

ಬೆಂಗಳೂರು: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು ಮೇ 2ರಂದು ಶುಕ್ರವಾರ ಪ್ರಕಟವಾಗಿದ್ದು, ಈ ಬಾರಿ ಶೇ 66.14 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಮಾರ್ಚ್ – ಎಪ್ರಿಲ್ ತಿಂಗಳಲ್ಲಿ 2024-25ನೇ ಸಾಲಿನ 55/0 ಪರೀಕ್ಷ-1 ನಡೆದಿದ್ದು, ಇಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದ್ದಾರೆ. ಕಲಬುರಗಿ ಜಿಲ್ಲೆಯು ಕೊನೆ ಸ್ಥಾನ ಪಡೆದುಕೊಂಡಿದೆ.
22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 91.12% ಪಡೆದುಕೊಳ್ಳುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಯು 89.96% ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದೆ. 83.19% ಪಡೆದುಕೊಂಡ ಉತ್ತರ ಕನ್ನಡ ಮೂರನೇ ಸ್ಥಾನ, 82.29% ಪಡೆದುಕೊಂಡ ಶಿವಮೊಗ್ಗ ನಾಲ್ಕನೇ ಸ್ಥಾನ, ಕೊಡಗು 82.21% ಪಡೆದುಕೊಂಡು ಐದನೇ ಸ್ಥಾನದಲ್ಲಿದೆ. ಇನ್ನು ಹಾಸನ 82.12%, ಶಿರಸಿ 80.47%, ಚಿಕ್ಕಮಗಳೂರು 77.9%, ಬೆಂಗಳೂರು ಗ್ರಾಮಾಂತರ 74.02%, ಬೆಂಗಳೂರು ದಕ್ಷಿಣ 72.3% ಪಡೆದುಕೊಂಡು ಟಾಪ್ 10ನಲ್ಲಿದೆ. 42.43% ಪಡೆದುಕೊಂಡ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
ಸರ್ಕಾರಿ ಶಾಲೆಗಳಲ್ಲಿ ಅತೀ ಹೆಚ್ಚು ಫಲಿತಾಂಶ ಬಂದಿದೆ. 91.12 ಶೇಕಡಾದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, 89.96 ಶೇಕಡಾದೊಂದಿಗೆ ಉಡುಪಿ ದ್ವಿತೀಯ ಹಾಗೂ 83.19 ಶೇಕಡಾದೊಂದಿಗೆ ಉತ್ತರ ಕನ್ನಡ ತೃತೀಯ ಸ್ಥಾಸವನ್ನು ಪಡೆದುಕೊಂಡಿದೆ. ಕಲಬುರ್ಗಿ ಕೊನೆ.
ಸ್ಥಾನ ಪಡೆದಿದೆ. ಈ ಬಾರಿ 22 ಮಂದಿ 625 ಕ್ಕೆ 625 ಅಂಕ ಪಡೆದು ಸಾಧನ ಮಾಡಿದ್ದಾರೆ.