ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಇವರಿಂದ ಪ್ರತಿಭಾವಂತರಿಗೆ ಪುರಸ್ಕಾರ;  ಸಾಧನೆಗೆ   ಪರಿಶ್ರಮ ಬಹಳ ಅಗತ್ಯ,

ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಇವರಿಂದ ಪ್ರತಿಭಾವಂತರಿಗೆ ಪುರಸ್ಕಾರ;  ಸಾಧನೆಗೆ  ಪರಿಶ್ರಮ ಬಹಳ ಅಗತ್ಯ,


ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡುವ ಕಾರ್ಯಕ್ರಮವು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ‘ಹೂವಿನ ತೋಟದಲ್ಲಿ ಬಗೆ ಬಗೆಯ ಹೊವುಗಳ ಗೀಡಗಳು ಇರುತ್ತವೆ, ಹಾಗೆ ವಿವಿಧ ರೀತಿಯ ಹೂವುಗಳು ಅರಳುತ್ತವೆ, ಹಾಗೇ ವಿವಿಧವಾದ ಗೀಡಗಳು ಹೂವುಗಳು ಇದ್ದಲ್ಲಿ ಮಾತ್ರ ಅದಕ್ಕೆ ತೋಟ ಅನ್ನುತ್ತೇವೆ, ಹಾಗೇ ದೇವರು ನಮ್ಮನೆಲ್ಲಾ ವಿವಿಧ ರೀತಿಯ ಪ್ರತಿಭೆಗಳುಳ್ಳ ನಮ್ಮನ್ನು ರಚಿಸಿದ್ದಾನೆ, ಅವರವರ ಪ್ರತಿಭೆಗೆ ತಕ್ಕಂತ್ತೆ ಗುರುತಿಸಿ ಅವರನ್ನು ಸನ್ಮಾನಿಸಿದಾಗ ಅವರಲ್ಲಿ ಸ್ಪೂರ್ತಿ ಇನ್ನೂ ಹೆಚ್ಚುತ್ತದೆ, ಮುಂದೆ ಇದಕ್ಕಿಂತ ಹೆಚ್ಚು ಸಾಧನೆ ಮಾಡಲು ಪ್ರೇರಣೆ ಲಭಿಸುತ್ತದೆ. ಈ ಕೆಲಸವನ್ನು ಕಥೊಲಿಕ್ ಸಭಾ ಮಾಡುತ್ತಲೆ ಇದೆ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿಯ ಚಾರ್ಟೆಡ್ ಎಕೌಂಟೆಡ್ ಪ್ರಿತೇಶ್ ಡೆಸಾ ‘ಕಥೊಲಿಕ್ ಸಭಾ ಸಮಾಜದ ಶ್ರೇಯಸಿಗಾಗಿ, ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ, ಮಕ್ಕಳು ಜೀವನದಲ್ಲಿ ಎನ್ನನಾದರೂ ಸಾಧಿಸ ಬೇಕಂದರೆ, ನಮ್ಮಲ್ಲಿ ಒಂದು ಗುರಿ ಇರಬೇಕು, ಅದನ್ನು ಪೂರ್ತಿಗೊಳಿಸುವ ತನಕ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕು, ಸಾಧನೆಗೆ  ಬಹಳ ಪರಿಶ್ರಮ ಅಗತ್ಯ, ಪರಿಶ್ರಮ ಪಟ್ಟರೆ ನಿಮ್ಮ ಯೋಜನೆ ಕಾರ್ಯಗತವಾಗುತ್ತೆ, ಹಾಗೇ ನಾವು ಒದಿ ಜ್ನಾನವನ್ನು ಸಂಪಾದಿಸಿಕೊಳ್ಳ ಬೇಕು, ಅದಕ್ಕಾಗಿ ದಿನ ಪತ್ರಿಕೆ ಪುಸ್ತಕಗಳನ್ನು ಒದಿ’ ಎನ್ನುತ್ತಾ ಸನ್ಮಾನಿತರರಾದದವರನ್ನು ಅಭಿನಂದಿಸಿದರು.

ಭಾಷಣ ಮತ್ತು ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಸಿ.ಬಿ.ಎಸ್.ಸಿ, ಪಿ.ಯು.ಸಿ. ಮತ್ತು ಡಿಗ್ರಿಯ ಎಲ್ಲಾ ವಿಭಾಗಗಳಲ್ಲಿನ, ಬಿ.ಎಸ್.ಸಿ., ಬಿ.ಸಿ.ಎ., ಬಿಎಡ್, ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ವಲಯ ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರದ ಜೊತೆ ಸನ್ಮಾನಿಸಲಾಯಿತು. ಇದರ ಜೂತೆಗೆ ಮತ್ತು ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಸದಸ್ಯರನ್ನು ಸನ್ಮಾನಿಸಲಾಯಿತು

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡರ್ಸ್ ಅಭಿನಂದನ ಭಾಷಣ ಮಾಡಿದರು. ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ಮೈಕಲ್ ಪಿಂಟೊ, ನಿಯೋಜಿತೆ ಅಧ್ಯಕ್ಷೆ ಮೇಬಲ್ ಡಿಸೋಜಾ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕುಂದಾಪುರ ವಲಯದ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೆವೊಟ್ ಪ್ರತಿಷ್ಟಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಸ್ವಾಗತಿಸಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರಿಯ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು. ಕುಂದಾಪುರ ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಾರ್ಯಕ್ರವನ್ನು ನೆಡೆಸಿಕೊಟ್ಟರು.