

ಕುಂದಾಪುರ (ಎ. 14) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸಮ್ಮರ್ ಕ್ಯಾಂಪ್ ನ 7ನೇ ದಿನವಾದ ಇಂದು ಬೆಳಿಗ್ಗೆ 8.30 ಕ್ಕೆ ಶಿಬಿರಾರ್ಥಿಗಳು ಗೋವಾ ಮಡಗಾಂವ್ ರೈಲಿನಲ್ಲಿ ಪ್ರಯಾಣ ಆರಂಭಿಸಿ 9.30 ಕ್ಕೆ ಮುರುಡೇಶ್ವರ ತಲುಪಿದರು. ಅಲ್ಲಿಂದ ಸಾಲುಮರದ ತಿಮ್ಮಕ್ಕ ಪಾರ್ಕ್ ಗೆ ಬoದು ವಿವಿಧ ರೀತಿಯ ಆಟಗಳನ್ನು ಆಡಿ, ಮಧ್ಯಾಹ್ನನದ ಊಟವನ್ನು ಅಲ್ಲಿಯೇ ಮುಗಿಸಿದರು. ನಂತರ ಮಧ್ಯಾಹ್ನ 1.30ಕ್ಕೆ ಬೆಂಗಳೂರು ಎಕ್ಸ್ಪ್ರೆಸ್ ನಲ್ಲಿ ಪುನಃ ಹೊರಟು ಶಾಲೆ ತಲುಪಿದರು. ಶಿಬಿರಾರ್ಥಿಗಳು ಇಂದಿನ ದಿನವನ್ನು ಸಂಭ್ರಮಿಸಿದರು.
