

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 9&10 ನೇ ತರಗತಿ ವಿದ್ಯಾರ್ಥಿಗಳಿಗೆ ಫ್ಯೂಷನ್ -2025 ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶೋಭಾ ಎಸ್ ಶೆಟ್ಟಿ (ಕ್ಷೇತ್ರಶಿಕ್ಷಣಾಧಿಕಾರಿಗಳು, ಕುಂದಾಪುರ ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅತ್ತ್ಯುತ್ತಮವಾದ ಅವಕಾಶ ಅದೂ ಸಹ ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಗೂ ಮನೋರಂಜನೆ ನೀಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ
ಹತ್ತನೇ ತರಗತಿ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಸಾಕಷ್ಟು ಪೂರ್ವತಯಾರಿಯೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು ತರಗತಿಯಲ್ಲಿ ಶಿಕ್ಷಕರಿಂದ ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಗೆ ಸಿದ್ದರಾಗಬೇಕು ನಿಯಮಿತವಾದ ಆಹಾರವನ್ನು ಸೇವಿಸಬೇಕು ಮತ್ತು ನಿದ್ರೆಬಿಟ್ಟು ಓದಬಾರದು ಟಿವಿ ಮತ್ತು ಮೊಬೈಲ್ಗಳಿಂದ ದೂರವಿರಬೇಕು ಈ ಮೂಲಕ ಉತ್ತಮ ಗುಣಾತ್ಮಕ ಅಂಕಗಳೊಂದಿಗೆ ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಅದೇರೀತಿ ಪಾಲಕ/ ಪೋಷಕರು ಮಕ್ಕಳಿಗೆ ಪರೀಕ್ಷಾಭಯದಿಂದ ಹೊರಬರಲು ಸೂಕ್ತ ಕಲಿಕಾ ವಾತಾವರಣ ಮನೆಯಲ್ಲಿ ನಿರ್ಮಿಸಿ ಆಗಾಗ ಮಕ್ಕಳ ಕಲಿಕಾ ಪ್ರಗತಿಯನ್ನು ಗಮನಿಸುತ್ತಿರಬೇಕು ಎಂದು ಕಿವಿಮಾತು ಹೇಳಿ ಪಾಲಕರ ಜವಾಬ್ಧಾರಿಯನ್ನು ತಿಳಿಸಿದರು
ಒತ್ತಡ ಮುಕ್ತ ವಾತಾವರಣ ನಿರ್ಮಿಸಿ ಕಲಿಕೆಯೊಂದಿಗೆ
ಪಠ್ಯೇತರ ಚಟುವಟಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ತಯಾರಿಗೊಳಿಸಿ ನಿರಂತರವಾಗಿ ಹತ್ತನೇ ತರಗತಿಯಲ್ಲಿ ಗುಣಾತ್ಮಕ ಫಲಿತಾಂಶವನ್ನು ಪಡೆಯುತ್ತಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ
ಈಗಾಗಲೇ ಹತ್ತು ಹಲವು ಪಠ್ಯೇತರ ಚಟುವಟಿಕೆಯಿಂದ ಮನೆಮಾತಾಗಿರುವ ಸಂಸ್ಥೆಯ ಹೆಸರು ಇನ್ನೂ ಎತ್ತರಕ್ಕೆ ಕೊಂಡೋಯ್ಯಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು
ಮುಖ್ಯ ಶಿಕ್ಷಕ ಡಾ. ರವಿದಾಸ್ ಶೆಟ್ಟಿ ಪ್ರಸ್ತಾವನೆಗೈದರು
ಆಡಳಿತ ಮಂಡಳಿಯ ಅಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು
ಫ್ಯೂಷನ್-2025 ವೈವಿದ್ಯಮಯ ಫೆಸ್ಟ್ ನಿರ್ಣಾಯಕರಾಗಿ ಉಪನ್ಯಾಸಕ ಮಂಜುನಾಥ್ ಬಾಯೇರಿ ಮತ್ತು ನೃತ್ಯ ಶಿಕ್ಷಕ ಜಗದೀಶ್ ಬನ್ನಂಜೆ ಕಾರ್ಯನಿರ್ವಹಿಸಿದರು
ಮಿನುಗುತ್ತಿರುವ ಫ್ಯೂಷನ್ ಟ್ರೋಫಿ ಎಸ್ ಎಸ್ ಎಲ್ ಸಿ * ತಂಡ ಸ್ವೀಕರಿಸಿತು , ರನ್ನರ್ಸ್ ಅಪ್ “*9ನೇ ತರಗತಿ” ಯ ಮುಡಿಗೇರಿತು ಇತ್ತಂಡಗಳು ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭೆಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು ಶಿಕ್ಷಕ ರಾಮ ಸ್ವಾಗತಿಸಿ, ವೈಶಾಲಿ ವಂದಿಸಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.





