

ಶ್ರೀನಿವಾಸಪುರ : ವಿದ್ಯಾರ್ಥಿಗಳು ತಾವು ಶಿಕ್ಷಣವನ್ನು ಪಡೆದುಕೊಳ್ಳುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪರರಿಗೆ ಸಹಾಯ ಮಾಡುವ ಯಾವುದೇ ರೀತಿಯ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಪ್ರೊಫೆಷನಲ್ ಎಸ್ ಪಿ ಯಶ್ ಕುಮಾರ್ ಶರ್ಮಾ ಕರೆ ನೀಡಿದರು.
ಪಟ್ಟಣದ ಸಪ್ತಗಿರಿ ಕಾಲೇಜಿನಲ್ಲಿ ಮಂಗಳವಾರ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಬೀಳ್ಕೋಡಿಗೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಪೋಷಕರ ಆಶಯದಂತೆ ತಮ್ಮ ನಿರ್ದಿಷ್ಟ ಗುರಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲೂ ಆಸಕ್ತಿ ವಹಿಸಬೇಕು. ಪರೀಕ್ಷಾ ಸಮಯದಲ್ಲಿ ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ತಾವು ಎಷ್ಟೇ ಉನ್ನತ ವ್ಯಾಸಂಗಕ್ಕೆ ಹೋದರು ತಮ್ಮ ತಂದೆ-ತಾಯಿಗಳ ಹಾಗೂ ಒಡನಾಡಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ತಿಳಿಸಿದರು.
ಕಾಲೇಜು ಸಂಸ್ಥಾಪಕ ಪೆದ್ದನ್ನ ಮಾತನಾಡಿ ಉತ್ತಮ ಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವ ಸಲುವಾಗಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಖಾಸಗಿ ಕಾಲೇಜನ್ನು ಸ್ಥಾಪಿಸಲಾಯಿತು. ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರು ಉತ್ತಮ ಅನುಭವವನ್ನು ಪಡೆದುಕೊಂಡು ತಮ್ಮ ಸ್ವಂತ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ. ಸಾಧಾರಣ ಶಿಕ್ಷಣ ಕುಟುಂಬದಿAದ ಬೆಳೆದು ಬಂದ ಇನ್ಪೋಸಿಸ್ ನಾರಾಯಣ ಮೂರ್ತಿ ಇಂದು ಜಗತ್ತಿನ ಅತಿ ದೊಡ್ಡ ಸಾಫ್ಟ್ ವೇರ್ ಕಂಪನಿಯನ್ನ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಬಿಕಾಂ ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ ಹಾಗೂ ಅವರ ತಂದೆ ತಾಯಿಯರನ್ನು ಸನ್ಮಾನಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲ ಎನ್ ರಮೇಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟೀಕೆ ಮಂಜುನಾಥ್ ರೆಡ್ಡಿ, ನಿವೃತ್ತ ಪ್ರಾಂಶುಪಾಲ ಚಲಪತಿ, ನಿವೃತ್ತ ಮುಖ್ಯ ಶಿಕ್ಷಕ ಟಿ ಎಂ ರಾಮಕೃಷ್ಣೇಗೌಡ, ಆರ್ ಕೆ ವಿದ್ಯಾಸಂಸ್ಥೆಗಳ ಆಡಳಿತ ಅಧಿಕಾರಿ ಪ್ರಸಾದ್, ಹಿರಿಯ ಆಂಗ್ಲ ಉಪನ್ಯಾಸಕ ಶ್ರೀನಿವಾಸ್, ಹಿರಿಯ ಹಿಂದಿ ಉಪನ್ಯಾಸಕ ರಿಯಾಜ್, ಜೆ.ಟಿ.ಶಂಕರಪ್ಪ, ಎ.ಸಿ.ನಾಗರಾಜ್ ಉಪಸ್ಥಿತರಿದ್ದರು.