

ಕುಂದಾಪುರ, ಮಾರ್ಚ್ 11 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನವರು ನಡೆಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಡಾ|| ವಿದ್ಯಾ ಅಶೋಕ್ ವೈದ್ಯಕೀಯ ಅಧಿಕಾರಿ, ಶ್ರೀ ದಿನಕರ ಶೆಟ್ಟಿ ಗ್ರಾಮ ಪಂಚಾಯತ್ ಅದ್ಯಕ್ಷರು ಬಸ್ರೂರು, ಶ್ರೀಮತಿ ಪ್ರಭಾವತಿ ಶೆಟ್ಟಿ ಅಂಗನವಾಡಿ ಮೇಲ್ವಿಚಾರಕರು ಬಸ್ರೂರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಅಂಗನವಾಡಿ ಶಿಕ್ಷಕಿಯರು, ಅಕ್ಷತಾ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಉಪನ್ಯಾಸಕರು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
4 ನೇ ವರ್ಷದ ಬಿ ಎಸ್ ಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಋತುಬಂಧದ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು ಡಾ|| ವಿದ್ಯಾ ಅಶೋಕ್ ಈ ದಿನದ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸೆರೆನಾ ಸ್ವಾಗತಿಸಿದರು, ಕೊಟ್ರೇಶ್ ಕಾರ್ಯಕ್ರಮವನ್ನು ನಿರೂಪಸಿದರು.