

ಕುಂದಾಪುರ, ಎ.28; ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿನಲ್ಲಿ ಕಿರು ಸಮುದಾಯದ ದಿವಸವನ್ನು ಎ 27 ರಂದು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಧರ್ಮ ಧರ್ಮಪ್ರಾಂತ್ಯದ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ।ಹೆರಾಲ್ಡ್ ಪಿರೇರಾ ಇವರ ಮುಂದಾಳತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿದರು. ವಾಳೆಯ ಕಿರುಸಮುದಾಯದ ಸಂಚಾಲಕರು ಬಲಿದಾನದ ಪ್ರಾಥನ ವಿಧಿಯನ್ನು ನೆಡೆಸಿಕೊಟ್ಟರು.
ನಂತರ ನೆಡೆದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರಿಂದ ಪ್ರಾರ್ಥನ ಗೀತೆಯ ಮೂಲಕ ಚಾಲನೇ ನೀಡಲಾಯಿತು. ವೈ.ಸಿ.ಎಸ್. ಮತ್ತು ಐ.ಸಿ.ವೈ.ಎಮ್ ಸದಸ್ಯರಿಂದ ಗೀತೆಗಳು, ಕಿರುನಾಟಕಗಳು ಪ್ರದರ್ಶನ ಗೊಂಡವು. ಬಳಿಕ ಕುಂದಾಪುರ ಚರ್ಚಿನ 13 ವಾಳೆಯವರು ಸಮುದಾಯದ ಗೀತೆಗಳ ನ್ರತ್ಯ ಪ್ರದರ್ಶನ ಜೊತೆಗೆ ಕಿರು ನಾಟಕ, ನ್ರತ್ಯ ಕವಾಲಿಗಳನ್ನು ಪ್ರದರ್ಶಸಿದರು. ಈ ಸಂದರ್ಭದಲ್ಲಿ ಕುಂದಾಪುರ ಚರ್ಚಿನ ವ್ಯಾಪ್ತಿಗೆ ಒಳ ಪಟ್ಟ ವಿಶೇಷ ಸಾಧಕರಾದ, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಅನುಷ್ಠಾನ ಕುಂದಾಪುರ ತಾಲೂಕು ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಮೂರು ಅವಧಿಗೆ ಕುಂದಾಪುರ ಚರ್ಚಿನ ಸರ್ವ ಆಯೋಗಗಳ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಿದ ಪ್ರೇಮಾ ಡಿಕುನ್ಹಾ, ಉಡುಪಿ ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್ ಅಧ್ಯಕ್ಷರಾಗಿ ಆಯ್ಕೆಯಾದ ನೀತಿನ್ ಬರೆಟ್ಟೊ. ಐ.ಸಿ.ವೈ.ಎಮ್ ಕುಂದಾಪುರ ಇದರ ಅಧ್ಯಕ್ಷರಾದ ರೀಯಾಲಿಟಿ ಶೋ ಸಂಗೀತ ಪ್ರತಿಭೆಯಾದ, ಸ್ಯಾಮುವೇಲ್ ಲುವಿಸ್ ಇವರನ್ನು ಸನ್ಮಾನಿಸಲಾಯಿತು’
ಯಾಜಕತ್ವ ದೀಕ್ಷೆ ಪಡೆದು 30 ನೇ ವರ್ಷಕ್ಕೆ ಕಾಲಿಟ್ಟಿರುವ ಶುಭ ಸಂದರ್ಭದಲ್ಲಿ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಹಾಗೂ ಇವರ ಜೊತೆಗೇನೆ ಧರ್ಮ ದೀಕ್ಷೆ ಪಡೆದ ಆಯೋಗದ ನಿರ್ದೇಶಕರಾದ ವಂ।ಹೆರಾಲ್ಡ್ ಪಿರೇರಾ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಆಚರಿಸಿ, ಕೇಕ್ ಕತ್ತರಿಸಿ, ಚರ್ಚಿನ ಗಾಯನ ಮಂಡಳಿ ಜೊತೆ ಅಭಿನಂದನೆ ಗೀತೆ ಹಾಡಿ ಶುಭ ಹಾರೈಸಿ, ಹಣಕಾಸು ಸಮಿತಿ ಸದಸ್ಯರ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಯೋಗದ ನಿರ್ದೇಶಕರಾದ ವಂ।