

ಬರಹ ;ಮ್ಯಾಕ್ಷಿ ಡಿಸೋಜಾ
ಮಾನ್ಯ ಮುಖ್ಯಮಂತ್ರಿಗಳಾದ ನಮ್ಮ ಪ್ರೀತಿಯ ಸಿದ್ದರಾಮಯ್ಯ ರವರೇ,ಆದಷ್ಟು ಬೇಗ ಜನ ಔಷದಗಳಲ್ಲಿರುವ ಖಾಸಗಿ ಔಷಧಗಳನ್ನು ಮಾರಾಟ ಮಾಡೋದನ್ನು ನಿಲ್ಲಿಸಿ , ಸರಕಾರಿ ಆಸ್ಪತ್ರೆ ಹತ್ತಿರ ಇರುವ ಜನ ಔಷಧಿ ಕೇಂದ್ರಗಳು ತಮ್ಮ ಲಾಭಕ್ಕಾಗಿ ಖಾಸಗಿ ಔಷಧಗಳನ್ನು ಮಾರಾಟ ಮಾಡುತ್ತಿವೆ ಇದರ ಬಗ್ಗೆ ಗಮನ ಹರಿಸಿ.
ಹೆಸರು ಪ್ರದಾನ ಮಂತ್ರಿ ಜನ ಔಷಧ ಕೇಂದ್ರ ,ಮಾರಾಟಮಾಡೋದು ಖಾಸಗಿ ಜನರೀಕ್ ಔಷಧಗಳು,ಸರಕಾರಿ ಜನ ಔಷಧ ಕೇಂದ್ರ ಅಂದರೆ ಕೇವಲ ಜನಪುಷದಿ ಮುದ್ರೆಯುಳ್ಳ ಔಷಧಗಳನ್ನು ಮಾರಾತಮಾಡೋದು,ಕೇಂದ್ರ ಸರಕಾರ ಔಷಧ ಸರಬರಾಜು ಮಾಡೋದಕ್ಕೆ ವಿಫಲವಾಗಿದೆ ,ಇದಕ್ಕೆ ನಮ್ಮ ಸರಕಾರಕ್ಕೆ ಉತ್ತಮ ಸಮಯ ಹಾಗಾಗಿ ರಾಜ್ಯದಂತ ಔಷಧ ನಿಯಂತ್ರಕರಿಗೆ ಸಲಹೆ ಕೊಡಿ ,ಯಾವುದೇ ಜನ ಔಷಧ ಕೇಂದ್ರಗಳಲ್ಲಿ ಖಾಸಗಿ ಔಷಧಗಳು ಸಿಕ್ಕಿದಲ್ಲಿ ಪರವಾನಿಗೆ ರದ್ದು ಪಡಿಸಿ.
ಪ್ರತಿ ತಿಂಗಳಿಗೊಮ್ಮೆ ಪರಿಶೀಲಿಸ ಬೇಕು.,ಔಷಧ ನಿಯಂತ್ರಕರು ಒಂದು ರಾಜಕೀಯ ಪಕ್ಷದ ಗುಲಾಮರಾಗಿದ್ದಾರೆ , ಸರಿಯಾದ ಕ್ರಮ ಕೈಗೊಳ್ಳಬೇಕು. ಉದಾರಣೆಗೆ ಮಕ್ಕಳು ತಿನ್ನುವ ಆಹಾರ ಸೇರೆ ಲ್ಯಾಕ್,ಮಹಿಳೆಯರು ಉಪಯೋಗಿಸುವ ಖಾಸಗಿ ವಿಸ್ ಪರ್, ಜಾಹೀರಾತುಗಳ ಔಷಧಗಳು, ಓ ಆರ್ ಎಸ್ ಎನರ್ಜಿ ಡ್ರಿಂಕ್,ಪ್ರತಿಯೊಂದು ಖಾಸಗಿ ಔಷಧಗಳು ಮಾರಾಟವಾಗುತ್ತಿವೆ, ಇದಕ್ಕೆ ರಾಜ್ಯ ಸರಕಾರ ಕಡಿವಾಣ ಹಾಕಬೇಕಾಗಿದೆ,
ದಯವಿಟ್ಟು ಹಾಗೆ ಮಾಡಿದ್ದಲ್ಲಿ ಜನ ಔಷಧ ಕೇಂದ್ರಗಳು ತನ್ನಿಂತಾನೇ ಮುಚ್ಚಿ ಕೊಳ್ಳುತ್ತವೆ,ಜನ ಔಷಧ ವಿತರಕರಿಂದ ಔಷಧಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ ಹಾಗಾಗಿ ಖಾಸಗಿ ಕಳಪೇಮಟ್ಟದ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ, ದಯವಿಟ್ಟು ಇದರ ಬಗ್ಗೆ ಪ್ರತಿನಿಧಿಗಳು ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ,ಜನ ಔಷಧ ಕೇಂದ್ರ ಗಳನ್ನು ತಪಾಸಣೆ ಮಾಡಬೇಕಾಗಿ ತಮ್ಮಲ್ಲಿ ಕಳಂಕಳಿಂತನಾಗಿ ವಿನಂತಿಸುತ್ತೇನೆ.ವಿಶೇಷವಾಗಿ ಒಂದು ಪಕ್ಷದ ಹಿಡಿತದಲ್ಲಿರು ಇರುವ ಉಡುಪಿ ಕುಂದಾಪುರದಲ್ಲಿ ಕಡೆ ವಿಶೇಷ ಗಮನ ಹರಿಸಿ.
– ಮ್ಯಾಕ್ಸಿಮ್ ಡಿಸೋಜಾ.