

ಕುಂದಾಪುರ: ಇತಿಹಾಸ ಅರ್ಥ ಆಗಬೇಕಾದರೆ ಅದರ ಮೂಲ ಸ್ವರೂಪವನ್ನು ತಿಳಿಸುವ ಪ್ರಯತ್ನವಾಗಬೇಕು ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟರು .
ಅವರು ಫೆಬ್ರುವರಿ 21, 22, ಮತ್ತು 23, 2025ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಐಕ್ಯೂಎಸಿ. ಇವರು ಸಹಯೋಗದಲ್ಲಿ ಆಯೋಜಿಸಿದ ” ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಆಗಬೇಕಾಗಿದೆ. ನಮ್ಮ ಐತಿಹಾಸಿಕ ದಾಖಲೆಗಳು ಪರಂಪರೆ, ಸಂಸ್ಕೃತಿ ಮತ್ತು ವಾಸ್ತು ಶಿಲ್ಪಗಳ ಮಹತ್ವವನ್ನು ಕುರಿತು ವಿಶೇಷ ಅಧ್ಯಯನಗಳ ಅವಶ್ಯಕತೆ ಇದೆ. ಇತಿಹಾಸವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಅರಿತು ಆ ನೆಲೆಯಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.
ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ ಸರ್ವಾಧ್ಯಕ್ಷರಾಗಿರುವ ಮಂಗಳೂರು ಮತ್ತು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೇಶವನ್ ವೇಳುತ್ತಾಟ್ ಮಾತನಾಡಿ
ದೇಶದಲ್ಲಿ ಪ್ರಾದೇಶಿಕ ನೆಲೆಯ ಐತಿಹಾಸಿಕ ನೆಲೆಯ ವೈಶಿಷ್ಟ್ಯತೆಯನ್ನು ಹೊಂದಿದೆ. ಇದು ಸ್ವಾತಂತ್ರ್ಯದ ನಂತರದ ಕಡ್ಡಾಯ ಎಂದು ಹೇಳುವುದು ಸತ್ಯ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಾದೇಶಿಕ ಇತಿಹಾಸದ ಇತಿಹಾಸವು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಗಮನಿಸಬೇಕು. ಭಾರತೀಯ ಇತಿಹಾಸಕಾರರು 19ನೇ ಮತ್ತು 20ನೇ ಶತಮಾನದ ಆರಂಭದ ಸಾಮ್ರಾಜ್ಯಶಾಹಿ ಬರಹಗಳಿಗೆ ಪ್ರತಿಕ್ರಿಯೆಯಾಗಿ ಸ್ಪಷ್ಟವಾದ ರಾಷ್ಟ್ರೀಯವಾದಿ ಪೂರ್ವಾಗ್ರಹಗಳೊಂದಿಗೆ ಇತಿಹಾಸವನ್ನು ಬರೆದಾಗ, ಅವರು ತಮ್ಮ ಬರಹಗಳಿಗೆ ಪೂರಕವಾಗಿ ಪ್ರದೇಶಗಳ ಇತಿಹಾಸವನ್ನು ಸಹ ಬರೆದರು. ರಾಷ್ಟ್ರೀಯತೆಯನ್ನು ಗಮನದಲ್ಲಿರಿಸಿಕೊಂಡು ಬೇರೆ ಬೇರೆ ಪ್ರದೇಶಗಳ ಇತಿಹಾಸದ ಬಗ್ಗೆ ಮುತುವರ್ಜಿ ವಹಿಸಿದ್ದರು ಎಂಬುದನ್ನು ಅವರು ಬರವಣಿಗೆಯಲ್ಲಿ ನೋಡುತ್ತೇವೆ. ನಿಜ, ಈ ಬರಹಗಳಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಎರಡರಲ್ಲೂ ಒಂದು ಅರ್ಥವನ್ನು ಬೆಳೆಸುವಲ್ಲಿ ಇದು ಹೇಗೆ ಬೆಳೆದಿದೆ ಮತ್ತು ಸಹಾಯಕವಾಗಿದೆ ಎಂಬುದನ್ನು ಗಮನಿಸುತ್ತೇವೆ.
