಗತ ಸುಬ್ರಮ್ಹಣ್ಯ ಪುರಾಣಿಕರು ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಷ್ಟು ಬಡ ವಿದ್ಯಾರ್ಥಿಗಳಿಗೆ ನೀಡಿದ ಸಹಾಯ ಹಸ್ತವನ್ನು ನೆನೆಪಿಸಿಕೊಳ್ಳುವುದರ ಜೊತೆಗೆ, ಅವರ ಹೆಸರಿನಲ್ಲಿ ಹೊನಲು ಬೆಳಕಿನ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿರುವುದು, ನಾವೆಲ್ಲಾ ದಿ.ಸುಬ್ರಮ್ಹಣ್ಯ ಪುರಾಣಿಕರವರಿಗೆ ಸಲ್ಲಿಸುವ ಗೌರವಾಗಿದೆ’ ಎಂದು ಸೈಂಟ್ ಅಂತೋನಿ ಚರ್ಚಿನ ಧರ್ಮಗುರು ವಂ|ಫ್ರೆಡ್ ಮಸ್ಕರೆನ್ಹಾಸ್ ಹೇಳಿದರು.
ಅವರು ಭಾನುವಾರ ಪಡುಕೋಣೆ ಎಜುಕೇಶನ್ ಮತ್ತು ಸ್ಪೋಟ್ರ್ಸ್ ಪ್ರಮೋಟರ್ಸ್ ನಾಡಾ ಇವರ ಆಶ್ರಯದಲ್ಲಿ ದಿ.ಸುಬ್ರಮ್ಹಣ್ಯ ಪುರಾಣಿಕ್ ಇವರ ಸ್ಮರ್ಣಾರ್ಥ ಹೊನಲು ಬೆಳಕಿನ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಗ್ರೆಗರಿ ಪ್ರೌಢಶಾಲೆಯ ಸಂಚಾಲಕ ಸಿಲ್ವೆಸ್ಟರ್ ಡಿಸೋಜಾ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಡುಕೋಣೆ ಗ್ರೆಗರಿ ಪ್ರೌಢಶಾಲೆಯ ನಿವ್ರತ್ತ ಮುಖ್ಯ ಶಿಕ್ಷಕ ಕ್ಸೇವಿಯರ್ ಡಿಸೋಜಾ ಶುಭ ಶಂಸನೆಗೈದರು. ಕಾರ್ಯಕ್ರಮದಲ್ಲಿ ನಾಡಾ ಗ್ರಾಮಾ ಪಂಚಾಯತ್ ಉಪಾಧ್ಯಕ್ಷ ಅರವಿಂದ ಪೂಜಾರಿ, ಸದಸ್ಯ ರಾಜು ಪೂಜಾರಿ ಮುಲ್ಲಿಮನೆ, ಪಡುಕೋಣೆ ಗ್ರೆಗರಿ ಪ್ರೌಢಶಾಲೆಯ ನಿವ್ರತ್ತ ಶಿಕ್ಷಕ ಶಂಕರ ಶೆಟ್ಟಿ, ಮುಖ್ಯೋಪಾಧ್ಯಾಯ ಸೀತಾರಾಮ್ ಶೆಟ್ಟಿ, ಉದ್ಯಮಿ ಸಂಸಾಡಿ ಕರುಣಾಕರ ಶೆಟ್ಟಿ, ನಾಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕ್ರತ ಅನೂಪ್ ಡಿಕೋಸ್ತಾ, ದಿ.ಸುಬ್ರಮ್ಹಣ್ಯ ಪುರಾಣಿಕ್ ಅವರ ಪತ್ನಿ ಸೌಮ್ಯ ಪುರಾಣಿಕ್, ತಂದೆ ಚೆನ್ನ ಕೇಶವ ಪುರಾಣಿಕ್, ಮುಂಬಯಿಯ ಉದ್ಯಮಿ ವಿಲ್ಸನ್ ಒಲಿವೇರಾ. ಪಡುಕೋಣೆ ಚರ್ಚಿನ ಮಾಜಿ ಪಾಲನ ಮಂಡಳಿ ಉಪಾಧ್ಯಕ್ಷ ಡಿಸೋಜಾ, ಪ್ರಭು ಕೆನೆಡಿ ಪೀರೇರಾ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿ.ಸುಬ್ರಮ್ಹಣ್ಯ ಪುರಾಣಿಕ್ ಕುಟುಂಬಕ್ಕೆ ನಗದನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು ಡೊಲ್ಫಿ ಡಿಸಿಲ್ವಾ ವರದಿ ವಾಚಿಸಿದರು, ಸಂಸ್ಥೆಯ ಅಧ್ಯಕ್ಷ ಆಲೆಕ್ಸ್ ಅಂತೋನಿ ಡಿಸೋಜಾ ವಂದಿಸಿದರು, ಶಿಕ್ಷಕರಾದ ಮಿಲ್ಟನ್ ಕ್ರಾಸ್ತಾ ಮತ್ತು ಸ್ಮಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ: ಮಂಗಳೂರು ಅಶ್ವಲ್ ರೈ ಇವರ ತಂಡ ಪ್ರಥಮ ಸ್ಥಾನ ಪಡೆಯಿತು. ಪಡುಕೋಣೆ ರೈಸಲ್ ರೆಬೆಲ್ಲೊ ನೇತ್ರತ್ವದ ಹೊಯ್ಸಳ ಫ್ರೆಂಡ್ಸ್ ದ್ವೀತಿಯ ಸ್ಥಾನ ಪಡೆದರೆ, ಕುಂದಾಪುರ ಚಂದನ್ ಚೇತನ್ ತಂಡ ತ್ರತೀಯ ಸ್ಥಾನ ಪಡೆಯಿತು. ಪಂದ್ಯಾವಳಿಯ ಬೆಶ್ಟ್ ಆಲ್ ರೌಂಡರ್ ಆಗಿ ಪಡುಕೋಣೆ ತಂಡದ ರೈಸನ್ ರೆಬೆಲ್ಲೊ, ಬೆಶ್ಟ್ ಎಟ್ಯಾಕರ್ ಆಗಿ ಮಂಗಳೂರು ತಂಡದ ಅಶ್ವಲ್ ರೈ, ಇದೇ ತಂಡದ ಸಾವನ್ ಬೆಶ್ಟ್ ಪಾಸರ್ ಆಗಿ ಆರಿಸಿ ಬಂದರು.