ವರದಿ:ವಾಲ್ಟರ್ ಮೊಂತೇರೊ
ಜೇಸಿಐ ಬೆಳ್ಮಣ್ಣು : ಸಾರ್ವಜನಿಕ ಶನಿಪೂಜೆ, ಶನಿಕಥೆ ಮತ್ತು ಯಕ್ಷಗಾನ ಕಲಾವಿದರಿಗೆ ಸನ್ಮಾನ
ಬೆಳ್ಮಣ್ಣು ಜೇಸಿಐ, ಜೇಸಿರೇಟ್ ವಿಭಾಗ ಮತ್ತು ಜೂನಿಯರ್ ಜೇಸಿ ವಿಭಾಗದ ನೇತೃತ್ವದಲ್ಲಿ ಮತ್ತು ಬೆಳ್ಮಣ್ಣು ರೋಟರಿ ಕ್ಲಬ್ ಹಾಗೂ ಶ್ರೀ ಗುರುದುರ್ಗಾ ಮಿತ್ರ ಮಂಡಳಿಯ ಸಹಕಾರದೊಂದಿಗೆ ಗೋಳಿಕಟ್ಟೆಯಲ್ಲಿ ಶನಿವಾರ ಸಾಮೂಹಿಕ ಶನಿಪೂಜೆ, ಶನಿಕಥೆ ತಾಳಮದ್ದಳೆ ಮತ್ತು ಸನ್ಮಾನ ಸಮಾರಂಭ ಜರಗಿತು.
ನಂದಳಿಕೆ ಪಾರ್ಲಮನೆ ವೇದಮೂರ್ತಿ ನಾರಾಯಣ ಭಟ್ರವರ ನೇತೃತ್ವದಲ್ಲಿ ಸಾರ್ವಜನಿಕ ಶನಿಪೂಜೆ ಧಾರ್ಮಿಕ ಕಾರ್ಯಕ್ರಮಗಳು, ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಮೂಲಕ ಶನಿಕಥೆ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾದ ಶ್ವೇತಾ ಸುಭಾಸ್ರವರು ವಹಿಸಿದ್ದರು. ವಲಯಾಧ್ಯಕ್ಷರಾದ ಅಶೋಕ್ ಚೂಂತಾರ್ರವರು ಉದ್ವಾಟಿಸಿದರು. ಕಾರ್ಯಕ್ರಮದಲ್ಲಿ ವಲಯಾ ಉಪಾಧ್ಯಕ್ಷ ದೇವೇಂದ್ರ ನಾಯಕ್, ವಲಯಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲ್, ಸೂರ್ಯಕಾಂತ್ ಶೆಟ್ಟಿ, ರಿತೇಶ್ ಶೆಟ್ಟಿ, ಗ್ರೆಗರಿ ಮಿನೇಜಸ್, ಹರೀಶ್ ಶೆಟ್ಟಿ ಕೊಲಕಾಡಿ, ರಣೀಶ್ ಶೆಟ್ಟಿ, ಸುಭಾಸ್ ಕುಮಾರ್, ಸರಿತಾ ದಿನೇಶ್ ಸುವರ್ಣ, ಪ್ರತಿಭಾ ರಾವ್, ದೀಕ್ಷಿತ್ ಕುಮಾರ್ ಮೊದಲಾದವರಿದ್ದರು.
ಯಕ್ಷಗಾನ ಕ್ಷೇತ್ರದ ಹಾಸ್ಯ ಕಲಾವಿದರಾದ ಸುರೇಶ್ ಕೊಲಕಾಡಿ, ಸಂಗೀತ ಕ್ಷೇತ್ರದ ಕಲಾವಿದರಾದ ಸಚಿತ್ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಶೆಟ್ಟಿಗಾರ್ರವರನ್ನು ಸನ್ಮಾನಿಸಲಾಯಿತು. ಜೇಸಿ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ರವರು ಕಾರ್ಯಕ್ರಮ ನಿರೂಪಿಸಿದರು.