

ಕುಂದಾಪುರ : ಹೋಳಿ ಹಬ್ಬದ ಅಂಗವಾಗಿ ದಿನಾಂಕ 9. 3.2025 ರಿಂದ 5ದಿನಗಳ ಜರಗಲಿರುವ ಹೋಳಿ ನಾಚ್ ಕಾರ್ಯ ಕ್ರಮಕ್ಕೆ ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ರಿ. ಮಲ್ಲರ್ ಬೆಟ್ಟು ಬಂದರ್ ಗಂಗೊಳ್ಳಿ ಇದರ ಆಶ್ರಯದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಹೋಳಿ ಗೀತೆ ಸೈoವರ ಸಾಂಪ್ರದಾಯಿಕ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಜಿ .ರಾಮಪ್ಪ ಖಾರ್ವಿ ಯವರು ನೆರವೇರಿಸಿ ಕೊಟ್ಟರು. ತದನಂತರ ಹೋಳಿನಾಚ್ ಸಾಂಸ್ಕೃತಿಕ ಕಾರ್ಯಕ್ರಮವು ಕುಂದಾಪುರದ ವಿದ್ಯಾರಂಗ ಮಿತ್ರ ಮಂಡಳಿ ಇವರ ವತಿಯಿಂದ ಜರುಗಿತು.
