ಗಣರಾಜ್ಯದಿಂದ ದೇಶದಲ್ಲಿ ಏಕತೆ ಉಂಟಾಯಿತು, ಈಗ ನಮ್ಮಳೊಗೆ ದ್ವೇಷ ಹಿಂಸೆ ಏಕೆ? : ಸ.ಕ. ಅರುಣಪ್ರಭಾ

ಗಣರಾಜ್ಯದಿಂದ ದೇಶದಲ್ಲಿ ಏಕತೆ ಉಂಟಾಯಿತು, ಈಗ ನಮ್ಮಳೊಗೆ ದ್ವೇಷ ಹಿಂಸೆ ಏಕೆ? : ಸ.ಕ. ಅರುಣಪ್ರಭಾ


ಕುಂದಾಪುರ, ಜ.27: ‘ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಹಂಚಿ ಹೋದ ಭಾರತ ಸ್ವಾಂತಂತ್ರ್ಯ ಗಳಿಸಿದ ನಂತರ ಗಣರಾಜ್ಯೋತ್ಸವದಿಂದಾಗಿ ಏಕತೆಯಿಂದ ಕೂಡಿ, ಪ್ರಪಂಚದಲ್ಲಿ ಬಲಿಷ್ಟ ದೇಶವಾಗಿ ಹೊರಹೊಮ್ಮಿತು, ಗಣರಾಜ್ಯದಿಂದಾಗಿ ನಾವೆಲ್ಲ ಭಾರತೀಯರು ಒಂದೆ, ಸರ್ವರಿಗೂ ಸಮಾ ಪಾಲು’ ಎಂದು ಸಹಾಯಕ ಕಮಿಷನರ್ ಎಚ್.ಎಸ್. ಅರುಣಪ್ರಭಾ ಹೇಳಿದರು. ಅವರು ಕುಂದಾಪುರ ತಾಲೂಕು ಆಡಳಿತ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಗೈದು ಸಂದೇಶ ನೀಡಿದರು.
‘ನಾವೆಲ್ಲಾ ಉಸಿರಾಡುವ ಗಾಳಿ, ಉಪಯೋಗಿಸುವ ನೀರು, ಅಗ್ನಿ ಇದೆಲ್ಲಾ ಒಂದೇ ಆಗಿರುವಾಗ, ನಮ್ಮಳೊಗೆ ದ್ವೇಷ ಹಿಂಸೆ ಏಕೆ? ನಾವೆಲ್ಲಾ ಭಾರತೀಯರು ಸಹೋದರ ಸಹೋದರಿಯಂತೆ ಬಾಳೊಣ’ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷೆ ತಾ.ಪಂ.ಅಧ್ಯಕ್ಷೆ ಶ್ಯಾಮಲ ಎಸ್. ಕುಂದರ್ ಸಂದೇಶ ನೀಡಿದರು. ಮುಖ್ಯ ಅತಿಥಿ ತಾ.ಪಂ. ಉಪಾಧ್ಯಕ್ಷ ರಾಮ್‍ಕಿಶನ್ ಹೆಗ್ಡೆ, ಡಿ.ವೈ.ಎಸ್ಪಿ ಬಿ.ಪಿ ದಿನೇಶ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಮಂಜಯ್ಯ, ತಾ.ಪಂ. ಇಒ ಕಿರಣ್ ಪಡ್ನೆಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಕಮಲಾ, ಮುಖ್ಯಾಧಿಕಾರಿ ಗೋಪಾಲಕ್ರಷ್ಣ ಶೆಟ್ಟಿ, ಮೊದಲದವರು ಉಪಸ್ಥಿತರಿದ್ದರು. ಪೊಲೀಸ್, ಗ್ರಹದಳ, ಎನ್ ಸಿಸಿ ಭಾರತ್‍ಸೇವಾದಳ ಸೇರಿದಂತೆ ಹಲವು ಶಾಲೆಗಳ ದೈಹಿಕ ಕಸರತ್ತು, ದೇಶ ಭಕ್ತಿ ಕಾರ್ಯಕ್ರಮಗಳು ಪ್ರದರ್ಶನಗೊಂಡವು.