

ಶ್ರೀನಿವಾಸಪುರ : ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ತಮ್ಮ ವೃತ್ತಿ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರು ಜನ್ಮ ಕೊಟ್ಟ ತಂದೆ ತಾಯಿ ವಿದ್ಯೆ ನೀಡಿದ ಗುರು ಶಾಲೆ ಹಾಗೂ ತಮ್ಮ ಊರನ್ನು ಎಂದಿಗೂ ಮರೆಯಬಾರದು ಎಂದು ಜ್ಙಾನಾದ್ರಿ ಪದವಿ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ರೆಡ್ಡಿ ಕರೆ. ನೀಡಿದರು.
ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲಿನಲ್ಲಿ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಂದೆ-ತಾಯಿಗಳು ಹಾಗೂ ಗುರುಗಳ ಸಹಕಾರದೊಂದಿಗೆ ಹೆಚ್ಚು ಶ್ರಮವಹಿಸಿ ಓದಿ ಉತ್ತಮ ಫಲಿತಾಂಶವನ್ನು ಪಡೆಯಬೇಕು.
ತಾವು ಉತ್ತಮ ಸ್ಥಾನ ಪಡೆದುಕೊಂಡು ತಮ್ಮ ತಂದೆ ತಾಯಿ ಶಾಲೆ ಹಾಗೂ ಗುರುಗಳಿಗೆ ಉತ್ತಮ ಗೌರವವನ್ನು ತಂದುಕೊಡಬೇಕು ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಯಲ್ದೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಎಲ್.ಮುರಳಿ ಮೋಹನ್ ಮಾತನಾಡುತ್ತಾ ಮಕ್ಕಳು ತಮ್ಮ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಯಬೇಕು. ಪರರಿಗೆ ಸಹಾಯ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು.
ಬಯಲು ಸೀಮೆ ಕೋಲಾರ ಜಿಲ್ಲೆಯ ಮಕ್ಕಳು ಶಿಕ್ಷಣ ಪಡೆಯುವುದರ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣ ಪಡೆಯುವುದರ ಜೊತೆಗೆ ಬದುಕು ನಿರ್ವಹಣೆಗೆ ಪೂರಕವಾದ ಕೌಶಲ್ಯ ಪಡೆದುಕೊಳ್ಳಬೇಕು.
ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ 1995ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಯವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು
ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್.ಹರಿಕುಮಾರ್, ರಮೇಶ್ ಬಾಬು, ಮುಖ್ಯ ಶಿಕ್ಷಕ ಮಂಜುನಾಥ ದೇವೇಗೌಡ, ಶಿಕ್ಷಕರಾದ ದಿವ್ಯ, ಡಿ. ವಿ ಶ್ವೇತ, ಹರಿಕೃಷ್ಣ, ಜಯರಾಜ್, ಹಬೀಬ್, ಆನಂದ್ ಕೃಷ್ಣಮೂರ್ತಿ, ಎಂ. ಎಸ್ ಶ್ರೀನಿವಾಸಗೌಡ, ಕಛೇರಿ ಗುಮಾಸ್ತರಾದ ಅರುಣ ಕುಮಾರಿ ನಾಗಲಕ್ಷ್ಮಿ ಭಾಗವಹಿಸಿದ್ದರು.