

ಕುಂದಾಪುರ, ಮಾ. 19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ನಲ್ಲಿ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬವನ್ನು ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ|ವಂ| ಪೌಲ್ ರೇಗೊ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.
“ಸಂತ ಜೋಸೆಪರು ಒರ್ವ ನಿತಿವಂತ ಮನುಶ್ಯ, ಆತ ಎಲ್ಲಾ ಪಂಥಾನ್ವಾವಗಳನ್ನು ಎದುರಿಸಿದ ಧೈರ್ಯಶಾಲಿ ವ್ಯಕ್ತಿ, ಒರ್ವ ಉತ್ತಮ ಗುಣವಂತ ತಂದೆ, ದೇವರ ತತ್ವಗಳನ್ನು ಅಚ್ಚುಕಟ್ಟಾಗಿ ಪಾಲಿಸಿದವನು ಆತ ಉತ್ತಮ ನಿತಿವಂತನಾಗಿ ಬಾಳಿ, ಯೇಸುವಿಗೆ ಉತ್ತಮ ಮಾರ್ಗದರ್ಶಕನಾಗಿದ್ದ ಹಾಗೇ ಯೇಸುವಿನ ಮತ್ತು ಮೇರಿ ಮಾತೆಯ ಸಂರಕ್ಷಕನಾಗಿದ್ದ ಆತ, ದೇವರ ಯೋಜನೆಯನ್ನು ಸಂಪೂರ್ಣಗೊಳಿಸಲು ಆಯ್ಕೆಯಾದ ಮಹಾನ್ ಮನುಷ್ಯನಾಗಿದ್ದ, ಹೇಗೆ ಮೇರಿ ಮಾತೆ ಸ್ತ್ರೀಯರಲ್ಲಿ ಧನ್ಯಳೊ, ಹಾಗೆಯೆ ಪುರುಷರಲ್ಲಿ ಸಂತ ಜೋಸೆಫರು ಧನ್ಯರು, ಅವರ ಜೀವನ ನಮಗೆ ಆದರ್ಶ, ಸಂತ ಜೋಸೆಪರಂತೆ ನಮ್ಮ ಬದುಕಿನಲ್ಲಿ ಬಾಳಬೇಕು” ಎಂದು ಸಂದೇಶ ನೀಡಿ ಎಲ್ಲರಿಗೂ ಹಬ್ಬದ ಶುಬಾಶಯಗಳನ್ನು ಕೋರಿದರು.
ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಅತಿಥಿ ಧರ್ಮಭಗಿನಿಯರು, ಕಾರ್ಮೆಲ್ ಭಗಿನಿಯರ ಸಹಾಯಕ್ಕೆ ಇರುವ, ಎ.ಸಿ.ಎ. ಪಂಗಡ, ಕಿರು ಸಹಾಯಕರ ಬ್ಲೊಸಮ್ ಪಂಗಡದವರು ಮತ್ತು ಭಕ್ತಾಧಿಗಳು ಬಹಳ ಸಂಖೆಯಲ್ಲಿ ಹಬ್ಬದ ಬಲಿದಾನದಲ್ಲಿ ಭಾಗಿಯಾಗಿದ್ದರು. ಕಾನ್ವೆಂಟ್ ಮುಖ್ಯಸ್ಥೆ ವಂ। ಧರ್ಮಭಗಿನಿ ಸುಪ್ರಿಯ ವಂದಿಸಿದರು.



















































