

ಚಿತ್ರಶೀರ್ಷಿಕೆ:(ಫೋಟೊ-2ಕೋಲಾರ1);ಕೋಲಾರ ನಗರದ ಮದರ್ತೆರೇಸಾ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸುತ್ತಿರುವ ಮುಖ್ಯ ಅಧೀಕ್ಷಕ ಮಂಜುನಾಥ್ ಹಾಗೂ ಉಪನ್ಯಾಸಕರು.
ಕೋಲಾರ:- ಜಿಲ್ಲೆಯ 28 ಕೇಂದ್ರಗಳಲ್ಲಿ ಸುಗಮವಾಗಿ ಆರಂಭವಾದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಇಂದು ಜಿಲ್ಲೆಯಲ್ಲಿ 11875 ಮಂದಿ ನೋಂದಾಯಿಸಿದ್ದು, 11333 ಮಂದಿ ಪರೀಕ್ಷೆಗೆ ಹಾಜರಾಗಿ. 542 ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ಕುಮಾರ್ ಭಾವಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಯಾವುದೇ ಅವ್ಯವಹಾರದ ಪ್ರಕರಣ ವರದಿಯಾಗಿಲ್ಲ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಒಟ್ಟು 15,122 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಅದರಲ್ಲಿ ಹೊಸಬರು 13,874, ಮರು ಪರೀಕ್ಷೆ ಬರೆಯುತ್ತಿರುವವರು 929 ವಿದ್ಯಾರ್ಥಿಗಳು 319 ಖಾಸಗಿಯವರು ಹಾಜರಾಗಲಿದ್ದಾರೆ, ಅವರಲ್ಲಿ 8046 ವಿದ್ಯಾರ್ಥಿನಿಯರು 7076 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನದ ಪರೀಕ್ಷಾ ಕಾರ್ಯದ ಚಟುವಟಿಕೆಗಳನ್ನು ವೆಬ್ ಕ್ಯಾಸ್ಟ್ ಮಾಡಲು ಕ್ರಮವಹಿಸಲಾಗಿದೆ. ಇದಕ್ಕೆ ಜಿಲ್ಲಾ ಪಂಚಾಯತಿಗಳಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ.
ಕೋಲಾರ ತಾಲ್ಲೂಕಿನಲ್ಲಿ 5384, ಬಂಗಾರಪೇಟೆ-1625, ಕೆಜಿಎಫ್-2144, ಶ್ರೀನಿವಾಸಪುರ-1697, ಮುಳಬಾಗಿಲು-2538, ಮಾಲೂರಿನಲ್ಲಿ 2100 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು ಎಂದು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಒಟ್ಟು 28 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಕೋಲಾರ ತಾಲ್ಲೂಕಿನಲ್ಲಿ 10 ಮುಳಬಾಗಿಲು ತಾಲ್ಲೂಕಿನ 5, ಶ್ರೀನಿವಾಸಪುರ ತಾಲ್ಲೂಕಿನ 3, ಮಾಲೂರು ತಾಲ್ಲೂಕಿನ 4, ಕೆಜಿಎಫ್ ತಾಲ್ಲೂಕಿನ 3 ಹಾಗೂ ಬಂಗಾರಪೇಟೆ ತಾಲ್ಲೂಕಿನ 3 ಕೇಂದ್ರಗಳು ಒಟ್ಟು 26 ಕೇಂದ್ರಗಳಲ್ಲಿ ವೇಮಗಲ್ ಮತ್ತು ತಾಯಲೂರು ಎರಡು ಗ್ರಾಮೀಣ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನದ ಪರೀಕ್ಷಾ ಕಾರ್ಯದ ಚಟುವಟಿಕೆಗಳನ್ನು ವೆಬ್ ಕ್ಯಾಸ್ಟ್ ಮಾಡಲು ಕ್ರಮವಹಿಸಲಾಗಿದೆ. ಇದಕ್ಕೆ ಜಿಲ್ಲಾ ಪಂಚಾಯತಿಗಳಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಅಧಿಕಾರಿಗಳು ಇಡೀ ಜಿಲ್ಲೆಯ ಎಲ್ಲಾ 28 ಕೇಂದ್ರಗಳ ಪರೀಕ್ಷೆಯನ್ನು ವೀಕ್ಷಿಸಿದರು.
ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ
ನಗರದ ನೂತನ ಪರೀಕ್ಷಾ ಕೇಂದ್ರವಾದ ಮದರ್ತೆರೇಸಾ ಪಿಯು ಕಾಲೇಜು ಕೇಂದ್ರದಲ್ಲಿ 2ನೇ ಬಾರಿಗೆ ಪರೀಕ್ಷೆ ನಡೆಯುತ್ತಿದ್ದು, ಅಲ್ಲಿ ಎನ್.ಕೆ.ಮಂಜುನಾಥ್ ಮುಖ್ಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕೇಂದ್ರದಲ್ಲಿ ಪರೀಕ್ಷೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ರೋಸ್ ನೀಡಿ ಪರೀಕ್ಷೆಗೆ ಸ್ವಾಗತಿಸಲಾಯಿತು ಮತ್ತು ಪರೀಕ್ಷೆ ಕುರಿತು ಆತ್ಮಸ್ಥೈರ್ಯ ತುಂಬಲಾಯಿತು.
ಈ ಕುರಿತು ಮಾತನಾಡಿರುವ ಎನ್.ಕೆ.ಮಂಜುನಾಥ್, ಪಿಯುಸಿ ಮಕ್ಕಳಲ್ಲಿ ಪರೀಕ್ಷಾ ಭಯ ಸಾಮಾನ್ಯವಾಗಿದ್ದು, ಅವರಿಗೆ ಹೂ ನೀಡಿ ಹುರಿದುಂಬಿಸಿ ಕಳುಹಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚಲು ಕಾರಣವಾಗುತ್ತದೆ ಜತೆಗೆ ಕೇಂದ್ರದ ಮುಖ್ಯ ದ್ವಾರದಲ್ಲಿ ಮಾವಿನ ತೋರಣ, ಹೂವಿನ ಹಾರಗಳನ್ನು ಕಟ್ಟಿ ಹಬ್ಬದ ಸಂಭ್ರಮದಂತೆ ಮಕ್ಕಳು ಪರೀಕ್ಷೆ ಬರೆಯಲು ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಕುಡಿಯುವ ನೀರು,ಗಾಳಿ, ಬೆಳಕು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ, ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲವಾಗದ ರೀತಿ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರದ ಸುತ್ತಲೂ 144ನೇ ಸೆಕ್ಷನ್ ಅನ್ವಯ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ, ಕೇಂದ್ರದ ಬಳಿಯೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ, ಆರೋಗ್ಯ ಸಿಬ್ಬಂದಿಯೂ ಇದ್ದು, ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮವಹಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ಹಾಜರಿದ್ದರು.

ಚಿತ್ರಶೀರ್ಷಿಕೆ:(ಫೋಟೊ-2ಕೋಲಾರ2);ಕೋಲಾರ ನಗರದ ಮದರ್ತೆರೇಸಾ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಕೇಂದ್ರದ ಮುಖ್ಯ ದ್ವಾರಕ್ಕೆ ಹಸಿರು ತೋರಣ ಹೂಗಳಿಂದ ಅಲಂಕರಿಸಿ ಮಕ್ಕಳು ಪರೀಕ್ಷೆಯನ್ನು ಹಬ್ಬದಂತೆ ಬರೆಯುವ ವಾತಾವರಣ ನಿರ್ಮಿಸಲಾಗಿದೆ.