![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/IMG-20250211-WA0042.jpg)
ಶ್ರೀನಿವಾಸಪುರ : ಪಟ್ಟಣದಲ್ಲಿ ಈಗಾಗಲೇ ಇಬ್ಬರುಮೂವ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, ಪುರಸಭೆವತಿಯಿಂದ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಮೂರು ಬಾರಿ ಟೆಂಡರ್ ಕರೆಯಲಾಗಿತ್ತು . ಬೀದಿ ನಾಯಿಗಳನ್ನು ಹಿಡಿದು ಜನ ಇಲ್ಲದ ಜಾಗಗಳಲ್ಲಿ ಆಗಲಿ, ಬೆಟ್ಟಗುಡ್ಡಗಳಲ್ಲಿ ಬಿಡಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರವು ಒಪ್ಪುವುದಿಲ್ಲ. ಸಧ್ಯ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ನಾಯಿಗಳ ಸಂಖ್ಯೆಯನ್ನು ತಡೆಹಿಡಿಯುವುದು ಒಂದೇ ದಾರಿ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ತಿಳಿಸಿದರು .
ಪಟ್ಟಣದ ಪುರಸಬೆ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಈಗಾಗಲೇ ಮಾಲೂರು ಪುರಸಭೆಯಲ್ಲಿ ನಾಯಿಗಳನ್ನು ಹಿಡಿಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅದರಂತೆ ಮಾಲೂರು ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
ರಾಜಾಜಿ, ರಾಮಕೃಷ್ಣ ಬಡವಾಣೆ ಮುಖ್ಯ ರಸ್ತೆಗಳಲ್ಲಿ ಕೆಲವುರು ಬೀದಿಗಳಲ್ಲಿನ ಪುಟ್ಪಾತ್ ಮೇಲೆ ವ್ಯಾಪಾರ ವಹಿವಾಟು ಮಾಡುವುದರಿಂದ ಸಾರ್ವಜನಿಕರು ಓಡಾಡುವುದಕ್ಕೆ ಹಾಗು ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಯಾವುದೇ ಕಾರಣಕ್ಕೂ ಪುಟ್ಪಾತ್ನಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಕಟ್ಟನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಪುರಸಭೆ ಸಿಬ್ಬಂದಿ ಹಾಗು ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.
15 ಕೋಟಿ ಹಣಕ್ಕೆ ಟೆಂಡರ್ ಕರೆದು ಅದರ ಮೂಲಕ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುವುದು . ಇದೇ ಸಮಯಲ್ಲಿ ರಾಜಾಜಿ, ರಾಮಕೃಷ್ಣ ಬಡವಾಣೆಯ ಮುಖ್ಯ ರಸ್ತೆಯಲ್ಲಿನ ಅಂಗಡಿಗಳು ಮಾಲಿಕರು ಪುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವವರನ್ನು ಕಾರ್ಯಾಚರಣೆ ನಡೆಸಿದರು.
ಒಟ್ಟಿನಲ್ಲಿ ನಮ್ಮ ಉದ್ದೇಶ ಪಟ್ಟಣವನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದ್ದು ಸಾರ್ವಜನಿಕರು ಸ್ವಚ್ಚತೆ, ನೈರ್ಮಲ್ಯ ಕಾಪಾಡಲು ಸಹಕಾರ ನೀಡುವಂತೆ ಮನವಿ ಮಾಡಿದರು. ಮುಖ್ಯಾಧಿಕಾರಿ ವಿ.ನಾಗರಾಜ್ ಇದ್ದರು.