

ಮಾರ್ಚ್ 5 ಬುಧವಾರದಿಂದ ಮಾರ್ಚ್ 8 ಶನಿವಾರ ತನಕ ಮಂಗಳೂರು ಬಿಕ್ಕರ್ನಕಟ್ಟೆ ಬಾಲ ಯೇಸು ಮಂದಿರದ ಸಭಾಂಗಣದಲ್ಲಿ ಮಧ್ಯಪಾನ ಮತ್ತು ಅಮಲು ಸಮಸ್ಯೆಯಿಂದ ಬಳಲುವರಿಗೆ ಉಚಿತ ಶಿಬಿರವನ್ನು ಪ್ರತಿದಿನ ಬೆಳಿಗ್ಗೆ 8:30 ರಿಂದ 12:30 ತನಕ ನಡೆಸಲಾಗುವುದು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಭಾಗವಹಿಸಲು ಅವಕಾಶವಿದೆ. ಮಧ್ಯಪಾನ ಮತ್ತು ಇತರ ಅಮಲು ಸಮಸ್ಯೆಯಿಂದ ಬಳಲುತ್ತಿರುವರಿಗೆ ಸಲಹೆಗಳನ್ನು ಸಮಾಲೋಚನೆ ಮುಖಾಂತರ ನೀಡಲಾಗುವುದು..ಮದ್ಯಪಾನ ಅಥವಾ ಅಮಲು ಸೇವನೆಯಿಂದ ಬಿಡುಗಡೆ ಹೊಂದುವ ಬಗ್ಗೆ ಕಾರ್ಯಕ್ರಮವನ್ನು ನಡೆಸಲಾಗುವುದು.ಈ ಕಾರ್ಯಗಾರದಲ್ಲಿ ಭಾಗವಹಿಸುವ ವ್ಯಕ್ತಿಗಳ ಅನಾಮಿಕತೆಯನ್ನು ಕಾಪಾಡಲಾಗುವುದು.ಈ ಕಾರ್ಯಗಾರವನ್ನು ಜ್ಞಾನೋದಯ ಮಂಗಳೂರು ಹಾಗೂ ಬಾಲ ಯೇಸು ಪುಣ್ಯಕ್ಷೇತ್ರದ ವತಿಯಿಂದ ನಡೆಸಲಾಗುವುದು.ಎಲ್ಲರಿಗೂ ಮುಕ್ತ ಅವಕಾಶವಿದೆ.ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಕೋರಲಾಗಿದೆಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗೆ ಸಂಪರ್ಕಿಸಬಹುದು
7892488980, 8088660666