

ಕುಂದಾಪುರ: ಚಿಕ್ಕಬಳ್ಳಾಪುರದ ವರನ ಮನೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಮಿನಿ ಬಸ್ ಅಪಘಾತವಾಗಿ ಹಲವರಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ. ಮಹಾಬಲ (44),ಗುಜ್ಜಾಡಿ ಗ್ರಾಮ, ಕುಂದಾಪುರ ಇವರ ಮೈದಿನೆಯ ವಿವಾಹವು ಚಿಕ್ಕಬಳ್ಳಾಪುರದ ಸುರೇಶ ರವರೊಂದಿಗೆ ತ್ರಾಸಿಯಲ್ಲಿ ನಡೆದಿತ್ತು. ಮೇ 11 ರಂದು ಮನೆಯವರೆಲ್ಲರೂ ಹೆಣ್ಣನ್ನು ಗಂಡಿನ ಮನೆಯಾದ ಚಿಕ್ಕಬಳ್ಳಾಪುರದಿಂದ ಕರೆದುಕೊಂಡು ಬರಲು ತ್ರಾಸಿಯ ರಾಘವೇಂದ್ರ ರವರ KA-20-D2599 ನೇ ಮಿನಿ ಬಸ್ ಸಿಟರ್ ವಾಹನವನ್ನು ಬಾಡಿಗೆ ಮಾಡಿಕೊಂಡು ಅವರ ಕುಟುಂಬದವರೆ ಆದ ಸುಮಾರು 21 ಜನ ತ್ರಾಸಿಯಿಂದ ಹೊರಟು ಚಿಕ್ಕಬಳ್ಳಾಪುರ ತಲುಪಿ ಅಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಹೆಣ್ಣನ್ನು ಕರೆದುಕೊಂಡು ದಿನಾಂಕ ಮೇ 12 ರಂದು ಮಧ್ಯಾಹ್ನ 2:30 ಗಂಟೆಗೆ ಹೊರಟು ಆಗುಂಬೆ ಮಾರ್ಗವಾಗಿ ತ್ರಾಸಿಗೆ ಹೋಗಲು ಅಲ್ಬಾಡಿಯ ಬರಿಗದ್ದೆ ನೀರ್ ಟ್ಯಾಂಕ್ ಬಳಿ ಬರುತ್ತಿರುವಾಗ ಮೇ 13 ರಂದು ಬೆಳಗಿನ ಜಾವ 3:30 ಗಂಟೆಗೆ ಅವರ ಮಿನಿ ಬಸ್ ಸಿಟರ್ ವಾಹನದ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದರಿಂದಾಗಿ ವಾಹನದಲ್ಲಿದ್ದವರಿಗೆ ಗಾಯನೋವುಗಳಾಗಿದ್ದು ಅಲ್ಲಿದ್ದ ಸಾವ೯ಜನಿಕರು ಅವರುಗಳನ್ನು ಉಪಚರಿಸಿ ಹೆಬ್ರಿ ಹೆಲ್ತ್ ಕೇರ್ ಸೆಂಟರ್ ಗೆ ಖಾಸಗಿ ವಾಹನದಲ್ಲಿ ಕಳುಹಿಸಿದ್ದು ನಂತರ ವೈದ್ಯಾದಿಕಾರಿಯವರು ಪರೀಕ್ಷಿಸಿ ಮುಖಕ್ಕೆ ಗಾಯಗೊಂಡ ಶಿವಾನಂದ, ಪಷ್ಪಾ, ಕಾವೇರಿ, ಮಂಜು, ಶಾಂತ ಹಾಗೂ ನಿಶಾಂತ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಅಂಬುಲೆನ್ಸ್ ವಾಹನದಲ್ಲಿ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿದ್ದಾರೆ. ಉಳಿದವರನ್ನು ಪ್ರಥಮ ಚಿಕಿತ್ಸೆಯನ್ನು ನೀಡಿ ಹೊರ ರೋಗಿಯಾಗಿ ಬಿಡುಗಡೆಗೊಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.