ಆದಾಗ್ಯೂ, ಹೆಚ್ಚಿನ ಆಸಕ್ತಿಯೆಂದರೆ, “ಭಾರತೀಯ ಇತಿಹಾಸದಲ್ಲಿ ಪ್ರದೇಶಗಳು ಯಾವಾಗ ಪ್ರಬುದ್ಧತೆಯನ್ನು ತಲುಪುತ್ತವೆ?” ಎಂಬ ಪ್ರಶ್ನೆ. ಭಾರತೀಯ ಇತಿಹಾಸಲೇಖನದಲ್ಲಿ ಒಂದು ಫ್ಯಾಷನ್ ಇತ್ತು, ಅದು ಬಿಲಿಯರ್ಡ್ಸ್ ಮಾದರಿಯಲ್ಲಿ ನಂಬಿಕೆ ಇಟ್ಟಂತೆ ತೋರುತ್ತಿತ್ತು. ಅದರಂತೆ, ಮೌರ್ಯ ಸಾಮ್ರಾಜ್ಯ ಅಥವಾ ಗುಪ್ತ ಸಾಮ್ರಾಜ್ಯ ಅಥವಾ ಮೊಘಲ್ ಸಾಮ್ರಾಜ್ಯದ ಅಡಿಯಲ್ಲಿ ಎಲ್ಲವೂ ಒಮ್ಮೆ ಕೇಂದ್ರೀಕೃತವಾಗಿದ್ದವು. ಪ್ರದೇಶಗಳು ಆಯಾ ಪ್ರದೇಶವಾರು ತಮ್ಮ ಸ್ಥಾನಗಳನ್ನು ಪಡೆದುಕೊಂಡವು. ಪರ್ಯಾಯ ದೃಷ್ಟಿಕೋನದ ನೆಲೆಯಲ್ಲಿ ನೋಡುವುದಾದರೆ ಪ್ರದೇಶಗಳ ಬೆಳವಣಿಗೆಯ ಪ್ರಕ್ರಿಯೆಯನ್ನು ಸೂಯಿ ಜನರಿಸ್ ಎಂದು ನೋಡುವುದು. ಇತ್ತೀಚಿನ ವರ್ಷಗಳಲ್ಲಿ ಮನವೊಪ್ಪಿಸುವ ವಾದಗಳಲ್ಲಿ ಒಂದು ಪ್ರದೇಶಗಳ ಹೊರಹೊಮ್ಮುವಿಕೆಯನ್ನು ಅದರ ಎಲ್ಲಾ ವ್ಯಾಖ್ಯಾನಿಸುವ ವೈಶಿಷ್ಟ್ಯಗಳೊಂದಿಗೆ ಭಾರತೀಯ ಇತಿಹಾಸದ ಆರಂಭಿಕ ಮಧ್ಯಕಾಲೀನ ಹಂತದೊಂದಿಗೆ ಜೋಡಿಸುವುದು. ಆರ್ಥಿಕತೆ, ಸಮಾಜ, ರಾಜಕೀಯ, ಭಾಷೆ, ಸಾಹಿತ್ಯ, ಕಲಾತ್ಮಕ ಶೈಲಿ, ಶಿಲ್ಪಕಲೆ, ವಾಸ್ತುಶಿಲ್ಪ – ಬಹುತೇಕ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರದೇಶಗಳು ಸಾಮಾನ್ಯ ಯುಗದ ಮೊದಲ ಸಹಸ್ರಮಾನದ ದ್ವಿತೀಯಾರ್ಧದಲ್ಲಿ ಸರಿಸುಮಾರು ಪ್ರಬುದ್ಧತೆಯನ್ನು ತಲುಪಲು ಪ್ರಾರಂಭಿಸುತ್ತವೆ, ಇಲ್ಲಿ ಅಥವಾ ಅಲ್ಲಿ ಒಂದೆರಡು ಶತಮಾನಗಳನ್ನು ನೀಡುತ್ತವೆ ಅಥವಾ ತೆಗೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಭಾರತದ ವಿದ್ವಾಂಸರು ಮಹತ್ವದ ಕೆಲಸವು ಈ ಬದಲಾದ ದೃಷ್ಟಿಕೋನಕ್ಕೆ ಗಣನೀಯವಾಗಿ ಕೊಡುಗೆ ನೀಡಿದೆ ಎಂದು ಹೇಳಿದರು.
