![](https://jananudi.com/wp-content/uploads/2025/02/Screenshot-946-4.png)
![](https://jananudi.com/wp-content/uploads/2025/02/basavasri-collegge-2.jpg)
ಕೋಲಾರ,ಫೆ.12: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತರ ಕೇಂದ್ರ ಮಂಗಸಂದ್ರ ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಬಸವಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಹಾಗೂ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಕೋಲಾರ್ ಸಹಯೋಗದೊಂದಿಗೆ ಮಾದಕ ವಸ್ತುಗಳ ವ್ಯಸನ ಮತ್ತು ಎಚ್.ಐ.ವಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಶಿವರಾಜ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಪ್ರಸ್ತುತದಲ್ಲಿ ಯುವಕರ ಪೀಳಿಗೆಯ ಬಗ್ಗೆ ಯುವಕರು ದುಚ್ಚಟಗಳಿಗೆ ಒಳಗಾಗಿದ್ದು, ದುಶ್ಚಟಗಳಿಂದ ಹೊರಬರಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.
ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಐಡಿಯು ಟಿ ಐ ಆಪ್ತ ಸಮಾಲೋಚಕಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲಕ್ಷ್ಮಿ ಮಾತನಾಡಿ, ಎಚ್.ಐ.ವಿ ಮೊದಲು ನಮ್ಮ ಭಾರತದಲ್ಲಿ ಎಲ್ಲಿ ಬಂತು ನಂತರ ಕರ್ನಾಟಕದಲ್ಲಿ ಎಲ್ಲಿ ಬಂತು, ನಂತರ ಎಚ್.ಐ.ವಿ ಹರಡುವ ವಿಧಾನಗಳ ಬಗ್ಗೆ ಹಾಗೂ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮತ್ತು ಯುವತಿಯರಲ್ಲಿ ಮಾದಕ ಪದಾರ್ಥಗಳನ್ನು ತೆಗೆದುಕೊಳ್ಳಲು ದಾಸರಾಗಿರುತ್ತಾರೆ ಇದಕ್ಕೆ ದಾಸರಾಗಲು ಕಾರಣ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಒಮ್ಮೆ ದುಚಟಕ್ಕೆ ಒಳಗಾದರೆ ಹೊರಗೆ ಬರಲು ತುಂಬಾ ಕಷ್ಟಕರವಾಗಿರುತ್ತದೆ. ದುಶ್ಚಟಕ್ಕೆ ಒಳಗಾದರೆ ಅದರಿಂದ ಆಗುವ ಪರಿಣಾಮ ತನ್ನಷ್ಟಕ್ಕೆ ತಾನೇ ಅವರ ಸ್ಥಿತಿಯನ್ನು ಕಳೆದುಕೊಳ್ಳುತ್ತಾರೆ ಅವರ ಮೆದುಳಿನ ಚಲನ ಶಕ್ತಿ ದಿನದಿಂದ ದಿನಕ್ಕೆ ಕುಗ್ಗುತ್ತದೆ ಕೆಲಸ ಮಾಡಲು ಆಗುವುದಿಲ್ಲ ಬಡತನಕ್ಕೆ ಒಳಗಾಗುತ್ತಾರೆ ಕುಟುಂಬ ಬೀದಿಗೆ ಬರುತ್ತದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಜೀವಿಸಲು ಆಗುವುದಿಲ್ಲ ಇತರರ ಹಾಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಜೀವಿಸಲು ಕಷ್ಟಕರವಾಗಿರುತ್ತದೆ. ಈಗಿನ ಯುವಕರು ಮುಂದೆ ಹಿರಿಯರಾಗುತ್ತಾರೆ ಹಾಗಾಗಿ ದುಶ್ಚಟಗಳಿಂದ ಹೊರಗೆ ಬಂದು ಸಮಾಜದಲ್ಲಿ ಒಳ್ಳೆಯ ಜೀವನವನ್ನು ನಡೆಸಿ ನಿಮ್ಮ ಕಿರಿಯರಿಗೆ ಮಾರ್ಗದರ್ಶಕರಾಗಿ ಎಂದರು.
ಜೊತೆಗೆ ಬಸವ ಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಉಪನ್ಯಾಸಕ ಜಗದೀಶ್ ಯುವಜನತೆಯ ಬಗ್ಗೆ ಮಾತನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಮಹಾಲಕ್ಷ್ಮಿ ಜಿ, ಮಲ್ಲಿಕಾ ಬಿ.ಎಂ, ಜ್ಯೋತಿಕಾ ಬಿ, ಅನಿತಾ ಕೆ.ಎನ್ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.
![](https://jananudi.com/wp-content/uploads/2025/02/basavasri-collegge-1.jpg)