

ಕುಂದಾಪುರ;ಮೇ. 22; ಮಾಜಿ ಪ್ರಧಾನಿ ರಾಜೀವ್ ಗಾಂಧಿ , ಆಧುನಿಕ ಭಾರತದ ಶಿಲ್ಪಿ ಮತ್ತು ಮಾಹಿತಿ ತಂತ್ರಜ್ಞಾನದ ಅಡಿಪಾಯವನ್ನು ದೇಶದಲ್ಲಿ ಹಾಕಿದ ದೂರದೃಷ್ಟಿಯ ನಾಯಕರೆಂದು ಕುಂದಾಪುರ ವಿಧಾನಸಭೆಯ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆಯವರು ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ನುಡಿದರು.
ಅವರು ಬುಧವಾರ ಮೇ.21 ರಂದು , ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳವಾದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಪಕ್ಷದ ಮುಖಂಡರನ್ನು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು .
ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ್ ಶೆಟ್ಟಿಯವರು ರಾಜೀವ್ ಗಾಂಧಿಯವರು ಎಲ್ ಟಿ ಟಿ ಭಯೋತ್ಪಾದನೆ ನಿರ್ಮೂಲನೆಗೆ ಪಣತೊಟ್ಟು , ತನ್ನ ಪ್ರಾಣವನ್ನು ದೇಶಕ್ಕಾಗಿ ಬಲಿಕೊಟ್ಟ ಮಹಾ ನಾಯಕ ಎಂದರು.
ತಾಲೂಕು ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ ಅವರು ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲವನ್ನು ನೀಡಿದ ಮಾಜಿ ಪ್ರಧಾನಿ , ಅಧಿಕಾರ ವಿಕೇಂದ್ರೀಕರಣಕ್ಕೆ ಮನ್ನಣೆಯನ್ನು ನೀಡಿ , ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಅಧಿಕಾರವನ್ನು ನೀಡಿದ ಕೀರ್ತಿ ಸಲ್ಲಬೇಕಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ ರಾಜೀವ್ ಗಾಂಧಿ ಅವರು ಕೃಷಿ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ದೇಶದಲ್ಲಿ ಸಮಾನವಾಗಿ ಒತ್ತುಕೊಟ್ಟು , ಎಂದೂ ಪ್ರಚಾರಕ್ಕಾಗಿ ತನ್ನ ಎದೆಯಳತೆಯನ್ನು ತಿಳಿಸದೆ ,ಪ್ರಧಾನಿ ಹುದ್ದೆಗೆ ಘನತೆಯನ್ನು ತಂದರು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜೀತ್ ಪೂಜಾರಿ , ಹಿರಿಯರಾದ ಅಬ್ದುಲ್ಲಾ ಕೊಡಿ , ಪಂಚಾಯತ್ ಸದಸ್ಯರಾದ ವಿಜಯಧರ್ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ , ಪ್ರಭಾವತಿ ಶೆಟ್ಟಿ , ಅಶೋಕ್ ಸುವರ್ಣ , ಶಶಿಧರ ಕೋಟೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿ , ಜಿಲ್ಲಾ ಅಲ್ಪಸಂಖ್ಯಾತ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸೀಮಾ ಚಂದ್ರ ಪೂಜಾರಿ , ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮಹಮ್ಮದ್ ಅಲ್ಫಾಜ್ , ಅರುಣ್ ಪಟೇಲ್ , ವೇಣುಗೋಪಾಲ್ , ಮೇಬಲ್ ಡಿಸೋಜಾ , ಎಡೊಲ್ಫ್ ಡಿಕೊಸ್ಟಾ , ಅಬ್ಬಾಸ್ ಬ್ಯಾರಿ , ಇನ್ನಿತರರು ಉಪಸ್ಥಿತರಿದ್ದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೋ ಸ್ವಾಗತಿಸಿ , ನಿರೂಪಿಸಿದರು. ತಾಲೂಕು ಗ್ಯಾರೆಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ ವಂದಿಸಿದರು.







