

ಕುಂದಾಪುರ: ಫೆಬ್ರುವರಿ 21, 22, ಮತ್ತು 23, 2025ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಐಕ್ಯೂಎಸಿ. ಇವರು ಸಹಯೋಗದಲ್ಲಿ ಆಯೋಜಿಸಿದ “ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನದಲ್ಲಿ ಫೆಬ್ರವರಿ 21 ರಂದು ವಿವಿಧ ದತ್ತಿ ಉಪನ್ಯಾಸಗಳನ್ನು ಪ್ರೊ. ಎಮ್.ಎನ್.ಶ್ರೀನಿವಾಸ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಶ್ವತ್ಥನಾರಾಯಣ ವಹಿಸಿದ್ದರು.
ಪ್ರೊಎಸ್.ಶೆಟ್ಟರ್ ದತ್ತಿನಿಧಿ ಉಪನ್ಯಾಸದಲ್ಲಿ ಉಪನ್ಯಾಸದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ದೆಹಲಿ ವಿಶ್ವವಿದ್ಯಾಲನಿಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಅಧಿವೇಶನದ ಸರ್ವಾಧ್ಯಕ್ಷರಾದ ಡಾ.ಕೇಶವನ್ ವೆಳುತ್ತಾಟ್ ಅವರು “ವೆನ್ ಎ ಹಿಸ್ಟ್ರಿಯೋಗ್ರಫಿ ಲೀಡ್ಸ್ ಪೋಯಟ್ರಿ: ಎ ಟ್ರಿಬ್ಯೂಟ್ ಟು ಪ್ರೊ.ಎಸ್.ಶೆಟ್ಟರ್” ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರೊ.ಎಲ್.ಪಿ.ರಾಜು ದತ್ತಿನಿಧಿ ಉಪನ್ಯಾಸದಲ್ಲಿ ಎಮ್.ಜಿ.ಎಮ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯಕ್ “ತುಳುನಾಡಿನ ಬುಡಕಟ್ಟು ದೈವಗಳು, ಆಧುನಿಕ ಮುಖಾಮುಖಿ” ಕುರಿತು ಮಾತನಾಡಿದರು.
ಪ್ರೊ.ಈರಣ್ಣ ಪತ್ತಾರ್ ದತ್ತಿನಿಧಿ ಉಪನ್ಯಾಸದಲ್ಲಿ ಮಂಗಳೂರಿನ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಗೌಡ “ಉತ್ತರ ಕನ್ನಡ ಜಿಲ್ಲೆಯ ಶಾಸನಗಳು: ಇತಿಹಾಸ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು.
ಭಂಡಾರ್ಕಾರ್ಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.
ಫೆಬ್ರವರಿ 22ರಂದು ನಡೆದ ದತ್ತಿನಿಧಿ ಉಪನ್ಯಾಸಗಳ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ತ್ರಿವೇಣಿ ಅರಸ್ ವಹಿಸಿದ್ದರು.
ಪ್ರೊ.ಎಸ್.ರಾಜಶೇಖರ ದತ್ತಿನಿಧಿ ಉಪನ್ಯಾಸದಲ್ಲಿ “ದಿ| ವಿ.ಟಿ ರಾಜಶೇಖರ – ದಲಿತ ಧ್ವನಿ” ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ.ಜೆ.ಸೋಮಶೇಖರ ಉಪನ್ಯಾಸ ನೀಡಿದರು.
ಪ್ರೊ.ಶಿವರುದ್ರ ಕಲ್ಲೋಳಿಕರ್ ದತ್ತಿನಿಧಿ ಉಪನ್ಯಾಸದಲ್ಲಿ “ದ ಕಾಂಟ್ರಿಬ್ಯೂಷನ್ ಆಫ್ ಕುದ್ಮಲ್ ರಂಗರಾವ್: ಎಸ್ ಅ ಸೋಶಿಯಲ್ ರಿಫಾರ್ಮರ್ ಆಫ್ ಮಾಡರ್ನ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ನಿರ್ಮಲ್ ರಾಜು ಉಪನ್ಯಾಸ ನೀಡಿದರು.
ಪ್ರೊ ಎಸ್ ನಾಗರತ್ನಮ್ಮ ದತ್ತಿನಿಧಿ ಉಪನ್ಯಾಸದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಮೋನಾ ಮೆಂಡೊನ್ಸಾ ಅವರು ” ಲೈಫ್ ಅಂಡ್ ಟೈಮ್ಸ್ ಆಫ್ ಉಮಾಬಾಯಿ ಕುಂದಾಪುರ” ಎಂಬ ವಿಷಯದ ಕುರಿತು ಮಾತನಾಡಿದರು.
