

ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀನಿವಾಸಪುರ 1 ತಾಲೂಕು ವ್ಯಾಪ್ತಿಯ ರಾಯಲ್ಪಾಡು ವಲಯದ ಚಿಂತಮನಪಲ್ಲಿ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡುತ್ತಾ, ವಾತ್ಸಲ್ಯ ಫಲಾನುಭವಿಗಳಾದ ವೆಂಕಟರಮಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮವಾದ “ವಾತ್ಸಲ್ಯ ಮನೆ” ನಿರ್ಮಿಸಲಾಗಿದೆ. ಇದರಿಂದ ಅವರ ಇಳಿವಯಸ್ಸಿನಲ್ಲಿ ಸಂತೋಷದ ಜೀವನ ಅನುಭವಿಸಲು ಸಾಧ್ಯವಾಗಲಿ ಎಂದು ಹಾರೈಸಿದರು.
ಮಾತೃಶ್ರೀ ಅಮ್ಮನವರ ಅತ್ಯಂತ ಕಾಳಜಿಯ ಕಾರ್ಯಕ್ರಮ ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಅವರಿಗೆ ಭಗವಂತ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಪದ್ಮಯ್ಯ C. S., ಜ್ಞಾನವಿಕಾಸ ಯೋಜನಾಧಿಕಾರಿ ಸಂಧ್ಯಾ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್ ಮತ್ತು ನಾಗರಾಜ್, ಮೇಲ್ವಿಚಾರಕರಾದ ಉಮೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ರಂಜಿತಾ, ವಲಯದ ಸೇವಾಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು