

ಉಡುಪಿ; ಅಕ್ಷರ ಕಲಿಕೆ ಶಿಕ್ಷಣವಾಗುವುದಿಲ್ಲ. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳು ಮಾತ್ರ ಪರಿಪೂರ್ಣ ವಿದ್ಯಾರ್ಥಿಗಳನ್ನಾಗಿ ಮಾಡುತ್ತದೆ. ಉದ್ಯೋಗ ಕೌಶಲ್ಯಗಳು ವೃತ್ತಿಯಿಂದ ವೃತ್ತಿಗೆ ಭಿನ್ನವಾಗಿದ್ದು ಅದು ವ್ಯಕ್ತಿಗತವಾಗಿರುತ್ತದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದಕ್ಕೆ ಇಂತಹ ಮಾಹಿತಿ ಶಿಬಿರದಿಂದ ಸಾಧ್ಯವಿದೆ. ಅಲ್ಲದೇ ವಿವಿಧ ಕೌಶಲ್ಯಗಳು ಇಂತಹ ಶಿಬಿರದಲ್ಲಿ ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಪರಿಭಾವಿಸಿ ಅವರ ಜೀವಿತದ ಉದ್ದೇಶವನ್ನು ಕೂಡ ಅರ್ಥೈಸಿಕೊಳ್ಳಬೇಕೆಂದು ಕುಂದಾಪುರ ಶಾಸಕರಾದ ಕಿರಣ್ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ (ರಿ.) ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ಚೇತನಾ ಪ್ರೌಢಶಾಲೆ ಮಾಬುಕಳ ಇಲ್ಲಿ ಹಮ್ಮಿಕೊಂಡ ಉದ್ಯೋಗ ಕೌಶಲ್ಯಗಳ ಕುರಿತು ಮಾಹಿತಿ ಶಿಬಿರ 2025ನ್ನು ಉದ್ಘಾಟಿಸಿ ಕುಂದಾಪುರ ಹೆಸ್ಕುತ್ತೂರು ಪ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಇವರಿಗೆ ಕಲಾ ಕುಸುಮ ಪ್ರಶಸ್ತಿ 2025 ಪ್ರದಾನ ಮಾಡಿ, ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಯುತ್ತದೆ ಮತ್ತು ಅವರ ಬದುಕಿಗೆ ಉದ್ಯೋಗ ಒಂದು ಜೀವನಾಧಾರವಾಗಿರುತ್ತದೆ. ಅದನ್ನು ಗಳಿಸುವುದಕ್ಕೆ ಅನೇಕ ಕೌಶಲ್ಯಗಳು ತುಂಬಾ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಚಿರಂಜನ್ ಕೆ. ಶೇರಿಗಾರ್ ಪ್ರತಿ ವಿದ್ಯಾರ್ಥಿಗಳು ಕೂಡ ವಿಶಿಷ್ಟತೆ ಹೊಂದಿರುತ್ತಾರೆ ಮತ್ತು ವಿವಿಧ ಕೌಶಲ್ಯಗಳನ್ನು ಹೊಂದಿರುತ್ತಾರೆ. ಅದನ್ನು ಸಕಾಲದಲ್ಲಿ ಜಾಗ್ರತೆಗೊಳಿಸಿ ಅಂತಹ ತುಡಿತ ಮತ್ತು ನಿರಂತರ ಪ್ರಯತ್ನದಿಂದ ಬಂದ ಅವಕಾಶಗಳನ್ನು ಬಳಸಿ ಅನನ್ಯತೆ ಅಥವಾ ಹೊಸತನಕ್ಕೆ ಅಥವಾ ಹೊಸ ಚಿಂತನಕ್ಕೆ ದಾರಿ ಮಾಡಿಕೊಂಡು ಬದುಕಿನ ಉತ್ಕøಷ್ಟಕ್ಕೆ ನಾವು ಏರಬೇಕು ಎಂದು ಪ್ರತಿಪಾದಿಸಿ ಅದನ್ನು ಉದ್ಯೋಗ ಕೌಶಲ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು ವೃತ್ತಿಯಿಂದ ವೃತ್ತಿಗೆ ಭಿನ್ನವಾಗಿರುತ್ತದೆ ಎಂದು ತಿಳಿಸಿ, ಯಾವುದು ಕನಿಷ್ಠ ಅಥವಾ ಗರಿಷ್ಠ ಎಂದು ಪರಿಭಾವಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಭಾಧ್ಯಕ್ಷತೆಯನ್ನು ರೊ| ಕೆ.ಆರ್. ನಾೈಕ್ ಸೂಪರ್ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್, ಮಾಜಿ ಅಧ್ಯಕ್ಷರು, ರೋಟರಿ ಕ್ಲಬ್ ಕುಂದಾಪುರ ಇವರು ನಿರ್ವಹಿಸಿ ಇಂತಹ ಪ್ರೇರಣಾ ಶಿಬಿರಗಳಲ್ಲಿ ಪೂರ್ಣ ರೀತಿಯಲ್ಲಿ ಬಳಸಿಕೊಂಡ ವಿದ್ಯಾರ್ಥಿಗಳು ಸೃಜನಶೀಲ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆಯಾಗಿ ಬರುತ್ತಾರೆ. ಅದು ಸಂಗೀತ, ಹಾಡು, ಭರತನಾಟ್ಯ, ನಾಟಕ, ಯಕ್ಷಗಾನ, ಕರಕುಶಲ ಕಲೆ ಹೀಗೆ ಅನೇಕ ಹವ್ಯಾಸಗಳು ಅದರದ್ದೇ ಆದ ಪರಿಶ್ರಮದಿಂದ ಮಾನ್ಯತೆ ಸಿಗುತ್ತದೆ. ಹಾಗೆಯೇ ಅವರ ವ್ಯಕ್ತಿತ್ವ ರೂಪಿಸುವಲ್ಲಿ ನಾವೆಲ್ಲರೂ ಸದಾ ಕ್ರಿಯಾಶೀಲರಾಗಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ತಾರನಾಥ ಶೆಟ್ಟಿ, ಅಧ್ಯಕ್ಷರು, ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಹಾಗೂ ಮೋಹನ್ ಪ್ರಾಂಶುಪಾಲರು, ಆಶ್ರಿತ್ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಕೋಟ ಸಂಪನ್ಮೂಲ ವ್ಯಕ್ತಿ ಚಿರಂಜನ್ ಕೆ. ಶೇರಿಗಾರ್, ವಾಣಿಜ್ಯ ಉಪನ್ಯಾಸಕರು, ಕ್ರಾಸ್ಲ್ಯಾಂಡ್ ಕಾಲೇಜು, ಬ್ರಹ್ಮಾವರ, ಕಲಾಕುಸುಮ ಪ್ರಶಸ್ತಿ ಪುರಸ್ಕøತರಾದ ಅಬ್ದುಲ್ ರವೂಫ್, ಮುಖ್ಯ ಶಿಕ್ಷಕರು ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆ, ಕುಂದಾಪುರ ವಲಯ, ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಇದರ ಕಾರ್ಯದರ್ಶಿ ರಮೇಶ್ ವಕ್ವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು| ಅನಿಷಾ ಬಾಯರಿ ಪೇತ್ರಿ ನಿರೂಪಿಸಿ ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಮಾರು 283 ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.