![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/IMG-20250210-WA0032.jpg)
ಶ್ರೀನಿವಾಸಪುರ : ಈಗಾಗಲೇ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಅ.10. 2024 ರಂದು ನಡೆದ ಸಭೆಯಲ್ಲಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು ಆದರೆ ಇದುವೆರಗೂ ಬೇಡಿಕೆ ಈಡೇರದ ಕಾರಣ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಅಧ್ಯಕ್ಷ ಎಂ.ಎನ್.ಶಂಕರ್ ಮಾಹಿತಿ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ತಮ್ಮ ಯಾವುದೇ ಬೇಡಿಕಗಳನ್ನು ಈಡೇರಿಸದ ಕಾರಣ 2ನೇ ಹಂತದ ಅನಿರ್ಧಿಷ್ಟಾವಧಿ ಕಪ್ಪು ಬಟ್ಟೆ ಧರಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.
ತಮ್ಮ ಹತ್ತು ಹಲವಾರು ಬೇಡಿಕೆಗಳನ್ನು ಇಲಾಖೆಯ ಗಮನಕ್ಕೆ ತರುವಂತೆ ನ.9. 2024ರಂದು ಮನವಿಯನ್ನು ಸಲ್ಲಿಸಲಾಗಿತ್ತು . ಆದರೆ ಇದುವೆರೆಗೂ ಬೇಡಿಕೆಗಳು ಈಡೇರಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಈ ಒಂದು ಹಿನ್ನೆಲೆಯಲ್ಲಿ 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತಮ್ಮ ಬೇಡಿಕೆಗಳನ್ನು ಇಲಾಖೆ ಗಮನಕ್ಕೆ ತರುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಎನ್.ಮುರಳಿ, ಕಾರ್ಯದರ್ಶಿ ಹರೀಶ್ ಮುರಳಿ, ಖಾಜಾಂಚಿ ಆದರ್ಶ ಹಾಗು ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.