ಹೆರಾಲ್ಡ್ ಪಿರೇರಾ ಮಾತನಾಡಿ “ಇಲ್ಲಿನ ಕಿರು ಸಮುದಾಯದ ಕಾರ್ಯವೈಕರಿ ಅತ್ಯುತ್ತಮವಾಗಿದೆ. ಇಲ್ಲಿನ ಕಿರು ಸಮುದಾಯಕ್ಕೆ 30 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇವತ್ತು ಎಲ್ಲಾ ವಾಳೆಯವರು ಸಮುದಾಯ ಗೀತೆಯೊಂದಿಗೆ, ಕಿರು ನಾಟಕ, ನ್ರತ್ಯ, ಕವಾಲಿಯಂತ ಪ್ರದರ್ಶನ ನೀಡಿದ್ದು, ಅತ್ಯುತ್ತಮವಾಗಿತ್ತು, ಎಂದು ಶ್ಲಾಗಿಸಿ ಸಮುದಾಯ ಸಭೆ ಒಟ್ಟುಕೂಡುವಲ್ಲಿ ನಮ್ಮವರಿಗೆ ಮಾತ್ರ ಆಧರಿಸುವುದಲ್ಲಾ, ಇತರ ಸಮುದಾಯದವರಲ್ಲೂ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳು ಇರುತ್ತದೆ, ಅವರನ್ನು ನೀವು ಸಹಾಯ ಹಸ್ತ ನೀಡಬೇಕು, ಯಾವ ಚರ್ಚಿನಲ್ಲಿ ಕಿರು ಸಮುದಾಯಕ್ಕೆ ಬೆಂಬಲ ನೀಡುವ ಧರ್ಮಗುರುಗಳಿರುತ್ತಾರೋ ಆ ಚರ್ಚ್ ಪ್ರಗತಿ ಕಾಣುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿಕೊಂಡ ಚರ್ಚಿನ ಧರ್ಮಗುರು “ಅ।ವಂ। ಪೌಲ್ ರೇಗೊ “ಮಾತನಾಡಿ ಇಂದು ನೆಡೆದ ಕಿರು ಸಮುದಾಯದ ದಿನ ನನ್ನ ಚಿಂತನೆಕ್ಕಿಂತಲೂ ಹೆಚ್ಚು ಸಫಲವಾಗಿದೆ, ಎಷ್ಟೊಂದು ಪ್ರತಿಭೆಗಳನ್ನು ನಾನಿಲ್ಲಿ ಇವತ್ತು ಕಂಡೆ, ಚಿಕ್ಕ ಮಗುವಿನಿಂದ ಹಿಡಿದು, ಅಜ್ಜ ಅಜ್ಜಿಯರು ಕೂಡ ಪ್ರದರ್ಶನದಲ್ಲಿ ಪಾತ್ರವಹಿಸಿದರು. ನನ್ನ ಹ್ರದಯ ಸಂತೋಷದಿಂದ ತುಂಬಿ ಬಂದಿದೆ’ ಎಂದು ಅವರು ಎಲ್ಲರನ್ನು ಅಭಿನಂದಿಸಿ, ಶುಭಕೋರಿದರು.
ಕಿರು ಸಮುದಾಯ ಆಯೋಗದ ವರದಿಯನ್ನು ಪ್ರಮೀಳಾ ಡಿಸಿಲ್ವಾ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವೀಜೆತರಾದವರಿಗೆ ಬಹುಮಾನಗಳನ್ನು ನೀಡಲಾಯಿತು, ಬಹುಮಾನಿತರ ಹೆಸರುಗಳನ್ನು ರೇಖಾ ಡಿಆಲ್ಮೇಡಾ ವಾಚಿಸಿದರು. ಸನ್ಮಾನಿತರ ಪರಿಚಯವನ್ನು ಶಾಂತಿ ಬರೆಟ್ಟೊ, ಲವೀನಾ ಡಿಆಲ್ಮೇಡಾ ನೀಡಿದರು. ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕಿ ಡಾ.ಸೋನಿ ಡಿಕೋಸ್ತಾ ವಂದಿಸಿದರು.ಸ್ಟುವರ್ಟ್ ಒಲಿವೆರಾ, ಹೇವಿನ್ ಕೋತ್, ಜಾಸ್ಮಿನ್ ಡಿಆಲ್ಮೇಡಾ ಮತ್ತು ಡೆಲ್ವಿಯಾ ಬರೆಟ್ಟೊ ನಿರೂಪಿಸಿದರು.











































































































































































































