

ಶ್ರೀನಿವಾಸಪುರ: ಇಷ್ಟು ದಿನ ನೋಡಿದ್ದು ನ್ಯೂಸ್ ರೀಲ್ ಮಾತ್ರ. ಸೋಮವಾರದಿಂದ ಆಚೆ ಸಿನಿಮಾ ಶುರುವಾಗುತ್ತೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾರ್ಮಿಕವಾಗಿ ಹೇಳಿದರು. ಶ್ರೀನಿವಾಸಪುರದ ಪಟ್ಟಣದ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಬುಧವಾರ ಮಾಜಿ ಸ್ಪೀಕರ್ ಕೆ.ಅರ್.ರಮೇಶ್ ಕುಮಾರ್ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ರೀತಿ ತಿಳಿಸಿದರು
ಅವರು ಪಟ್ಟಣದ ಅಮಾನಿಕೆರೆ ಚೌಡೇಶ್ವರಿ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿದ ಬಳಿಕ, ಕಳೆದ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಮ್ಮ ಹೈತೈಷಿಗಳನ್ನು ಉದ್ದೇಶಿಸಿ ಮನಬಿಚ್ಚಿ ಮಾತನಾಡಿದ ಅವರು, ಇತ್ತೀಚಿಗೆ ನನ್ನ ಜಮೀನು, ತೋಟ ಹೋಗಿಬಿಡುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದು ಎಲ್ಲಿಯೂ ಹೋಗುವುದಿಲ್ಲ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಜಮೀನಿಗೆ ಸಂಬಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನದಲ್ಲದ ಒಂದು ಗುಂಟೆ ಜಮೀನೂ ಬೇಕಾಗಿಲ್ಲ ಎಂದು ಹೇಳಿದರು.
ಸದರು ಜಮೀನಿಗೆ ಸಂಬಂಧಿಸಿದಂತೆ ೨೦೦೨ರಲ್ಲೆ ಸರ್ಕಾರಕ್ಕೆ ಅರ್ಜಿ ಬರೆದು ತಿಳಿಸಿದ್ದೇನೆ. ಎಲ್ಲವನ್ನೂ ಬಚ್ಚಿಡಲಾಗಿದೆ. ಈವರೆಗೆ ಉತ್ತರ ನೀಡಿಲ್ಲ. ಈವರೆಗೆ ನಾಲ್ಕು ಬಾರಿ ಜಮೀನು ಸರ್ವೆ ಮಾಡಲಾಗಿದೆ. ಎಲ್ಲ ಸಮಯದಲ್ಲೂ ರಮೇಶ್ ಕುಮಾರ್ ನಿರ್ದೋಷಿ ಎಂದು ಹೇಳಲಾಗಿದೆ. ಅರ್ಜಿದಾರರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.
ಮಕ್ಕಳಿಗೆ ಅನುಕೂಲವಾಗುವಂತೆ ಸ್ಟೇಡಿಯಂ ಅಭಿವೃದ್ಧಿಪಡಿಸಿ, ಸರ್ಕಾರ ನಿಮ್ಮ ಜತೆಗಿದೆ. ಈಜುಕೊಳ ಸೇರಿದಂತೆ ಮಕ್ಕಳ ಕ್ರಿಡಾಭಿವೃದ್ಧಿಗೆ ಅನುಕೂಲವಾಗುವಂತೆ ಯಾವುದನ್ನೂ ಬಿಡದೆ ಉಳಿಸಿಕೊಳ್ಳಿ. ಇದು ಚಿಕ್ಕ ಊರು. ಈಗೀಗ ಬೆಳೆಯುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಅನುಕೂಲ ಕಲ್ಪಿಸುವುದು ಮುಖ್ಯ ಉದ್ದೇಶವಾಗಿರಲಿ. ಯಾರಾರು ಒಳ್ಳೆ ಕೆಲಸಗಳಿಗೆ ಅಡ್ಡ ಮಾಡಿದ್ದಾರೊ ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.
ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿರಿ, ಸಣ್ಣ ವಿಚಾರಗಳನ್ನು ಮಾತನಾಡಲು ಹೋಗಬೇಡಿ. ಯಾರನ್ನೂ ದೂಷಣೆ ಮಾಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಹಿತೈಷಿಗಳು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ಸಂತೊಷ ತಂದಿದೆ. ಪುರಸಭೆ ಜನರ ಅನುಕೂಲಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರ ನಿಮ್ಮ ಬೆನ್ನಿಗೆ ಇದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎನ್.ಜಿ.ಬ್ಯಾಟಪ್ಪ, ಹನುಮೇಶ್, ಪಿ .ಎಲ್. ಡಿ .ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೃಷ್ಣೇಗೌಡ, ವೈ.ಆರ್.ಶಿವಪ್ರಕಾಶ್, ಸೀತಾರಾಮರೆಡ್ಡಿ, ಮ್ಯಾಕಲ ನಾರಾಯಣಸ್ವಾಮಿ, ಕೆ.ಕೆ.ಮಂಜು, ಮಾಜಿ ಪುರಸಭೆ ಅಧ್ಯಕ್ಷ ಟಿ ಎಂ ಬಿ ಮುಕ್ತಿಯಾರ್, ಪುರಸಭೆ ನಾಮಿನಿ ಸದಸ್ಯ ಶಫಿವುಲ್ಲಾ , ಮನೋಹರ್, ವೆಂಕಜಟರೆಡ್ಡಿ, ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್, ಸದಸ್ಯರಾದ ಮುನಿರಾಜು, ಸಂಜಯ್ ಸಿಂಗ್, ಹೇಮಂತ್, ಕುಮಾರ್ ಎನ್.ಎನ್.ಆರ್.ನಾಗರಾಜ್, ನರಸಿಂಹಮೂರ್ತಿ, ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕ ಮಂಚನೀಲಕೋಟ .ಎಮ್.ಎನ್.ರೆಡ್ಡಪ್ಪ,ವಕೀಲ ಮುನಿರಾಜು, ಕೊರೀಗೇಪಲ್ಲಿ ವಿಶ್ವನಾಥ್ ರೆಡ್ಡಿ,ವೇಣು, ಇನ್ನು ಮುಂತಾದವರು ಉಪಸ್ಥಿತರಿದ್ದರು.