

ಕುಂದಾಪುರ, ಮೇ.19; ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸಬಾ ಘಟಕ ಮತ್ತು ಜನಸಾಮನ್ಯ ಆಯೋಗದ ವತಿಯಿಂದ ಕುಂದಾಪುರ ರೋಜರಿ ಚರ್ಚಿನ ವ್ಯಾಪ್ತಿಯಲ್ಲಿನ ಉದ್ಯಮಿಗಳ ಮಹೋತ್ಸವ ಮೇ. 19 ರಂದು ಚರ್ಚ್ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾದ ಉದ್ಯಮಿ ಅಲ್ವಿನ್ ಕ್ವಾಡ್ರರ್ಸ್ ‘ಸ್ವ ಉದ್ಯಮಿ ಅಥವ ಸ್ವಂತ ವ್ಯಾಪರ ವಹಿವಾಟು ಮಾಡುವರು, ಸ್ವ ಪ್ರಯತ್ನದಿಂದ ಉತ್ತಮ ಗುರಿಯೊಂದಿಗೆ ಆರಂಭಿಸಬೇಕು, ಅವರು ಇತರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಮುನ್ನೇಡೆದರೆ ಉದ್ಯಮ ಸಫಲವಾಗುತ್ತೆ” ಎಂದು ಹೇಳಿದರು.
ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ದೇವರ ಮೇಲೆ ವಿಸ್ವಾಸವಿಟ್ಟು, ದೇವರ ಆಧಾರವನ್ನು ಕೋರಿಕೊಳ್ಳಬೇಕು, ನಿರಂತರ ದೈವಿಕ ಜೀವನದೊಂದಿಗೆ ಸಾಗಬೇಕು, ಅಲ್ಲದೆ ಪರಿಶ್ರಮ ಪಡಬೇಕು ಜೊತೆಗೆ ಪ್ರಮಾಣಿಕ ನಿಲುವಿನೊಂದಿಗೆ ನೆಡೆದರೆ, ತಮ್ಮ ಉದ್ಯಮದಲ್ಲಿ ಉತ್ತಮ ಫಲ ಸಿಗುತ್ತದೆ” ಎಂದರು.
ಸುಮಾರು 35 ಉದ್ಯಮಿಗಳು ಜೊತೆಗೂಡಿದರು. ಕಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಕ.ಸ. ದ ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು. ಡಾ.ಸೋನಿ ಡಿಕೋಸ್ಟಾ ನಿರೂಪಿಸಿದರು.