ಇಲ್ಲಿ ಪ್ರಶ್ನೆ, ಅಂದರೆ, “ಪ್ರದೇಶದಿಂದ ನಾವು ನಿಖರವಾಗಿ ಏನು ಅರ್ಥೈಸುತ್ತೇವೆ?” ಆಯಾ ಭಾಗಗಳು ತಮ್ಮ ವೈಶಿಷ್ಟ್ಯಗಳಲ್ಲಿ ಬದಲಾಗುತ್ತವೆ ಅದಕ್ಕೆ ತಕ್ಕಂತೆ ಆಯಾ ಪ್ರದೇಶದ ಐತಿಹಾಸಿಕ ಪ್ರದೇಶಗಳ ಅಧ್ಯಯನದಲ್ಲಿ ಗಾತ್ರ, ಗಡಿ, ಘಟಕಗಳು ಮತ್ತು ಹೀಗೆ ಹತ್ತು ಹಲವು ಸಂಗತಿಗಳಿವೆ ಮತ್ತು ಅವು ವಿಭಿನ್ನ ನೆಲೆಗಳನ್ನು ಹೊಂದಿವೆ.ನನ್ನ ಸ್ವಂತ ತವರು ರಾಜ್ಯವಾದ ಕೇರಳದ ಉದಾಹರಣೆಯನ್ನು ತೆಗೆದುಕೊಳ್ಳಲು, ಇತಿಹಾಸದಲ್ಲಿ ಕೇರಳವನ್ನು ಮೂರು ರೀತಿಯಲ್ಲಿ ನಿರ್ಮಿಸಲಾಗಿದೆ. ಅಲ್ಲಿನ ಸಂಸ್ಕೃತಿ ಸಾಮಾಜಿಕ ಐತಿಹಾಸಿಕ ಅಂಶಗಳಲ್ಲಿ ವಿಭಿನ್ನ ಎಂದು ತಿಳಿಯಬಹುದು. ಹಾಗೆ ಕರ್ನಾಟಕದ ಇತಿಹಾಸವನ್ನು ಭಿನ್ನ ರೀತಿಯಲ್ಲಿ ತಿಳಿಯಬಹುದಾಗಿದೆ. ಒಟ್ಟಿನಲ್ಲಿ ಇತಿಹಾಸವು ಹಲವು ಸಂಗತಿಗಳಿವೆ ಸ್ಥಿತ್ಯಂತರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯ ಮಾನ್ಯ ಕುಲಪತಿ ಡಾ ಎಸ್.ಎಮ್ ಜಯಕಾರ ಶೆಟ್ಟಿ ಮಾತನಾಡಿ ಭಂಡಾರ್ಕಾರ್ಸ್ ಕಾಲೇಜು ಈ ದೇಶಕ್ಕೆ ಮತ್ತು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಇಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ರಾಜ್ಯ ದೇಶ ವಿದೇಶಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬಹಳಷ್ಟು ಸಾಧಕರನ್ನು ಈ ಕಾಲೇಜು ನೀಡಿದೆ. ಅಲ್ಲದೆ ಇಂದು ಸನ್ಮಾನ ಸ್ವೀಕರಿಸಿದ ಸಾಧಕರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ದೇಶ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ಈ ಕಾಲಘಟ್ಟದಲ್ಲಿ ಕೌಶಲ್ಯ ಮತ್ತು ಕೈಗಾರಿಕಾ ವಲಯ ಆಧಾರಿತ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು. ಕರ್ನಾಟಕ ಇತಿಹಾಸ ಪರಿಷತ್ತು 34ನೇ ಅಧಿವೇಶನದ ಸರ್ವಾಧ್ಯಕ್ಷರಾದ ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾಅಶ್ವಥನಾರಾಯಣ ಗುಲಾಬಿ ಹೂವು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು ಮತ್ತು 34 ನೇ ಅಧಿವೇಶನದ ಜರ್ನಲ್ ಬಿಡುಗಡೆಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ಎಸ್ ರಾಜಶೇಖರ್ ಅವರು ಡಾ.ವಾಸುದೇವ ಬಡಿಗೇರ ಮತ್ತು ಡಾ.ಗಂಗಾಧರ ದೈವಜ್ಞ ವಿರಚಿತ “ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಮತ್ತು ಆರಾಧನಾ ಪರಂಪರೆ” ಡಾ.ಶಿವಾನಂದ ಆರ್ ನಾಗಣ್ಣನವರ ವಿರಚಿತ “ಕರ್ನಾಟಕದಲ್ಲಿ ಶೈವ ಧರ್ಮದ ಬೆಳವಣಿಗೆ” ಮತ್ತು “ಶೈವಾವಲೋಕನ” ಡಾ.ಮೋಹನ್ ವಿರಚಿತ “ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ” , ಪ್ರೊ. ನಾಗರತ್ನಮ್ಮ ವಿರಚಿತ “ಕೋಲಾರ ಜಿಲ್ಲೆ ಸ್ವಾತಂತ್ರ್ಯ ಚಳುವಳಿ”, ಡಾ.ಅನಿತಾ ವಿರಚಿತ “ಜೀವಜಲ” ಮತ್ತು
ಡಾ. ಎಸ್.ಕೆ.ಅರುಡಿ ವಿರಚಿತ “ಸೃಜನಿ” ಪುಸ್ತಕಗಳನ್ನು ಬಿಡುಗಡೆ ಗೊಳಿಸಿದರು.
