

ಕುಂದಾಪುರ ಎ.19: ಶುಭ ಶುಕ್ರವಾರದಂದು ಎ.18 ರಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜ್ನಾಪಿಸಿ ಪ್ರಾರ್ಥನೆಗಳ ಮೂಲಕ ನೇರವೆರಿಸಿದರು
ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
ಸಂಜೆಯ ಪ್ರಾರ್ಥನ ವಿಧಿಗಳನ್ನು ಬ್ರಹ್ಮಾವರ ಹೋಲಿ ಫೆಮಿಲಿ ಚರ್ಚಿನ ಧರ್ಮಗುರು ವಂ।ನೆಲ್ಸನ್ ಲೋಬೊ ನೇರವೇರಿಸಿ “ಯೇಸು ಸ್ವಾಮಿ ನನಗಾಗಿ ಮತು ನಿಮಗಾಗಿ, ಎಲ್ಲಾ ರೀತಿಯ ಹಿಂಸೆ ಯಾತನೆಗಳನ್ನು ಸಹಿಸಿಕೊಂಡು ಶಿಲುಭೆಯ ಮೇಲೆ ಮರಣ ಹೊಂದಿದರು. ಶಿಲುಭೆಯ ಮೇಲೆ ಮರಣ ಹೊಂದಿದ ಯೇಸು ನಮಗೆ ಹೇಳುತ್ತಾರೆ, ನಿಮಗಾಗಿ ದೇವರ ಮುಂದೆ ವಿಧೇಯನಾಗಿದ್ದೇನೆ, ವಿಧೇಯನಾಗುವುದೆಂದರೆ ದೇವರ ಸಮೀಪಕ್ಕೆ ತಲುಪುತ್ತಾರೆ, ನಾವು ದೇವರ ಮೇಲೆ ವಿಶ್ವಾಸದಿಂದ ಸ್ವರ್ಗದ ಮೌಲ್ಯಗಳನ್ನು ನಮ್ಮದಾಗಿಸಿಕೊಳ್ಳೋಣ’ ಎಂದು ಸಂದೇಶ ನೀಡಿದರು.
ಈ ಪ್ರಾರ್ಥನಾ ವಿಧಿಗಳಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಆರಾನ್ನಾ ಭಾಗಿಯಾದರು. ಈ ಶುಭ ಶುಕ್ರವಾರದ ಧಾರ್ಮಿಕ ವಿಧಿಯಲ್ಲಿ ಹಲವಾರು ಜನಸಾಮಾನ್ಯರು ಭಾಗಿಯಾದರು. ಈ ಶ್ರದ್ದಾ ಭಕ್ತಿಪೂರ್ವಕ ಆಚರಣೆಯಲ್ಲಿ ಧರ್ಮ ಭಗಿನಿಯರು, ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡರು.


















































