

ಶ್ರೀನಿವಾಸಪುರ: ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್ ಆಫೀಸ್ ಆಟೋಮೇಶನ್ ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ(ಕಿಟ್) 06 ಡಿಸ್ಟಿಂಗ್ಷನ್ಸ್ ನೊಂದಿಗೆ (ಡಿಸ್ಟಿಂಗ್ಷನ್ಸ್) ಶೇಕಡ 100ರಷ್ಟು ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕಿಟ್) ಕಳೆದ ಫೆಬ್ರವರಿ ಮಾಹೆಯಲ್ಲಿ ರಾಜ್ಯಮಟ್ಟದಲ್ಲಿ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್ ಆಫೀಸ್ ಆಟೋಮೇಶನ್ ಪರೀಕ್ಷೆಗೆ ಶಾಲೆಯಿಂದ ಒಟ್ಟು 34 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ 06 ಡಿಸ್ಟಿಂಗ್ಷನ್ಸ್, ಪ್ರಥಮ ದರ್ಜೆಯಲ್ಲಿ-21, ದ್ವಿತೀಯದರ್ಜೆಯಲ್ಲಿ 07, ಅಭ್ಯರ್ಥಿಗಳು ತೇರ್ಗಡೆಹೊಂದಿದ್ದು, ಶಾಲೆಗೆ ಶೇಕಡ100ರಷ್ಟು ಫಲಿತಾಂಶದೊರೆತಿದೆ.
ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವ ಉತ್ತಮ ಫಲಿತಾಂಶಕ್ಕೆ ಕಾರಣರಾದ ಬೋಧಕರನ್ನು ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ಮತ್ತು ಕೇಂದ್ರ ವ್ಯವಸ್ಥಾಪಕರಾದ ಆರ್. ರಾಧÀ ಇವರು ಅಭಿನಂದಿಸಿದ್ದಾರೆ.