

ಕೋಟ, ಎ.20; ಕೋಟ ಸಂತ ಅಂತೋನಿ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನು ಆಚರಿಸಲಾಯಿತು.
ಪಾಸ್ಕ ಆಚರಣೆಯ ಪ್ರದವಾಗಿ ಚರ್ಚಿನ ದರ್ಮಗುರು ವಂ. ಸ್ಟ್ಯಾನಿ ತಾವ್ರೊ, ಅತಿಥಿಗಳಾದ ಧರ್ಮಗುರು ವಂ. ಚಾರ್ಲ್ಸ್ ಸಲ್ಡಾನ ಮತ್ತು ದರ್ಮಗುರು ವಂ. ದೀಪಕ್ ಪುಟಾರ್ಡೊ ಪ್ರಾರ್ಥನಾ ವಿಧಿಗಳನ್ನು ನೆಡೆಸಿಕೊಟ್ಟರು. ಚರ್ಚಿನ ದರ್ಮಗುರು ವಂ. ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ನೀಡಿದರು.