34, ನೇ ಅಧಿವೇಶನದ ಪ್ರೊಸೀಡಿಂಗ್ಸ್ ಸಂಪಾದಕೀಯ ಮಂಡಳಿಯ ಸದಸ್ಯರಾದ ಡಾ.ಈರಣ್ಣ ಪತ್ತಾರ, ಡಾ.ವಾಸುದೇವ ಬಡಿಗೇರ, ಡಾ.ಎನ್.ವಿ.ಅಸ್ಕಿ, ಡಾ.ಟಿ.ಶ್ರೀನಿವಾಸ ರೆಡ್ಡಿ ಅವರನ್ನು ಗೌರವಿಸಲಾಯಿತು.
ಡಾ.ವಾಸುದೇವ ಬಡಿಗೇರ ಅವರಿಗೆ “ರಾಜರ್ಷಿ ವೀರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ.ಆರ್.ಎಎನ್.ಷಡಕ್ಷರಯ್ಯ ಅವರಿಗೆ ಡಾ.ಬಿ.ಷೇಕ್ ಅಲಿ ಪ್ರಶಸ್ತಿ ಎಸ್.ಕೆ.ಅರುಡಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ.ಎಮ್.ಎಸ್.ಅನಿತಾ ಅವರಿಗೆ ಒನಕೆ ಓಬವ್ವ ಪ್ರಶಸ್ತಿ, ಡಾ.ಮುಸ್ತಾಕ್ ಅಹಮದ್ ಅಬ್ದುಲ್ ರಜಾಕ್ ಅವರಿಗೆ ಕುಂದಣ ಪ್ರಶಸ್ತಿ ಹಾಗೂ ವಿನಯ್ ಕುಮಾರ್ ಅವರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ್ ಪ್ರಸಾದ್, ಎ.ಎಸ್ಐ ಧಾರವಾಡ ವಲಯದ ಅಧೀಕ್ಷಕ ಪುರಾತತ್ವಜ್ಞರಾದ ರಮೇಶ್ ಮೂಲಿಮನಿ, ಬೆಂಗಳೂರು ವಲಯದ ಬಿಪಿನ್ ಚಂದ್ರ, ಕರ್ನಾಟಕ ಇತಿಹಾಸ ಪರಿಷತ್ತು ಉಪಾಧ್ಯಕ್ಷೆ ಪ್ರೊ.ಎಸ್. ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಡಾ.ಈರಣ್ಣ ಪತ್ತಾರ, ಜಂಟಿ ಕಾರ್ಯದರ್ಶಿ, ಡಾ.ವಾಸುದೇವ ಬಡಿಗೇರ, ಡಾ.ಟಿ.ಶ್ರೀನಿವಾಸ ರೆಡ್ಡಿ ನೇಗಿ, ಖಜಾಂಚಿ ಡಾ.ಎನ್.ವಿ.ಅಸ್ಕಿ, ಜಂಟಿ ಕಾರ್ಯದರ್ಶಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಕರ್ನಾಟಕ ಇತಿಹಾಸ ಪರಿಷತ್ತು ಇದರ ಅಧ್ಯಕ್ಷ ಪ್ರೊ. ಆರ್.ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು.


















