

ಶ್ರೀನಿವಾಸಪುರ : ಇಲ್ಲಿನ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ವಿಶೇಷ ಸಮಾರಂಭವೊಂದು ಜರುಗಿತು. ಇತ್ತೀಚಿಗೆ ಬೆಂಗಳೂರು ವಿಭಾಗ-2 ಕಚೇರಿಗೆ ವರ್ಗಾವಣೆಗೊಂಡಿರುವ ಉಪಶಾಖೆಯ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಅವರಿಗೆ ವಿದಾಯ ಕೋರಲಾಯಿತು ಹಾಗೂ ಅವರ ಸೇವೆಗಳನ್ನು ಗೌರವಿಸಲಾಯಿತು. ಈ ಸಂದರ್ಭ ಅವರ ಧರ್ಮಪತ್ನಿಯೊಂದಿಗೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹಳೆಯ ಜವಾಬ್ದಾರಿಯಿಂದ ಬಿಡುಗಡೆಯಾದ ಎಸ್.ವಿ. ಪ್ರಸಾದ್ ಅವರು ಶ್ರೀನಿವಾಸಪುರದಲ್ಲಿ ಜನಸಾಮಾನ್ಯರ ಜತೆ ಸಮರ್ಪಿತ ಸೇವೆ ನೀಡಿ ಗೌರವವನ್ನು ಗಳಿಸಿದ್ದರು. ಸಿಬ್ಬಂದಿ ಮತ್ತು ಅಧಿಕಾರಿಗಳು ಅವರ ಸೇವಾ ಮನೋಭಾವವನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಉಪಶಾಖೆಯ ನೂತನ ವ್ಯವಸ್ಥಾಪಕಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಬಿ. ವಿಜಯಕುಮಾರಿಗೆ ಆತ್ಮೀಯ ಬರಮಾಡಿಕೊಳ್ಳಲಾಯಿತು. ಎಲ್ಲರೂ ಹೊಸ ವ್ಯವಸ್ಥಾಪಕರಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಐಸಿ ಶಾಖೆಯ ವ್ಯವಸ್ಥಾಪಕ ಕರುಣಾಹರನ್, ಮಾಲೂರು ಉಪಶಾಖೆ ವ್ಯವಸ್ಥಾಪಕ ಕಿಶೋರ್, ಸ್ಥಳೀಯ ಅಧಿಕಾರಿ ರವಿಶಂಕರ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ, ವಿ. ಕುಲಕರ್ಣಿ, ಶ್ರೀನಿವಾಸ್, ಲಿಖಿತ್ ಕುಮಾರ್ ಹಾಗೂ ಹಲವಾರು ಪ್ರತಿನಿಧಿಗಳು ಭಾಗವಹಿಸಿದ್ದರು.