

ಕುಂದಾಪುರ :ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಬರೋಬ್ಬರಿ 54 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯವರು ಪ್ರಚಂಡ ಬಹುಮತದಿಂದ ಮುಂದಿನ ಸಾಲಿನ (27-29) ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾಗಿರುವ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ವೈದ್ಯಾಧಿಕಾರಿ ಸಂಘವು ಶ್ಲಾಘಿಸಿ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಸರಕಾರಿ ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಹಾಗೂ ತಾಲ್ಲೂಕು ಸರ್ಕಾರಿ ಸಂಘದ ಅಧ್ಯಕ್ಷರಾಗಿರುವ ಡಾ. ನಾಗೇಶ್,” ಡಾ.ನಿಕಿನ್ ಶೆಟ್ಟಿಯವರ ಆಯ್ಕೆ ನಮ್ಮೆಲರಿಗೂ ಹೆಮ್ಮೆ ತರುವಂತಹ ಸಂಗತಿ. ಕರಾವಳಿಯ ವೈದ್ಯರೋರ್ವರು ಬಾರಿಗೆ ರಾಜ್ಯಾ ಧ್ಯಕ್ಷರಾಗಿ ಇತಿಹಾಸ ಬರೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ,ಅವರ ಸಾಧನೆಯ ಹಿಂದೆ ಹಗಲಿರುಳಿನ ಶ್ರಮ, ಛಲ, ಗುರಿ ತಲುಪುವ ಬಗೆಗಿನ ಉತ್ಕಟತೆ, ಶ್ರದ್ದೆ, ಆತ್ಮವಿಶ್ವಾಸ ವರ್ಣಾತೀತ. ಕೇವಲ 20 ದಿವಸಗಳಲ್ಲಿ 27 ಜಿಲ್ಲೆಗಳ ಪ್ರವಾಸ ಮಾಡಿ, ಸಂಘದ ಸದಸ್ಯರ ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿ ಪ್ರಚಂಡ ಬಹುಮತದಿಂದ ಆಯ್ಕೆಯಾದ ಅವರು ಕರ್ನಾಟಕ ಕರಾವಳಿ ಜಿಲ್ಲೆಗಳ ಅರ್ಹ ನೂತನ ಸಾರಥಿಯಾಗಿ ಹೊಸ ಭಾಷ್ಯ ಬರೆದಿದ್ದಾರೆ. ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
