

“ಜನೌಷಧಿ ಸಪ್ತಾಹ ಆಚರಣೆ” ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಜನೌಷಧಿ ಕೇಂದ್ರವು ಮಾರ್ಚ್ ಒಂದರಿಂದ ಮಾರ್ಚ ಏಳರ ತನಕ ಜನೌಷಧಿ ಸಪ್ತಾಹವನ್ನು ಕೇಂದ್ರದ ಸೂಚನೆಯಂತೆ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಉಡುಪಿ ಜಿಲ್ಲೆಯ ಪ್ರಪ್ರಥಮ ಜನೌಷಧಿ ಕೇಂದ್ರವಾದ ಈ ಸಂಸ್ಥೆ ರಾಜ್ಯದಲ್ಲಿ ನಾಲ್ಕನೆಯ ಅತೀ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಸಪ್ತಾಹದ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು 160ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು. ಮಾರ್ಚ್ ನಾಲ್ಕರಂದು ಮಹಿಳಾ ಸಬಲೀಕರಣಕ್ಕಾಗಿ “ಒಂದು ಹೆಜ್ಜೆ ಮಾತೃ ಶಕ್ತಿಯ ಕಡೆಗೆ” ಎನ್ನುವ ಧ್ಯೇಯ ವಾಕ್ಯ ದೊಂದಿಗೆ 7 ಮಂದಿ ಅರ್ಹ ಮಹಿಳೆಯರಿಗೆ ಸನ್ಮಾನ ಮಾಡಿ ಜನೌಷಧಿಯ ಉಪಯುಕ್ತತೆಯ ಬಗ್ಗೆ ವಿಚಾರ ಮಂಡಿಸಲಾಯಿತು. ಪ್ರತಿ ದಿನ 350 ರಿಂದ 400 ಮಂದಿ ಜನೌಷಧಿ ಕೇಂದ್ರಕ್ಕೆ ಭೇಟಿ ಕೊಡುತ್ತಿದ್ದು ಕೊನೆಯ ದಿನ ಎಲ್ಲರಿಗೂ ಸಿಹಿ ಹಂಚಿ ಸಪ್ತಾಹವನ್ನು ವಿಭಿನ್ನವಾಗಿ ಸಮಾಪ್ತಿಗೊಳಿಸಿತು.