

ಕುಂದಾಪುರ ಮಾ.13: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ (ಮಾ.10, 11 ಮತ್ತು 12 ರಂದು) ಧ್ಯಾನ ಕೂಟ ನಡೆಯಿತು. ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಕೌಟುಂಬಿಕ ಜೀವನ ಮತ್ತು ನಮ್ಮ ಜೀವನದಲ್ಲಿ ಪಾಪಗಳು ಹೇಗೆ ಹುಟ್ಟುತ್ತವೆ, ತಪ್ಪು ಮಾಡಿದವರನ್ನು ಕ್ಷಮಿಸುವುದರ ಬಗ್ಗೆ ತಿಳುವಳಿಕೆ ಪಾಪ ನಿವೇದಿಕೆಯ ಮಹತ್ವ, ಮೇರಿ ಮಾತೆಯ ಮಹತ್ವ, ಪ್ರೀತಿ, ಮಮತೆ, ತ್ಯಾಗ, ದಾನ, ಪ್ರಾಯಚಿತ್ತ ಹೀಗೆ ಹಲವಾರು ವಿಷಗಳ ಮೇಲೆ ಫಾದರ್ ಫ್ರಾಂಕ್ಲಿನ್ ತಮ್ಮ ಪ್ರಬುದ್ದ ಬೋಧನೆಗಳ ಮೂಲಕ ತಿಳುವಳಿಕೆ ನೀಡಿದರು.
ತಮ್ಮ ಕೌನ್ಸಿಲಿಂಗ್ ಮೂಲಕ ಗರ್ಭಪಾತಗಳನ್ನು ತಪ್ಪಿಸಿ ೧೫೦೦ ಕಿಂತಲು ಜಾಸ್ತಿ ಮಕ್ಕಳ ಜೀವ ಉಳಿಸಿದ ಸಹೋದರಿ ಮಂಜುಳಾ ಜೊಯ್, ತಾನು ಅನ್ಯ ಧರ್ಮದವಳಾದರೂ ನಾನು ಯೇಸುವನ್ನು ಬಹಳವಾಗಿ ಪ್ರೀತಿಸುತ್ತೇನೆ, ಕುಮ್ಸಾರ್ ಕುಮ್ಗಾರ್ ಮೇಲೆ ನನಗೆ ತುಂಬು ವಿಶ್ವಾಸ ಎಂದು ಹೇಳುತ್ತಾ ಸಾಕ್ಸಿ ನುಡಿದು ತಿಳುವಳಿಕೆ ನೀಡಿದರು.
ಮೂರು ದಿನಗಳ ಈ ಧ್ಯಾನ ಕೂಟದಲ್ಲಿ ಮಕ್ಕಳಿಗಾಗಿ, ಯುವಜನರಿಗಾಗಿ, ಪತಿ ಪತ್ನಿಯರಿಗಾಗಿ, ಧರ್ಮಪಾಲಕರಿಗಾಗಿ, ಧರ್ಮಭಗಿನಿಯರಿಗಾಗಿ, ಓಂಟಿತರಿಗಾಗಿ, ಪಾಲನ ಮಂಡಳಿಯವರಿಗಾಗಿ ಪವಿತ್ರಸಭೆಯ ಸೇವಕರಿಗಾಗಿ, ಅಸ್ವಸ್ತರಿಗೆ, ಅನಾಥರಿಗೆ, ಕೆಟ್ಟ ಅಭ್ಯಾಸಗಳಿದ್ದವರಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಪ್ರಾರ್ಥನೆಗಳು ನಡೆದವು, ಈ ದಿವಸದಲ್ಲಿ ಹಿರಿಯವರಲ್ಲದೆ ಮಕ್ಕಳು ಮತ್ತು ಯುವಜನರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದುದು ವೀಶೆಷವಾಗಿತ್ತು. ಈ ಧ್ಯಾನ ಕೂಟಕ್ಕೆ ಹೊರ ಚರ್ಚಿನವರು ಆಗಮಿಸಿದ್ದು ಧ್ಯಾನ ಕೂಟ ಯಶಸ್ವಿಯಾಗಿ ಸಂಪನ್ನವಾಯಿತು ಧ್ಯಾನ ಕೂಟಕ್ಕೆ ಸಹೋದರ ಕಿಶನ್ ಸಂಗೀತ ನೀಡಿ ಭಕ್ತಿ ಗೀತೆಗಳನ್ನು ಹಾಡಿ ಸಹಕರಿಸಿದರು.
ಕುಂದಾಪುರ ಚರ್ಚಿನ ಧರ್ಮಗುರುಗಳಾದ ಅ।ವಂ। ಪೌವ್ಲ್ ರೇಗೊ ಮೊದಲ ದಿನದಂದು ಸ್ವಾಗತಿಸಿ ಕೊನೆಯ ದಿನ ವಂದಿಸಿದರು.




















































