

ಕುಂದಾಪುರ:ಇತ್ತಿಚೆಗೆ ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಭಾರ ಎತ್ತುವ ಸ್ಪರ್ಧೆ 2024-25 ದಿಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿ ಸಮಗ್ರ ಪ್ರಶಸ್ತಿ ಪಡೆಯಿತು.

- ಆಳ್ವಾಸ್ ಕಾಲೇಜು, ಮೂಡಬಿದ್ರೆ, ಪ್ರಥಮ.
- ಎಸ್ ಡಿ ಎಂ ಕಾಲೇಜ್ ಉಜಿರೆ, ದ್ವಿತೀಯ
- ಸೈಂಟ್ ಫಿಲೋಮಿನಾ ಕಾಲೇಜ್, ಪುತ್ತೂರು ತೃತೀಯ.
ಮಹಿಳೆಯರ ವಿಭಾಗದ ತಂಡ ಪ್ರಶಸ್ತಿ: - ಆಳ್ವಾಸ್ ಕಾಲೇಜು ಮೂಡಬಿದ್ರೆ, ಪ್ರಥಮ.
- ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು, ದ್ವಿತೀಯ.
- ಎಸ್ ಡಿ ಎಂ ಕಾಲೇಜ್ ಉಜಿರೆ, ತೃತೀಯ.
ಬೆಸ್ಟ್ ಲಿಫ್ಟರ್: ಪುರುಷರ ವಿಭಾಗ – ಪ್ರಶಾಂತ್ ಸಿನ್ಹಾ ಆಳ್ವಾಸ್ ಕಾಲೇಜು
ಮಹಿಳಾ ವಿಭಾಗ – ಸ್ಪಂದನ ಕೆ, ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು ಇವರುಗಳು ಪಡೆದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ಡಾ. ಶುಭಕರಾಚಾರಿ ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಶ್ರೀಧರ್ ಎಚ್, ಅಧ್ಯಕ್ಷರು, ಉಡುಪಿ ಜಿಲ್ಲಾ ವೇಟ್ ಲಿಫ್ಟರ್ಸ್ ಅಸೋಸಿಯೇಷನ್ ಉಡುಪಿ, ಜಯಪ್ರಸಾದ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು , ಸರಕಾರಿ ಪ್ರೌಢ ಶಾಲೆ ಹೆಸ್ಕತ್ತೂರ್, ಡಾ.ಜೆರಾಲ್ಡ್ ಸಂತೋಷ್ ಡಿ ಸೋಜಾ, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಮಂಗಳೂರು ವಿಶ್ವ ವಿದ್ಯಾನಿಲಯ, ಈ ಸ್ಪರ್ಧಾ ಕೂಟಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ವೀಕ್ಷಕರಾಗಿ ನಿಯೋಜಿಸಲ್ಪಟ್ಟ ಹರೀಶ್ ಗೌಡ ಅವರು ಉಪಸ್ಥಿತರಿದ್ದರು, ಭಾರ ಎತ್ತುಗೆಯಲ್ಲಿ ಹಿರಿಯ ತರಬೇತುದಾರರು ಉದಯ್ ಕುಮಾರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶರಾದ ವನಿತಾ ಅವರು ಸ್ವಾಗತಿಸಿದರು, ಶಂಕರ ನಾರಾಯಣ ಅವರು ವಂದಿಸಿದರು. ಸುಮಾ ತೃತೀಯ ಬಿಕಾಂ ನಿರೂಪಿಸಿದರು.