

ಶ್ರೀನಿವಾಸಪುರ : ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾದ್ವಾರ ನಿರ್ಮಾಣ ಮಾಡಿರುವಂಥದ್ದು ತುಂಬಾ ಸಂತೋಷದ ವಿಷಯ ಒಂದು ಮನೆಗೆ ಮುಖ್ಯ ಬಾಗಿಲು ಎಷ್ಟು ಮುಖ್ಯವೋ ಗ್ರಾಮಕ್ಕೆ ಅದೇ ರೀತಿ ಮಹಾದ್ವಾರ ಅಷ್ಟೆ ಮುಖ್ಯ ಎಲ್ಲರೂ ಒಗ್ಗಟ್ಟಿನಿಂದ ಸಂತೋಷವಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದ್ದು ಇದೇ ರೀತಿಯಾಗಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಸೌಹಾರ್ದತೆಯಿಂದ ಬದುಕಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.
ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ಮಹಾದ್ವಾರ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೊರವನಕೊಳ್ಳ ಮಾತನಾಡಿ ನೂತನವಾಗಿ ದೇವಾಲಯ ನಿರ್ಮಾಣ ಹಾಗೂ ಮಹದ್ವಾರ ನಿರ್ಮಾಣ ಮಾಡಿದ್ದು ದೇವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಗ್ರಾಮದಲ್ಲಿ ಎಲ್ಲರೂ ಸಹ ತುಂಬಾ ಸೌಹಾರ್ದತೆಯಿಂದ ಬದುಕುತ್ತಿದ್ದು ಇದೇ ರೀತಿಯಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಗುಡೇಗೌಡ ಮಾತನಾಡಿ ಗ್ರಾಮಸ್ಥರ ಸಹಕಾರದೊಂದಿಗೆ ತುಂಬಾ ಬಹಳ ಅದ್ಭುತವಾಗಿ ಕಾರ್ಯಕ್ರಮ ನಡೆಯಿತು, ಮಹದ್ವಾರ ನಿರ್ಮಾಣ ಮಾಡಲು ಸಹಕಾರ ನೀಡಿದಂತಹ ಎಲ್ಲಾ ಸ್ನೇಹಿತರಿಗೂ ಎಲ್ಲ ಗ್ರಾಮಸ್ಥರಿಗೂ ಧನ್ಯವಾದಗಳು ತಿಳಿಸಿದರು.
ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ವೇಣುಗೋಪಾಲಸ್ವಾಮಿ ತಂಡ ನೆರವೇರಿಸಿಕೊಟ್ಟರು. ಗ್ರಾಮದ ಮುಖಂಡರಾದ ಮುನಿಯಪ್ಪ, ಮುನೇಗೌಡ, ನಂಜುಡಗೌಡ, ಪಿಳ್ಳರಾಮೇಗೌಡ, ಅಶ್ವತಗೌಡ, ಬಿ.ಎಂ.ರವಿಕುಮಾರ್, ಕೆ.ನಾಗರಾಜಪ್ಪ, ಎಂ.ನಾಗರಾಜಗೌಡ, ಬಿಜೆಪಿ ಶಿವಣ್ಣ, ಚೌಡಪ್ಪ, ಟಿಪಿಎಸ್ ಕೃಷ್ಣಮೂರ್ತಿ, ಲಾಯರ್ ಎನ್.ಶ್ರೀನಿವಾಸಗೌಡ, ಮುನಿವೆಂಕಟರೆಡ್ಡಿ, ಶ್ರೀನಿವಾಸಗೌಡ, ಸ್ಕಂದಶ್ರೀನಿವಾಸ್, ಚೆನ್ನಕೇಶವ, ಚಂದ್ರಶೇಖರ್ ಹಾಗು ಗ್ರಾಮಸ್ಥರು ಇದ್ದರು.
